
ಹೃತಿಕ್ ರೋಷನ್ ಅವರು ಕುಟುಂಬದ ಜೊತೆ ಸೇರಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಅವರು ಮನೆಗೆ ಮಣ್ಣಿನಿಂದ ಮಾಡಿದ ಗಣಪತಿಯನ್ನು ಇರಿಸಿದ್ದರು ಅನ್ನೋದು ವಿಶೇಷ. ಈ ಫೋಟೋಗಳು ಗಮನ ಸೆಳೆದಿವೆ. ಈ ಆಚರಣೆ ವೇಳೆ ಅವರ ಪ್ರೇಯಸಿ ಸಬಾ ಕೂಡ ಇದ್ದರು.

ಸಾರಾ ಅಲಿ ಖಾನ್ ಮುಸ್ಲಿಂ ಧರ್ಮದವರು. ಅವರ ತಂದೆ ಸೈಫ್ ಮುಸ್ಲಿಂ. ಆದರೆ, ತಾಯಿ ಹಿಂದೂ. ಈ ಕಾರಣದಿಂದ ಸಾರಾ ಅವರು ಹಿಂದೂ ಧರ್ಮವನ್ನು ಆಚರಿಸಲು ಇಷ್ಟಪಡುತ್ತಾರೆ. ಅವರು ಗಣೇಶ ಚತುರ್ಥಿ ಆಚರಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ದೇವರನ್ನು ಸಾಕಷ್ಟು ನಂಬುತ್ತಾರೆ. ಅವರು ಪತಿ ರಾಜ್ ಕುಂದ್ರಾ ಜೊತೆ ಸೇರಿ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಎಲ್ಲರೂ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದರು ಅನ್ನೋದು ವಿಶೇಷ.

ಮಾಧುರಿ ದೀಕ್ಷಿತ್ ಅವರು ಇತ್ತೀಚೆಗೆ ನಟನೆ ಮಾಡುವುದು ಕಡಿಮೆ ಆಗಿದೆ. ಅವರು ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಪತಿ ಡಾ. ಶ್ರೀರಾಮ್ ನೆನೆ ಜೊತೆಗೂಡಿ ಗಣಪತಿ ಹಬ್ಬವನ್ನು ಆಚರಿಸಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜಾಕಿ ಭಗ್ನಾನಿ ಜೊತೆ ಅವರ ವಿವಾಹ ನೆರವೇರಿದೆ. ಅವರು ಪತಿಯ ಜೊತೆ ಸೇರಿ ಸರಳವಾಗಿ ಹಬ್ಬವನ್ನು ಆಚರಿಸಿದ್ದಾರೆ. ಫೋಟೋಗಳು ಗಮನ ಸೆಳೆದಿವೆ.

ಜೆನಿಲಿಯಾ ಹಾಗೂ ರಿತೇಶ್ ಅವರು ಬಾಲಿವುಡ್ನ ಕ್ಯೂಟ್ ದಂಪತಿಗಳಲ್ಲಿ ಒಬ್ಬರು. ಇವರು ಮಕ್ಕಳ ಜೊತೆ ಸೇರಿ ಹಬ್ಬವನ್ನು ಆಚರಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ನಟಿ ಅನನ್ಯಾ ಪಾಂಡೆ ದೇವರ ಬಗ್ಗೆ ಸಾಕಷ್ಟು ನಂಬಿಕೆ ಹೊಂದಿದ್ದಾರೆ. ಅವರು ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಗಣಪತಿ ಹಬ್ಬವನ್ನು ಆಚರಿಸಿದ್ದಾರೆ.