
ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ವಾರಾಂತ್ಯದಲ್ಲಿ ಹೋಟೆಲ್ ರೆಸ್ಟೋರೆಂಟ್ ಗೆ ಹೋದರೆ ಬಿರಿಯಾನಿಯನ್ನು ತಪ್ಪದೇ ಆರ್ಡರ್ ಮಾಡುತ್ತಾರೆ.

ನಾನ್ ವೆಜ್ ಪ್ರಿಯರಂತೂ ಬಾಯಿ ಚಪ್ಪರಿಸಿಕೊಂಡು ಬಿರಿಯಾನಿ ಸವಿಯುತ್ತಾರೆ. ಈ ಬಿರಿಯಾನಿಯಲ್ಲಿ ಹೈದರಬಾದಿ ಬಿರಿಯಾನಿ, ಮಲಬಾರ್ ಬಿರಿಯಾನಿ, ಕೋಲ್ಕತ್ತಾ ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಚಿಕನ್, ಮಟನ್ ಬಿರಿಯಾನಿಗಳಿವೆ.

ಭಾರತ ಸೇರಿದಂತೆ ಸಿಂಗಾಪುರ್, ಮಲೇಷಿಯಾ, ಇರಾಕ್ ಹಾಗೂ ಥೈಲ್ಯಾಂಡ್ ಸೇರಿದಂತೆ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿಯೂ ವಿಭಿನ್ನ ರುಚಿಯ ಈ ಬಿರಿಯಾನಿ ರುಚಿ ಸವಿಯಬಹುದು.

ಹೌದು, ಈ ಬಿರಿಯಾನಿಗೆ ಬಳಸುವ ಸಾಮಗ್ರಿಗಳೇ ಅದರ ರುಚಿಯನ್ನು ದುಪ್ಪಟ್ಟು ಮಾಡುತ್ತದೆ ಎನ್ನುವುದರದಲ್ಲಿ ಎರಡು ಮಾತಿಲ್ಲ. ಆದರೆ ಬಾಯಿ ಚಪ್ಪರಿಸಿಕೊಂಡು ಬಿರಿಯಾನಿ ತಿನ್ನುವ ಮುನ್ನ ಈ ಹೆಸರು ಬಂದದ್ದು ಹೇಗೆ ಎಂದು ಯೋಚಿಸಿದ್ದೀರಾ.

ಎಲ್ಲರ ಫೇವರಿಟ್ ಫುಡ್ ಈ ಖಾದ್ಯಕ್ಕೆ ಪರ್ಷಿಯನ್ ಬ್ರಿಯಾನ್ ಎಂಬ ಪದದಿಂದ ಈ ಹೆಸರು ಬಂದಿದೆ. ಬ್ರಿಯಾನ್ ಎನ್ನುವುದರ ಅರ್ಥ ಅಡುಗೆ ಮಾಡುವ ಮೊದಲು ಆಹಾರ ಪದಾರ್ಥಗಳನ್ನು ಹುರಿಯಬೇಕು ಎನ್ನುವುದಾಗಿದೆ.

ಈ ಬ್ರಿಯಾನ್ ಪದವನ್ನು ಬ್ರಿಂಜ್ ಎಂಬ ಪದದಿಂದ ಪಡೆಯಲಾಗಿದ್ದು, ಈ ಬ್ರಿಂಜ್ ಎಂದರೆ ಅಕ್ಕಿ ಎಂದರ್ಥ. ಹೀಗಾಗಿ ಈ ಖಾದ್ಯಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ.

ಈ ಬಿರಿಯಾನಿಯಲ್ಲಿ ಮಾಂಸ, ತುಪ್ಪ, ಅಕ್ಕಿ ಈ ಪ್ರಮುಖ ಪದಾರ್ಥಗಳನ್ನು ಬಳಸುವುದರಿಂದ ರುಚಿಯೂ ಅಷ್ಟೇ ಅದ್ಭುತವಾಗಿರುತ್ತದೆ. ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೇನಿಸದೇ ಇರದು.