
ಈ ವರ್ಷ ಗುರು ಪೂರ್ಣಿಮೆ ಹಬ್ಬವನ್ನು ಜುಲೈ 10 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರುಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವರು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುತ್ತಾರೆ.

ಗುರು ಪೂರ್ಣಿಮೆ ಹಬ್ಬವು ಗುರು ಮತ್ತು ಶಿಷ್ಯರ ನಡುವಿನ ಪವಿತ್ರ ಸಂಬಂಧದ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ನಿಮ್ಮ ಗುರುಗಳಿಗೆ ಕೆಲವು ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮತ್ತು ಅವರಿಂದ ಆರ್ಶೀವಾದವನ್ನು ಪಡೆಯಿರಿ.

ಜ್ಯೋತಿಷ್ಯದಲ್ಲಿ, ಹಳದಿ ಬಣ್ಣವನ್ನು ಗುರು ಬೃಹಸ್ಪತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಅವರ ಪೂಜೆಯು ಜ್ಞಾನ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಆದ್ದರಿಂದ, ಗುರು ಪೂರ್ಣಿಮೆಯಂದು, ನಿಮ್ಮ ಗುರುಗಳಿಗೆ ಹಳದಿ ಬಣ್ಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ.

ಗುರುಗಳಿಗೆ ಪೀತಾಂಬರ ಅಥವಾ ಶಾಲು ಮುಂತಾದ ಹಳದಿ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದಲ್ಲದೇ ಗುರುಗಳ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದ ಪಡೆಯುವುದು ಅತ್ಯಂತ ಶ್ರೇಷ್ಠ ಕೊಡುಗೆ ಎಂದು ಹೇಳಲಾಗುತ್ತದೆ.

ನೀವು ನಿಮ್ಮ ಶಿಕ್ಷಕರಿಗೆ ಪೆನ್ನು, ಡೈರಿ ಅಥವಾ ನೋಟ್‌ಪ್ಯಾಡ್‌ನಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೇ ಗುರುಗಳು ನೀಡಿದ ಜ್ಞಾನ ಮತ್ತು ಬೋಧನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೂಡ ಅವರಿಗೆ ನೀಡುವ ಉಡುಗೊರೆಗಳಲ್ಲಿ ಒಂದು.

ಭಗವದ್ಗೀತೆ, ರಾಮಾಯಣ, ಉಪನಿಷತ್ತುಗಳು ಅಥವಾ ಯಾವುದೇ ಇತರ ಧಾರ್ಮಿಕ ಗ್ರಂಥಗಳನ್ನು ನಿಮ್ಮ ಗುರುಗಳಿಗೆ ಉಡುಗೊರೆಯಾಗಿ ನೀಡಬಹುದು. ಇದು ಜೀವನದಲ್ಲಿ ಮಂಗಳವನ್ನು ತರುತ್ತದೆ. ಜೊತೆಗೆ ಇದು ಆಧ್ಯಾತ್ಮಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷ್ಯದಲ್ಲಿ, ಹಳದಿ ಬಣ್ಣವನ್ನು ಗುರು ಬೃಹಸ್ಪತಿಯ ಅಂಶವೆಂದು ಪರಿಗಣಿಸಲಾಗಿರುವುದರಿಂದ ನಿಮ್ಮ ಗುರುಗಳಿಗೆ ಹಳದಿ ಬಣ್ಣದ ಸಿಹಿಯನ್ನು ನೀಡಿ. ನೀವು ನಿಮ್ಮ ಗುರುಗಳಿಗೆ ಬೇಸನ್ ಲಡ್ಡು, ಕೇಸರ್ ಬರ್ಫಿ ಅಥವಾ ಬೂಂದಿ ಲಡ್ಡು ಮುಂತಾದ ಹಳದಿ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಜೀವನದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.