
ಬಿಗ್ಬಾಸ್ ಕನ್ನಡ 12 ಪ್ರಾರಂಭ ಆಗಿದ್ದು ಕಿಚ್ಚ ಸುದೀಪ್ ಅವರು ಸ್ಪರ್ಧಿಗಳನ್ನು ಸ್ವಾಗತಿಸುವ ಮುಂಚೆ ಪ್ರತಿ ಬಾರಿಯಂತೆ ವೀಕ್ಷಕರಿಗೆ ಬಿಗ್ಬಾಸ್ ಮನೆಯನ್ನು ತೋರಿಸಿದ್ದಾರೆ. ಈ ಬಾರಿ ಮನೆ ಅರಮನೆಯಂತಿದೆ.

ಕರ್ನಾಟಕವನ್ನು ಪ್ರತಿನಿಧಿಸುವ ಹಲವು ಚಿತ್ರಗಳು, ಮೂರ್ತಿಗಳನ್ನು ಬಿಗ್ಬಾಸ್ ಮನೆಯಲ್ಲಿ ಇರಿಸಲಾಗಿದೆ. ಮೈಸೂರು ಅರಮನೆ, ಹೊಯ್ಸಳ ಸಾಮ್ರಾಜ್ಯ ಸೇರಿದಂತೆ ಹಲವು ವಿಶೇಷಗಳು ಈ ಬಾರಿ ಬಿಗ್ಬಾಸ್ ಮನೆಯಲ್ಲಿದ್ದಾರೆ.

ಇಷ್ಟು ವರ್ಷ ಬಿಗ್ಬಾಸ್ ಶೋ ಅನ್ನು ಪ್ರೀತಿಸಿದ ಕರ್ನಾಟಕದ ಜನರಿಗೆ ಈ ಬಾರಿ ಬಿಗ್ಬಾಸ್ ಮನೆಯ ವಿನ್ಯಾಸವನ್ನು ಡೆಡಿಕೇಟ್ ಮಾಡಿದ್ದಾರಂತೆ ಬಿಗ್ಬಾಸ್.

ಮನೆಯೆಂದ ಮೇಲೆ ದೇವರ ಮನೆ ಬೇಡವೆ. ಪ್ರತಿ ಬಾರಿಯಂತೆ ಈ ಬಾರಿಯೂ ಸುದೀಪ್ ಅವರು ಬಿಗ್ಬಾಸ್ ಮನೆಯ ದೇವಿಗೆ ಕೈಮುಗಿದು ಸ್ಪರ್ಧಿಗಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರು.

ಇದು ಮನೆಯ ಪೌಡರ್ ರೂಂ, ಇಲ್ಲಿ ಸ್ಪರ್ಧಿಗಳು ಮೇಕಪ್ ಮಾಡಿಕೊಳ್ಳುತ್ತಾರೆ. ಕನ್ನಡಿ ಪಕ್ಕದಲ್ಲಿ ದರ್ಪಣ ಸುಂದರಿಯನ್ನು ನಿಲ್ಲಿಸಿದ್ದಾರೆ ಬಿಗ್ಬಾಸ್.

ಇದು ಕ್ಯಾಪ್ಟನ್ ರೂಂ. ಸರಿಯಾಗಿ ಗಮನಿಸಿದರೆ ಕ್ಯಾಪ್ಟನ್ ರೂಂನಲ್ಲಿ ಸಿಂಹ ಮತ್ತು ಕೆಲ ಪ್ರಾಣಿಗಳ ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಏನೋ ಹೇಳುತ್ತಿದ್ದಾರೆ ಬಿಗ್ಬಾಸ್.

ಬಿಗ್ಬಾಸ್ ಮನೆಯ ಕಿಚನ್ ಇದು, ಮನೆಯ ಬಲು ಪವರ್ಫುಲ್ ಸ್ಥಳ ಇದು. ಕಿಚನ್ ನಲ್ಲಿ ದರ್ಬಾರು ಮಾಡಿದವರು, ಮನೆಯನ್ನೇ ನಿಭಾಯಿಸುತ್ತಾರೆ. ಇಲ್ಲಿ ಅಡುಗೆ ಅಲ್ಲ, ಮನಸ್ಸು ಸೀದು ಹೋಗುತ್ತದೆ ಎನ್ನುತ್ತಾರೆ ಸುದೀಪ್.

ಇದು ಬಿಗ್ಬಾಸ್ ಮನೆಯ ಟಾಯ್ಲೆಟ್ ಮತ್ತು ಬಾತ್ರೂಂ ಸ್ಥಳ. ಇಲ್ಲಿ ಸಾಕಷ್ಟು ಹಸಿರು ಇಟ್ಟು ಅಂದ ಮಾಡಿದ್ದಾರೆ ಬಿಗ್ಬಾಸ್, ಗಿಡ ಇದೆ ಎಂದು ಇಲ್ಲೇ ಸು-ಸು ಮಾಡಿಬಿಡಬೇಡಿ ಎಂದು ಹುಡುಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಸುದೀಪ್.

ಇದು ಕನ್ಫೆಷನ್ ರೂಂ, ಈ ಬಾರಿ ಭಿನ್ನವಾಗಿ ಹೆಡ್ ಫೋನ್ ಮಾದರಿಯಲ್ಲಿ ಸೀಟನ್ನು ಡಿಸೈನ್ ಮಾಡಿದ್ದಾರೆ ಬಿಗ್ಬಾಸ್. ಇಲ್ಲಿಯೇ ಬಿಗ್ಬಾಸ್ ಸ್ಪರ್ಧಿಗಳೊಟ್ಟಿಗೆ ಪ್ರತ್ಯೇಕವಾಗಿ ಮಾತನಾಡುತ್ತಾರೆ.
Published On - 6:50 pm, Sun, 28 September 25