Updated on: Apr 13, 2023 | 9:40 AM
ನಟಿ ದಿವ್ಯಾ ಉರುಡುಗ ಅವರು ಮಲೆನಾಡಿನವರು. ಅವರಿಗೆ ಪ್ರಕೃತಿ ಮೇಲೆ ಎಲ್ಲಿಲ್ಲದ ಪ್ರೀತಿ. ಈಗ ಅವರು ಬೆಟ್ಟದ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ದಿವ್ಯಾ ಅವರು ಆಗಾಗ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಕ್ಯೂಟ್ ಆಗಿ ಅವರು ಪೋಸ್ ಕೊಟ್ಟು ಎಲ್ಲರ ಗಮನ ಸೆಳೆಯುತ್ತಾರೆ. ದಿವ್ಯಾಗೆ ಬರೋಬ್ಬರಿ 9 ಲಕ್ಷ ಹಿಂಬಾಲಕರಿದ್ದಾರೆ.
ದಿವ್ಯಾ ಉರುಡುಗ ಅವರು ಎರಡು ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿ ಆಗಿ ತೆರಳಿದ್ದಾರೆ. ಇದರಿಂದ ಅವರ ಜನಪ್ರಿಯತೆ ಹೆಚ್ಚಿದೆ. ಅವರ ಅಭಿಮಾನಿ ಬಳಗ ಮೊದಲಿಗಿಂತ ಹಿರಿದಾಗಿದೆ.
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮೊಳೆಯಿತು. ಇದರಿಂದ ಈ ಜೋಡಿ ಫೇಮಸ್ ಆದರು. ಇವರು ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ದಿವ್ಯಾ ಹಾಗೂ ಅರವಿಂದ್ ಹೊಸ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ‘ಅರ್ದಂ ಬರ್ಧ ಪ್ರೇಮ ಕಥೆ’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.