Updated on: Sep 15, 2023 | 7:00 PM
ನಾವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಇರುವ ಏಲಕ್ಕಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತವಾದುದು. ಬಾಯಿ ವಾಸನೆ ನಿವಾರಿಸುವುದರಿಂದ ಹಿಡಿದು ತೂಕ ಇಳಿಕೆ ಮಾಡುವವರೆಗೆ ಏಲಕ್ಕಿಯಿಂದ ಹಲವು ಪ್ರಯೋಜನಗಳಿವೆ.
ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಏಲಕ್ಕಿಯನ್ನು ಕಚ್ಚಿ ಬಾಯಲ್ಲಿ ಇಟ್ಟುಕೊಂಡರೆ ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ. ನೀವೇನಾದರೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು.
ಏಲಕ್ಕಿಯ ಒಳಗೆ ಒಂದು ವಿಧವಾದ ಎಣ್ಣೆ ಇರುತ್ತದೆ. ಮಲಗುವಾಗ ಅದನ್ನು ಬಾಯಿಯಲ್ಲಿ ಇಟ್ಟಾಗ, ಎಣ್ಣೆಯು ದೇಹದ ಒಳಗೆ ಹೋಗುತ್ತದೆ. ಇದು ಹೊಟ್ಟೆಯ ಒಳಭಾಗವನ್ನು ಬಲಪಡಿಸುತ್ತದೆ. ಕಿಬ್ಬೊಟ್ಟೆಯಲ್ಲಿ ಸೇರಿರುವ ಆಮ್ಲವನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.
ಗೊರಕೆ ಸಮಸ್ಯೆಗೆ ಪರಿಹಾರವೇನೆಂದು ಬಹಳಷ್ಟು ಜನರು ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ರಾತ್ರಿ ಏಲಕ್ಕಿ ತಿಂದರೆ ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ.
ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ.
ಏಲಕ್ಕಿಯನ್ನು ಮೌತ್ ಫ್ರೆಷನರ್ ರೀತಿಯಲ್ಲೂ ಬಳಸಬಹುದು.
ಏಲಕ್ಕಿ ಸೇವನೆಯಿಂದ ಜೀರ್ಣಶಕ್ತಿಯೂ ವೃದ್ಧಿಯಾಗುತ್ತದೆ.
ಅಸ್ತಮಾ, ಮಧುಮೇಹ (ಡಯಾಬಿಟಿಸ್), ಹೃದಯ ಸಂಬಂಧಿ ಸಮಸ್ಯೆಗಳಿಗೂ ಏಲಕ್ಕಿಯಿಂದ ಪರಿಹಾರ ಸಿಗುತ್ತದೆ.
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ನಿಯಮಿತವಾಗಿ ಏಲಕ್ಕಿ ಬಳಸಿದರೆ ಪರಿಣಾಮ ಖಂಡಿತ ಗೊತ್ತಾಗಲಿದೆ.
ಏಲಕ್ಕಿಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಪುರುಷರು ದಿನವೂ ರಾತ್ರಿ ಒಂದು ಏಲಕ್ಕಿ ತಿನ್ನುವುದರಿಂದ ಲೈಂಗಿಕ ದೌರ್ಬಲ್ಯದಿಂದ ಪಾರಾಗಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಸಂಶೋಧನೆಯೊಂದು ಹೇಳಿದೆ.
ಪುಡಿ ರೂಪದಲ್ಲಿ ತೆಗೆದುಕೊಂಡಾಗ, ಏಲಕ್ಕಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.