AB de Villiers: ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಆರಂಭಿಸಿದ್ದರು. 2011 ರಲ್ಲಿ RCB ಸೇರಿದ್ದ ಎಬಿಡಿ ಸತತ 11 ಸೀಸನ್ಗಳಲ್ಲಿ ತಂಡದ ಭಾಗವಾಗಿದ್ದರು. ಈ ವೇಳೆ ಒಟ್ಟು 4522 ರನ್‌ಗಳನ್ನು ಕಲೆಹಾಕುವ ಮೂಲಕ ಆರ್ಸಿಬಿ ಪರ ಅತ್ಯಧಿಕ ರನ್ ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ.