
ಧನುಷ್: ‘ಗೀತಾ’ ಧಾರಾವಾಹಿಯಲ್ಲಿ ಧನುಷ್ ಕಾಣಿಸಿಕೊಂಡಿದ್ದರು. ಅವರು ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅವರಿಗೆ ಇತ್ತೀಚೆಗೆ ವಿವಾಹ ಕೂಡ ನೆರವೇರಿದೆ.

ಪ್ರಿಯಾ ಸವದಿ: ಪಕ್ಕಾ ಉತ್ತರ ಕರ್ನಾಟಕ ಪ್ರತಿಭೆ ಪ್ರಿಯಾ ಸವದಿ. ಇವರು ಈಗಾಗಲೇ ಕೆಲವು ಶಾರ್ಟ್ ಫಿಲ್ಮ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ದೊಡ್ಮನೆಗೆ ಬರೋದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಇವರಿಂದ ಹೆಚ್ಚಿನ ಸ್ಪರ್ಧೆ ನಿರೀಕ್ಷಿಸಬಹುದು.

ಸೂರಜ್: ಹಾಸ್ಯ ಶೋಗಳ ಮೂಲಕ ಗಮನ ಸೆಳೆದವರು ಸೂರಜ್. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಮಿಂಚು ಹರಿಸಿದ್ದರು. ಅವರು ಕೂಡ ಬಿಗ್ ಬಾಸ್ನ ಅತಿಥಿ ಎಂದು ಹೇಳಲಾಗುತ್ತಾ ಇದೆ.

ಸ್ಪಂದನಾ ಸೋಮಣ್ಣ: ಸ್ಪಂದನಾ ಸೋಮಣ್ಣ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಗಮನ ಸೆಳೆದವರು. ‘ನಾನು ನನ್ನ ಕನಸು' ಅವರ ಮೊದಲ ಧಾರಾವಾಹಿ. ತೆಲುಗಿನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವೆಬ್ ಸೀರಿಸ್ನಲ್ಲೂ ಕಾಣಿಸಿಕೊಂಡಿದ್ದಾರೆ.

ದಿವ್ಯಾ ವಸಂತ್: ನ್ಯೂಸ್ ಆ್ಯಂಕರ್ ಆಗಿ ದಿವ್ಯಾ ವಸಂತ್ ಕಾಣಿಸಿಕೊಂಡಿದ್ದರು. ಅಮೂಲ್ಯಾಗೆ ಮಗು ಜನಿಸಿದಾಗ ‘ಇಡೀ ಕರ್ನಾಟಕವೇ ಖುಷಿಪಡೋ ಸುದ್ದಿ’ ಎಂದು ಹೇಳಿ ಟ್ರೋಲ್ ಆಗಿದ್ದರು. ಅವರ ಹೆಸರು ಕೂಡ ಬಿಗ್ ಬಾಸ್ ಪಟ್ಟಿಯಲ್ಲಿದೆ.

ತೇಜಸ್ ಗೌಡ: ತೇಜಸ್ ಗೌಡ ಅವರು ಟ್ರೋಲ್ ಮಾಡಿ ಫೇಮಸ್ ಆದವರು. ಚಿತ್ರ ವಿಚಿತ್ರವಾಗಿ ನಡೆದುಕೊಳ್ಳುವವರನ್ನು ಟ್ರೋಲ್ ಮಾಡೋದು ಇವರ ಕೆಲಸ.

ಸತೀಶ್: ದುಬಾರಿ ಶ್ವಾನಗಳನ್ನು ಸಾಕಿ ಫೇಮಸ್ ಆದವರು ಸತೀಶ್. ಅವರು ಇತ್ತೀಚೆಗೆ 50 ಕೋಟಿ ಬೆಲೆಯ ಶ್ವಾನ ತಂದಿದ್ದಾಗಿ ಹೇಳಿದ್ದರು. ಈ ವೇಳೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದು ಬಾಡಿಗೆಗೆ ತಂದ ನಾಯಿ ಎಂದು ಆ ಬಳಿಕ ಗೊತ್ತಾಗಿತ್ತು. ಅವರ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿದೆ.

ಉಳಿದಂತೆ ಅನನ್ಯಾ ಅಮರ್, ಗಿಲ್ಲಿ ನಟ, ಸತ್ಯ ಹೀರೋ ನಟ ಸಾಗರ್, ಶ್ವೇತಾ ಪ್ರಸಾದ್ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಅಂತಿಮವಾಗಿ ಯಾರೆಲ್ಲರ ಹೆಸರು ಫೈನಲ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.