- Kannada News Photo gallery Brazilian model Daiane Tomazoni will share topless photos at every Brazil goal in fifa world cup
‘ಪ್ರತಿ ಗೋಲಿಗೂ ಒಂದೊಂದು ಟಾಪ್‌ಲೆಸ್ ಫೋಟೋ’! ಬ್ರೆಜಿಲಿಯನ್ ಮಾಡೆಲ್ ಸ್ಫೋಟಕ ಹೇಳಿಕೆ
FIFA World Cup 2022: ಬ್ರೆಜಿಲ್ ತಂಡ ಪ್ರತಿ ಗೋಲು ಬಾರಿಸಿದಾಗಲೆಲ್ಲಾ ನಾನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್ ಚಿತ್ರವನ್ನು ಹಂಚಿಕೊಳ್ಳುವುದಾಗಿ ಬ್ರೆಜಿಲ್‌ನ ಮಾಡೆಲ್ ಡಯೇನ್ ಟೊಮಾಝೋನಿ ಹೇಳಿಕೊಂಡಿದ್ದಾರೆ.
Updated on:Dec 02, 2022 | 12:22 PM

ಫಿಫಾ ವಿಶ್ವಕಪ್ 2022 ರ ಪ್ರಿ-ಕ್ವಾರ್ಟರ್‌ಫೈನಲ್ ಸುತ್ತು ಪ್ರಾರಂಭವಾಗಲಿದೆ. ಈಗಾಗಲೇ ಕೆಲವು ತಂಡಗಳು ಈ ಸುತ್ತಿಗೆ ಎಂಟ್ರಿಕೊಟ್ಟಿವೆ. ಈ ನುಡವೆ ಬ್ರೆಜಿಲಿಯನ್ ಮಾಡೆಲ್ ಒಬ್ಬರು ತಮ್ಮ ತಂಡದ ಗೆಲುವಿಗಾಗಿ ತಾನು ತೆಗೆದುಕೊಂಡಿರುವ ನಿರ್ಧಾರದಿಂದ ಸಖತ್ ಸುದ್ದಿಯಾಗುತ್ತಿದ್ದಾರೆ.

ಬ್ರೆಜಿಲ್ ತಂಡ ಪ್ರತಿ ಗೋಲು ಬಾರಿಸಿದಾಗಲೆಲ್ಲಾ ನಾನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್‌ಲೆಸ್ ಚಿತ್ರವನ್ನು ಹಂಚಿಕೊಳ್ಳುವುದಾಗಿ ಬ್ರೆಜಿಲ್‌ನ ಮಾಡೆಲ್ ಡಯೇನ್ ಟೊಮಾಝೋನಿ ಹೇಳಿಕೊಂಡಿದ್ದಾರೆ.

24ರ ಹರೆಯದ ಟೊಮಾಝೋನಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫಾಲೋವರ್ಸ್ ಇದ್ದು, ಬೋಲ್ಡ್ ಫೋಟೋಗಳನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸದಾ ಹರಿಬಿಡುವುದಕ್ಕೆ ಈ ಮಾಡೆಲ್ ಹೆಸರು ವಾಸಿಯಾಗಿದ್ದಾರೆ.

ಅಲ್ಲದೆ ಬ್ರೆಜಿಲ್ ತಂಡ ಸ್ವಿಟ್ಜರ್ಲೆಂಡ್ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದಾಗಲೂ ನಾನು ಇದೇ ರೀತಿ ಟಾಪ್‌ಲೆಸ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಗಿ ಟೊಮಾಝೋನಿ ಹೇಳಿಕೊಂಡಿದ್ದಾರೆ.

ಬ್ರೆಜಿಲ್ ತಂಡ ತನ್ನ ಗುಂಪು ಸುತ್ತಿನ ಮೊದಲೆರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೆ ತಲುಪಿದೆ. ಮೊದಲು ಸೆರ್ಬಿಯಾ ತಂಡವವನ್ನು 2-0 ಗೋಲುಗಳಿಂದ ಸೋಲಿಸಿದ ಬ್ರೆಜಿಲ್, ನಂತರ ಸ್ವಿಟ್ಜರ್ಲೆಂಡ್ ತಂಡವನ್ನು 1-0 ಅಂತರದಲ್ಲಿ ಸೋಲಿಸಿತ್ತು. ಈಗ ಡಿಸೆಂಬರ್ 3 ರಂದು ಕ್ಯಾಮರೂನ್ ತಂಡವನ್ನು ಎದುರಿಸಲಿದೆ.
Published On - 12:19 pm, Fri, 2 December 22




