ಉಜನಿ, ವೀರ್ ಡ್ಯಾಂಗಳಿಂದ ಭೀಮಾ ನದಿಗೆ ನೀರು ಬಿಡುಗಡೆ: ವಿಜಯಪುರದ ಚಡಚಣ, ಇಂಡಿ, ಆಲಮೇಲದಲ್ಲಿ ಪ್ರವಾಹದ ಆತಂಕ

| Updated By: Ganapathi Sharma

Updated on: Aug 06, 2024 | 11:54 AM

ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಭೀಮಾನದಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ಇಂಡಿ ಆಲಮೇಲ ಹಾಗೂ ಸಿಂದಗಿ ತಾಲೂಕಿನ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ.

1 / 5
ಭೀಮಾನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರದಲ್ಲಿರುವ 8 ಬಾಂದಾರ್ ಕಂ ಬ್ಯಾರೇಜ್​​ಗಳು ಮುಳುಗಡೆಯಾಗಿವೆ. ಕರ್ನಾಟಕದ ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಗಿ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ  ಬ್ಯಾರೇಜ್ ಗಳು ಜಲಾವೃತಗೊಂಟಿವೆ.

2 / 5
ಮಹಾರಾಷ್ಟ್ರದ ಹಿಳ್ಳಿ-ಗುಬ್ಬೇವಾಡ, ಔಜ-ಶಿರನಾಳ,  ಚಿಂಚಪೂರ-ಧೂಳಖೇಡ, ಖಾನಾಪುರ-ಪಡನೂರ ಬ್ಯಾರೇಜ್​​​ಗಳು ಜಲಾವೃತಗೊಂಡಿವೆ.

3 / 5
ಬ್ಯಾರೇಜ್​​​ಗಳ ಮೇಲೆ ಎರಡು ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಎರಡೂ ಬದಿಗೆ ತೆರಳಲು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.

4 / 5
ನದಿಯಲ್ಲಿ ನೀರು ಏರಿಕೆಯಾದ ಕಾರಣ, ರೈತರ ಜಮೀನಿಗೆ ನೀರೆತ್ತುವ ಪಂಪ್ ಸೆಟ್​​ಗಳು ನೀರಲ್ಲಿ ಮುಳಗಿವೆ. ಕೆಲ ಪಂಪ್ ಸೆಟ್​ಗಳು ಕೊಚ್ಚಿಕೊಂಡು ಹೋಗಿವೆ.

5 / 5
ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿಗೆ ಭೀಮಾ ನದಿ ಪ್ರವಾಹ ನುಗ್ಗಲಿದೆ. ಕೆಲ ಗ್ರಾಮಗಳಿಗೂ ನೀರು ನುಗ್ಗಿ ಪ್ರವಾಹ ಉಂಟಾಗುವ ಸಾದ್ಯತೆ ಇದೆ. ಜನರು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.