ನಟಿ ಭಾವನಾ ರಾಮಣ್ಣ ಪುತ್ರಿಯ ನಾಮಕರಣ, ಮಗಳಿಗೆ ಅಜ್ಜಿಯ ಹೆಸರು: ಚಿತ್ರಗಳ ನೋಡಿ

Updated on: Mar 21, 2026 | 7:07 PM

Bhavana Ramanna: ನಟಿ ಭಾವನಾ ರಾಮಣ್ಣ ಐವಿಎಫ್ ಪದ್ಧತಿ​ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಪದ್ಧತಿ ಅನುಸರಿಸಿದ ಕಾರಣ ಭಾವನಾ ರಾಮಣ್ಣ ತಾಯಿ ಆಗಿದ್ದು ಸಖತ್ ಸುದ್ದಿ ಆಗಿತ್ತು. ಇಂದು (ಮಾರ್ಚ್ 21) ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೆಲ ಆಪ್ತರ ಹಾಜರಿಯಲ್ಲಿ ನಾಮಕರಣ ಮಹೋತ್ಸವ ನಡೆದಿದ್ದು, ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ.

1 / 5
ಭಾವನಾ ರಾಮಣ್ಣ ಅವರ ಅಜ್ಜಿಯ ಹೆಸರು ರುಕ್ಮಿಣಿ ಅಂತೆ. ಅದರಂತೆ ಭಾವನಾ ಅವರು ತಮ್ಮ ಮುದ್ದಾದ ಮಗಳಿಗೆ ರುಕ್ಮಿಣಿ ಎಂದೇ ಹೆಸರಿಟ್ಟಿದ್ದಾರೆ.

ಭಾವನಾ ರಾಮಣ್ಣ ಅವರ ಅಜ್ಜಿಯ ಹೆಸರು ರುಕ್ಮಿಣಿ ಅಂತೆ. ಅದರಂತೆ ಭಾವನಾ ಅವರು ತಮ್ಮ ಮುದ್ದಾದ ಮಗಳಿಗೆ ರುಕ್ಮಿಣಿ ಎಂದೇ ಹೆಸರಿಟ್ಟಿದ್ದಾರೆ.

2 / 5

ಭಾವನಾ ರಾಮಣ್ಣ ಅವರು ಎಂಟು ತಿಂಗಳ ಗರ್ಭಿಣಿ ಆಗಿದ್ದಾಗ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಈ ವೇಳೆ ಒಂದು ಮಗು ತೀರಿಕೊಂಡು ಒಂದು ಮಗು ಮಾತ್ರವೇ ಜನಿಸಿತು. ಅದೇ ಮಗುವಿಗೆ ಈಗ ನಾಮಕರಣ ಮಾಡಲಾಗಿದೆ.

3 / 5

ಇಂದು (ಮಾರ್ಚ್ 21) ಭಾವನಾ ರಾಮಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೆಲ ಆಪ್ತರ ಹಾಜರಿಯಲ್ಲಿ ನಾಮಕರಣ ಮಹೋತ್ಸವ ನಡೆದಿದ್ದು, ಮಗಳಿಗೆ ಅಜ್ಜಿಯ ಹೆಸರಿಟ್ಟಿದ್ದಾರೆ.

4 / 5

ತಾಯಿ ಆಗಬೇಕೆಂಬ ಅದಮ್ಯ ಆಸೆಯಿಂದ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿ ಆಗಿದ್ದಾರೆ. ಈ ಹಿಂದೆ ತಮ್ಮ ಈ ನಿರ್ಧಾರದ ಬಗ್​ಗೆ ಹೆಮ್ಮೆಯಿಂದ ಮಾತನಾಡಿದ್ದರು ನಟಿ ಭಾವನಾ.

5 / 5

ನಟಿ ಭಾವನಾ ರಾಮಣ್ಣ ಐವಿಎಫ್ ಪದ್ಧತಿ​ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಐವಿಎಫ್ ಪದ್ಧತಿ ಅನುಸರಿಸಿದ ಕಾರಣ ಭಾವನಾ ರಾಮಣ್ಣ ತಾಯಿ ಆಗಿದ್ದು ಸಖತ್ ಸುದ್ದಿ ಆಗಿತ್ತು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us