ಅಗ್ರೆಸ್ಸಿವ್ ರಜತ್​ಗೆ ಸಿಗುತ್ತಾ ಬಿಗ್​ಬಾಸ್ ಕಪ್: ಪ್ಲಸ್ ಏನು? ಮೈನಸ್ ಏನು?

|

Updated on: Jan 21, 2025 | 2:28 PM

Bigg Boss Kannada season 11: ಬಿಗ್​ಬಾಸ್ ಫಿನಾಲೆ ವಾರ ಬಂದೇ ಬಿಟ್ಟಿದೆ. ಇನ್ನು ನಾಲ್ಕು ದಿನದಲ್ಲಿ ಬಿಗ್​ಬಾಸ್ ಕನ್ನಡ ಸೀಸನ್ 11 ವಿನ್ನರ್ ಯಾರಾಗಲಿದ್ದಾರೆ ಎಂಬುದು ತಿಳಿದು ಬರಲಿದೆ. ಬಿಗ್​ಬಾಸ್ ಫಿನಾಲೆ ವಾರಕ್ಕೆ ಎಂಟ್ರಿ ನೀಡಿರುವ ಸ್ಪರ್ಧಿಗಳಲ್ಲಿ ರಜತ್ ಸಹ ಒಬ್ಬರಾಗಿದ್ದು, ರಜತ್​ಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆಯೇ? ಬಿಗ್​ಬಾಸ್ ಆಟಗಾರರಾಗಿ ರಜತ್​ ಪ್ಲಸ್ ಏನು? ಮೈನಸ್ ಏನು? ಇಲ್ಲಿದೆ ಮಾಹಿತಿ.

1 / 6
ಸುದೀಪ್ ಈಗಾಗಲೇ ಹೇಳಿರುವಂತೆ ರಜತ್ ಪಕ್ಕಾ ಬಿಗ್​ಬಾಸ್ ಆಟಗಾರ. ಈ ಆಟವನ್ನು ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತು. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡೇ ಬಿಗ್​ಬಾಸ್ ಮನೆಗೆ ಅವರು ಕಾಲಿಟ್ಟಿದ್ದಾರೆ. ಅದನ್ನು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಬುದ್ಧಿವಂತಿಕೆಯನ್ನೂ ಸಹ ಅವರು ಬಳಸುತ್ತಾರೆ.

2 / 6
ಬಿಗ್​ಬಾಸ್ ಮನೆಯಲ್ಲಿ ಯಾರೊಂದಿಗೂ ಸಹ ಅಟ್ಯಾಚ್​ಮೆಂಟ್ ಬೆಳೆಸಿಕೊಂಡಿಲ್ಲ. ರಜತ್​ ಮೊದಲಿನಿಂದಲೂ ಹೇಳುತ್ತಿರುವುದು ಒಂದೇ ಮಾತು, ನಾನು ನನಗಾಗಿ ಆಡುತ್ತೇನೆ, ನಾನು ಗೆಲ್ಲಲು ಮಾತ್ರ ಆಡುತ್ತೇನೆ, ಬೇರೆಯರನ್ನು ಗೆಲ್ಲಿಸಲು ಅಲ್ಲ ಎಂದು. ಅದಕ್ಕೆ ತಕ್ಕಂತೆ ಅವರು ಆಡುತ್ತಾ ಬಂದಿದ್ದಾರೆ.

3 / 6
ಬಿಗ್​ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್​ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದಾರೆ. ಆಗಾಗ್ಗೆ ಸಹ ಸ್ಪರ್ಧಿಗಳ ಕಾಲೆಳೆಯುತ್ತಿರುತ್ತಾರೆ. ಸಣ್ಣ-ಪುಟ್ಟ ಡೈಲಾಗ್​ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಸಾಧಾರಣ ಮಟ್ಟದ ಎಂಟರ್ಟೈನ್​ಮೆಂಟ್ ಸಹ ಕೊಡುತ್ತಾರೆ. ಇದು ಅವರ ಗೆಲುವಿಗೆ ಕಾರಣ ಆಗಬಹುದು.

4 / 6
ಇನ್ನು ನೆಗೆಟಿವ್ ವಿಷಯ ನೋಡುವುದಾದರೆ, ರಜತ್​ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದವರು. ಶೋ ಪ್ರಾರಂಭವಾಗಿ 50 ದಿನಗಳ ಬಳಿಕ ರಜತ್, ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಇತರೆ ಸ್ಪರ್ಧಿಗಳಷ್ಟು ಶ್ರಮ ಅವರು ಹಾಕಿಲ್ಲ ಎಂಬುದು ಇಲ್ಲಿ ಗಮನಿಸಬೇಕಾಗುತ್ತದೆ. ಇದು ಅವರ ಸೋಲಿಗೆ ಕಾರಣ ಆದರೂ ಆಗಬಹುದು.

5 / 6
ಅತಿಯಾದ ಅಗ್ರೆಶನ್. ರಜತ್ ಅಗ್ರೆಸ್ಸಿವ್ ಆಟಗಾರ. ಅದರಲ್ಲೂ ತಮಗಿಂತಲೂ ದುರ್ಬಲರ ಮೇಲೆಯೇ ಅವರು ಅಗ್ರೆಶನ್ ತೋರುವುದು ಹೆಚ್ಚು. ಹನುಮಂತನ ಬಗ್ಗೆ ವಿನಾಕಾರಣ ಒಂದಿಲ್ಲೊಂದು ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ. ಧನರಾಜ್ ಮೇಲೆ ಕೈ ಮಾಡಲು ಸಹ ಮುಂದಾಗಿದ್ದರು. ಇದು ಪ್ರೇಕ್ಷಕರಲ್ಲಿ ಋಣಾತ್ಮಕ ಅಭಿಪ್ರಾಯ ಮೂಡಿಸಲೂ ಬಹುದು.

6 / 6
ಮಾತಿನ ಮೇಲೆ ನಿಗಾ ಇಲ್ಲದೇ ಇರುವುದು ಸಹ ರಜತ್​ರ ಋಣಾತ್ಮಕ ಅಂಶಗಳಲ್ಲಿ ಒಂದು. ರಜತ್​ಗೆ ಅವರ ನಾಲಗೆ ಮೇಲೆ ಹತೋಟಿ ಇಲ್ಲ ಎಂಬುದು ಈಗಾಗಲೇ ಶೋನಲ್ಲಿ ಕೆಲವು ಬಾರಿ ಪ್ರೂವ್ ಆಗಿದ್ದಾಗಿದೆ. ತೀರ ಕೆಟ್ಟ ಪದಗಳನ್ನು ರಜತ್, ಸಹ ಸ್ಪರ್ಧಿಗಳ ಮೇಲೆ ಬಳಸಿದ್ದು ಇದೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಹಿಡಿಸದೇ ಇರಬಹುದು.