ಬಜೆಟ್ 2022: ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಯಾರು ಗೊತ್ತಾ..? ಇಲ್ಲಿದೆ ಆಸಕ್ತಿಕರ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2022 | 2:10 PM

ಕೇಂದ್ರ ಬಜೆಟ್ 2022: ಕೇಂದ್ರ ಸರ್ಕಾರವು 2022-23ರ ಬಜೆಟ್ ಅನ್ನು ಕೆಲವೇ ದಿನಗಳಲ್ಲಿ ಪರಿಚಯಿಸಲಿದೆ. ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

1 / 5
1958-59ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡಿಸಿ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಹಣಕಾಸು ಸಚಿವಾಲಯ ಪ್ರಧಾನಿ ನೆಹರೂ ಅವರ ಅಧೀನದಲ್ಲಿತ್ತು.

2 / 5
ನೆಹರೂ ನಂತರ ಇಂದಿರಾ ಗಾಂಧಿ ಕೂಡ ಪ್ರಧಾನಿಯಾಗಿ ಬಜೆಟ್ ಮಂಡಿಸಿದ್ದರು. ನಿರ್ಮಲಾ ಸೀತಾರಾಮನ್‌ಗಿಂತ ಮೊದಲು ಇಂದಿರಾಗಾಂಧಿ ಅವರು ಬಜೆಟ್‌ ಮಂಡಿಸಿ ಹಣಕಾಸು ಸಚಿವ ಸ್ಥಾನ ಅಲಂಕರಿಸಿದ ಏಕೈಕ ಮಹಿಳೆ.

3 / 5
ಮೊರಾರ್ಜಿ ದೇಸಾಯಿ ಅವರು 10 ಬಜೆಟ್ ಮಂಡಿಸಿ, ದೇಶದಲ್ಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು 6 ಬಾರಿ ಹಣಕಾಸು ಸಚಿವರಾಗಿ ಮತ್ತು 4 ಬಾರಿ ಉಪಪ್ರಧಾನಿಯಾಗಿ ಬಜೆಟ್ ಮಂಡಿಸಿದ್ದಾರೆ. ಒಂದು ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಕೂಡ ಬಜೆಟ್ ಮಂಡಿಸಿದ್ದರು.

4 / 5
2016ರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಾಮಾನ್ಯ ಬಜೆಟ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ಹಿಂದೆ ರೈಲ್ವೆ ಬಜೆಟ್​ನ್ನು  ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ, ರೈಲ್ವೆ ಬಜೆಟ್ ಅನ್ನು ರದ್ದುಗೊಳಿಸಿ  ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಲಾಯಿತು. ಇದು ಸುದೀರ್ಘ ಸಂಪ್ರದಾಯವನ್ನು ಕೊನೆಗೊಳಿಸಿತು.

5 / 5
ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಮಹಿಳೆ ಎನ್ನುವ ಕೀರ್ತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಫೆಬ್ರವರಿ 1, 2022 ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.