Ganesh Chaturthi 2024: ಗೌರಿ ಗಣೇಶ ಹಬ್ಬಕ್ಕೆ ಗಣೇಶ ಮೂರ್ತಿಗಳ ಬುಕ್ಕಿಂಗ್ ಶುರು, ರಸ್ತೆ ರಸ್ತೆಗಳಲ್ಲಿ ಕಂಗೊಳಿಸುತ್ತಿದ್ದಾನೆ ಗಣಪ
ಗೌರಿ ಗಣೇಶ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಗಣೇಶ ಮೂರ್ತಿಗಳಿಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ನಗರದ ರಸ್ತೆಗಳಲ್ಲಿ ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ. ನಗರದ ಮಾವಳ್ಳಿ ರಸ್ತೆಯಲ್ಲಿ ಗಣೇಶ ಮೂರ್ತಿಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಅನೇಕರು ಈಗಲೇ ತಮಗೆ ಇಷ್ಟ ಆಗುವ ಗಣೇಶನ ಮೂರ್ತಿಗಳನ್ನು ಬುಕ್ ಮಾಡ್ತಿದ್ದಾರೆ.
1 / 7
ಬೆಂಗಳೂರಿನಲ್ಲಿ ಗೌರಿ-ಗಣೇಶನ ಚತುರ್ಥಿಗೆ ಗಣೇಶ ಮೂರ್ತಿಗಳಿಗೆ ಡಿಮ್ಯಾಂಡ್ ಶುರುವಾಗಿದ್ದು, ಫುಲ್ ಬುಕಿಂಗ್ ನಡೆಯುತ್ತಿದೆ. ಈ ಬಾರಿ ಗಣೇಶ ಮೂರ್ತಿಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.
2 / 7
ಅದ್ರಲ್ಲೂ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನ ಮೂರ್ತಿಗಳಿಗೆ ವ್ಯಾಪಾರಸ್ಥರು ಹೆಚ್ಚು ಆದ್ಯತೆ ನೀಡುತ್ತಿದ್ದು, ಮಣ್ಣಿನ ಗಣೇಶ ಮೂರ್ತಿಗಳನ್ನೆ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದ್ದಾರೆ.
3 / 7
ಕಳೆದ ವರ್ಷ ಪಿಒಪಿ ಗಣೇಶಗಳನ್ನ ಮಾಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಂಗಡಿಗಳಿಗೆ ಬೀಗ ಜಡಿದಿದ್ರು. ಹೀಗಾಗಿ ಈ ವರ್ಷ ಹೆಚ್ಚು ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಆಧ್ಯಾತೆ ನೀಡುತ್ತಿದ್ದು, ಮೂರ್ತಿಗಳ ಬೆಲೆಯನ್ನ ಸಹ ಹೆಚ್ಚಳ ಮಾಡಲಾಗಿದೆ.
4 / 7
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ 20% ರಷ್ಟು ಬೆಲೆ ಏರಿಕೆಯಾಗಿದ್ದು, 1 ರಿಂದ 7 ಅಡಿಯವರೆಗೂ ಗಣೇಶ ಮೂರ್ತಿಗಳನ್ನ ಮಾಡಲಾಗಿದೆ. ಇನ್ನು ಮೂರ್ತಿಗಳು 1000 ದಿಂದ 35 ಸಾವಿರದ ವರೆಗೂ ಮಾರಾಟವಾಗುತ್ತಿದ್ದು, ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನ ಸಹ ನೋಡ್ತಿದ್ದಾರೆ.
5 / 7
ಗಣೇಶ ಚತುರ್ಥಿ ಎಂದ್ರೆ ಹಿಂದೂಗಳಿಗೆ ತುಂಬ ವಿಶೇಷ ಹಬ್ಬ. ಹಬ್ಬಕ್ಕೆ ಗಣೇಶ ಮೂರ್ತಿ ಇಲ್ಲ ಅಂದ್ರೆ ಹಬ್ಬನೇ ಆಗೋದಿಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನ ಖರೀದಿ ಮಾಡುವುದಕ್ಕೆ ಬಂದಿದ್ವಿ. ಈ ಬಾರಿ ಗಣೇಶ ಮೂರ್ತಿಗಳ ಬೆಲೆ ಜಾಸ್ತಿಯಾಗಿದೆ. ಆದ್ರೂ ಹಬ್ಬ ಮಾಡುವ ಸಲುವಾಗಿ ಬೆಲೆ ಜಾಸ್ತಿಯಾದ್ರು ಖರೀದಿ ಮಾಡ್ತಿದಿವಿ ಅಂತ ಗ್ರಾಹಕರು ಹೇಳಿದ್ರು.
6 / 7
ಕಳೆದ ವರ್ಷ ಪಿಒಪಿ ಗಣೇಶ ಮೂರ್ತಿಗಳನ್ನ ಹೆಚ್ಚಿನದಾಗಿ ಇಟ್ಟಿದ್ದರಿಂದ ಗಣೇಶ ಮೂರ್ತಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ರು. ಈ ವರ್ಷ ಅದರ ಪರಿಣಾಮದಿಂದಾಗಿ ಮಣ್ಣಿನ ಮೂರ್ತಿಗಳು ಹೆಚ್ಚು ಸೇಲ್ ಆಗುತ್ತಿವೆ.
7 / 7
ಹಬ್ಬಕ್ಕೆ 10 ದಿನಗಳಿದ್ದು, ಗಣೇಶ ಮೂರ್ತಿಗಳ ಡಿಮ್ಯಾಂಡ್ ಗೆ ತಕ್ಕಂತೆ ಬೆಲೆಯು ದುಪ್ಪಾಟ್ಟಾಗುವ ಸಾಧ್ಯತೆ ಇದೆ. ಹೀಗಾಗಿ ಗಣೇಶ ಮೂರ್ತಿಗಳಿಗೆ ಬುಕ್ಕಿಂಗ್ ಆರಂಭವಾಗಿದ್ದು ಅನೇಕರು ತಮಗೆ ಇಷ್ಟ ಬಂದ ಗಣೇಶಗಳನ್ನು ಖರೀದಿಸುತ್ತಿದ್ದಾರೆ.
Published On - 8:14 am, Mon, 19 August 24