Kannada News Photo gallery SBI Bumper Recruitment 2024, Hiring 10000 New Employees to lead branch expansion and digital banking SBI Chairman CS Shetty
ಅಗ್ರಗಣ್ಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು, ಸಂಪೂರ್ಣ ವಿವರ ಇಲ್ಲಿದೆ
ಭಾರತದ ಅಗ್ರಗಣ್ಯ ರಾಷ್ಟ್ರೀಕೃತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) 10,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಸಿದೆ. ಇದರಿಂದ ಪ್ರತಿಷ್ಠಿತ ಬ್ಯಾಂಕಿನಲ್ಲಿನ ಕೆಲಸ ಮಾಡಬೇಕೆಂಬ ಅಭ್ಯರ್ಥಿಗಳ ಆಕಾಂಕ್ಷೆ ಗರಿಗೆದರಿಸಿದೆ. ಇದು ನವ ಬ್ಯಾಂಕರುಗಳಲ್ಲಿ ಅಪಾರ ಭರವಸೆ ಮೂಡಿಸಿದೆ. SBI ಯಾವೆಲ್ಲಾ ಕ್ಷೇತ್ರದಲ್ಲಿ ನೇಮಕಾತಿ ಮಾಡಿಕೊಳ್ಳಲಿದೆ. ಜನರಲ್ ಬ್ಯಾಂಕಿಂಗ್, ಡೇಟಾ ಸೈಂಟಿಸ್ಟ್, ಡೇಟಾ ಆರ್ಕಿಟೆಕ್ಟ್ ಮತ್ತು ನೆಟ್‌ವರ್ಕ್ ಆಪರೇಟರ್‌ಗಳಂತಹ ವಿಶೇಷ ತಾಂತ್ರಿಕ ಹುದ್ದೆಗಳಿಗೆ ನೇಮಿಸಿಕೊಳ್ಳಲು ಸಿದ್ಧವಾಗಿದೆ. SBI ಬಂಪರ್ ನೇಮಕಾತಿ 2024 ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಸದವಕಾಶವಾಗಿದೆ.