Kannada News Photo gallery Bodybuilders shine at Shivamogga Dussehra, Here is a glimpse of the state level bodybuilding competition, Kannada News
ಶಿವಮೊಗ್ಗ ದಸರಾದಲ್ಲಿ ಮಿಂಚಿದ ಬಾಡಿಬಿಲ್ಡರ್ಸ್; ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಝಲಕ್ ಇಲ್ಲಿದೆ
ಶಿವಮೊಗ್ಗ ದಸರಾ ಪ್ರಯುಕ್ತ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ರಾಜ್ಯದಿಂದ ನೂರಾರು ಯುವಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಬ್ಬರಗಿಂತ ಒಬ್ಬರು ಕಟುಮಸ್ತಾದ ದೇಹದಾರ್ಢ್ಯ ಹೊಂದಿದ್ದು, ವೇದಿಕೆ ಮೇಲೆ ಬಾಡಿಬಿಲ್ಡರ್ಸ್ಗಳ ಕಸರತ್ತು ಹೇಗಿತ್ತು ಅಂತೀರಾ? ಈ ಸ್ಟೋರಿ ಓದಿ.
1 / 7
ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ನಿತ್ಯ ದಸರಾ ಪ್ರಯುಕ್ತ ಒಂದಲ್ಲ ಒಂದು ಸ್ಪರ್ಧೆ, ಸಾಂಸ್ಕೃತಿ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದೆ. ಅದರಂತೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಯುವ ದಸರಾ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಯಿಂದ 200ಕ್ಕೂ ಹೆಚ್ಚು ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
2 / 7
55 ಕೆಜಿಯಿಂದ 85 ಕೆಜಿ ವರೆಗೆ 2016 ರಿಂದ ನಿರಂತರವಾಗಿ ದೇಹದಾರ್ಢ್ಯ ಸ್ಪರ್ಧೆಯನ್ನು ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅತೀ ಹೆಚ್ಚು ದೇಹದಾರ್ಢ್ಯ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಯುವಕರು ಒಬ್ಬರಿಗಿಂತ ಒಬ್ಬರು ತಮ್ಮ ದೇಹದಾರ್ಡ್ಯದ ಪ್ರದರ್ಶನ ತೋರಿಸಿದರು.
3 / 7
ಜಿಮ್ನಲ್ಲಿ ಕಸರತ್ತು ಮಾಡಿ ತಮ್ಮ ದೇಹವನ್ನು ಕಬ್ಬಿಣದಂತೆ ಗಟ್ಟಿಯಾಗಿ ಮಾಡಿಕೊಂಡಿದ್ದ ಯುವಕರು, ವೇದಿಕೆ ಮೇಲೆ ಫಿಟ್ ಆಗಿರುವ ದೇಹದ ಫೋಸ್ ನೀಡುತ್ತಿದ್ದರು. ಇವರ ಸಿಕ್ಸ್ ಪ್ಯಾಕ್ ಕಟುಮಸ್ತಾದ ದೇಹ ನೋಡಿದ ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆ ಹಾಕಿ ಎಂಜಾಯ್ ಮಾಡುತ್ತಿದ್ದರು. ಈ ಸ್ಪರ್ಧೆ ನೋಡಲು ಯುವಕ ಮತ್ತು ಯುವತಿಯರು ಮಹಿಳೆಯರು ಕಿಕ್ಕಿರಿದು ತುಂಬಿದ್ದರು.
4 / 7
ವಿವಿಧ ಜಿಲ್ಲೆಯಿಂದ ಬಂದಿದ್ದ ಪಟುಗಳು ತಮ್ಮ ದೇಹದಾರ್ಢ್ಯ ಪ್ರದರ್ಶಿಸಿದರು. ಪ್ರದರ್ಶನಕ್ಕೂ ಮೊದಲು ವೇದಿಕೆ ಬಳಿಯ ಕೆಲ ಪಟುಗಳು ತಾಲೀಮು ನಡೆಸುತ್ತಿದ್ದರು. ದಸರಾ ಹಬ್ಬದ ಸಂಭ್ರಮಕ್ಕೆ ಈ ಸ್ಪರ್ಧೆಯು ಮತ್ತಷ್ಟು ಮೆರಗನ್ನು ತಂದುಕೊಟ್ಟಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಪಟುಗಳು ಕೂಡ ಶಿವಮೊಗ್ಗದ ದಸರಾ ಹಬ್ಬದ ಪ್ರಮುಕ್ತ ನಡೆದ ಈ ಸ್ಪರ್ಧೆಗೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
5 / 7
ತುಂಬಾ ರೋಮಾಂಚನದಿಂದ ದೇಹದಾರ್ಢ್ಯ ಸ್ಪರ್ಧೆ ಕೂಡಿದ್ದು, ರಾಜ್ಯದ ವಿವಿಧ ಜಿಲ್ಲೆಯ ಎಲ್ಲ ಪರಿಣಿತ ಮತ್ತು ಉತ್ತಮ ಅಭ್ಯಾಸ ಹೊಂದಿದ್ದ ದೇಹದಾರ್ಢ್ಯ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬ ಪಟುಗಳು ತಮ್ಮ ತಮ್ಮ ಕಟುಮಸ್ತಾದ ದೇಹದ ಪಿಟ್ನೆಸ್ನ ಅನಾವರಣ ಮಾಡಿದರು. ಬೈಸಿಪ್, ಚೇಸ್ಟ್, ಥೈಸ್ ಸೇರಿದಂತೆ ವಿವಿಧ ಭಂಗಿಗಳ ಮತ್ತು ಆಯಾಮಗಳ ಪ್ರದರ್ಶನ ನೋಡಿದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಬಾಡಿಬಿಲ್ಡರ್ಸ್ ಅಂದ್ರೆ ಹಿಂಗೂ ಇರುತ್ತಾರೆಂದು ಕಣ್ಣು ಮುಂದೆಯೇ ಅವರನ್ನು ನೋಡಿದ ಶಿವಮೊಗ್ಗದ ಜನರು ಸಖತ್ ಎಂಜಾಯ್ ಮಾಡಿದರು.
6 / 7
ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗದ ದೇಹದಾರ್ಢ್ಯ ಪಟುಗಳು ವಿವಿಧ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಒಂದರಿಂದ ಐದನೇ ಸ್ಥಾನದ ವಿಜೇತರಿಗೆ ಪ್ರಶಸ್ತಿ ಮತ್ತು ನಗದು ನೀಡಿ ಗೌರವಿಸಲಾಯಿತು. 2024 ರ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಮೊದಲ ಬಹುಮಾನ 10 ಸಾವಿರ ನಗದು ಹಾಗೂ ಪ್ರಶಸ್ತಿಯೊಂದಿಗೆ ಬೆಂಗಳೂರಿನ ಇಜಾಜ್ ಅಹ್ಮದ್ ಪಾಲಾಯಿತು. ರನ್ನರಪ್ ಧಾರವಾಡದ ಗಿರೀಶ್ ಮ್ಯಾಗೇರಿ, ಐದು ಸಾವಿರ ನಗದು, ಪ್ರಶಸ್ತಿ ಪಡೆದರು. ಇನ್ನು ಐದು ಸಾವಿರ ನಗದು ಮತ್ತು ಪ್ರಶಸ್ತಿಯೊಂದಿಗೆ ಉತ್ತಮ ದೇಹದಾರ್ಢ್ಯ ಪ್ರಶಸ್ತಿಯು ಧಾರವಾಡದ ಲೋಕೇಶ್ ಬೋಸ್ಲೆ ಪಾಲಾಯಿತು. ಉಳಿದಂತೆ ಎಂಟು ವಿಭಾಗದಲ್ಲಿ ಐದು ವಿಜಯೇತರಿಗೆ ಪ್ರಶ್ತಿ ಮತ್ತು ನಗದು ನೀಡಿ ಗೌರವಿಸಲಾಯಿತು.
7 / 7
ಇಂದಿನ ಹೈಟೆಕ್ ಯುಗದಲ್ಲೂ ಯುವಕರು ಬಾಡಿಬಿಲ್ಡಿಂಗ್ ಪಟುಗಳಾಗಿ ಶ್ರಮವಹಿಸುತ್ತಿರುವುದು ಗಮನಾರ್ಹ. ಹಗಲು ರಾತ್ರಿ ಕಷ್ಟು ಪಟ್ಟು ದೇಹ ದಂಡನೆ ಮಾಡಿ ಅದಕ್ಕೆ ಕಟುಮಸ್ತಾದ ರೂಪವನ್ನು ಕೊಟ್ಟಿರುತ್ತಾರೆ. ಇಂತಹ ಪಟುಗಳು ದಸರಾದಂತಹ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತಮ್ಮ ಬಲಾಢ್ಯ ದೇಹದ ಪ್ರದರ್ಶನ ಮೂಲಕ ಮಲೆನಾಡಿನ ಜನರ ಗಮನ ಸೆಳೆದರು.