
ನಟಿ ಚೈತ್ರಾ ವಾಸುದೇವನ್ ಅವರು ‘ಬಿಗ್ ಬಾಸ್’ ಮನೆಗೆ ತೆರಳಿ ಸಾಕಷ್ಟು ಜನಪ್ರಿಯತೆ ಪಡೆದರು. ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿರೋ ಅವರು ಸಾಕಷ್ಟು ಹಿಂಬಾಲಕರನ್ನು ಪಡೆದಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ಚೈತ್ರಾ ವಾಸುದೇವನ್ ಅವರು ಜಿಮ್ಗೆ ತೆರಳಿದ್ದಾರೆ. ಅಲ್ಲಿ ವರ್ಕೌಟ್ ಮಾಡಿದ್ದಾರೆ. ಆ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರ ಫೋಟೋಗಳು ಮೆಚ್ಚುಗೆ ಪಡೆದಿವೆ.

ಚೈತ್ರಾ ಅವರು ಬೈಸೆಪ್ಸ್ ತೋರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬಾಡಿ ಬಿಲ್ಡರ್ ರೀತಿಯಲ್ಲಿ ದೇಹವನ್ನು ಶೇಪ್ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳು ಕಾಡಿದೆ. ಈ ಫೋಟೋ ಗಮನ ಸೆಳೆದಿದೆ.

‘ಪವರ್ ವುಮನ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನೀವು ನಿಜಕ್ಕೂ ಸ್ಫೂರ್ತಿದಾಯಕ ಮಹಿಳೆ’ ಎಂದು ಕೆಲವರು ಹೇಳಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿಯಿಂದ ಲೈಕ್ಸ್ ಸಿಕ್ಕಿದೆ.

ಚೈತ್ರಾ ವಾಸುದೇವನ್ ಅವರು ಈವೆಂಟ್ ಮ್ಯಾನೇಜ್ಮೆಂಟ್ ಆರಂಭಿಸಿದ್ದಾರೆ. ಮಿಲನಾ ನಾಗರಾಜ್ ಬೇಬಿ ಶವರ್ಗೆ ಇವರೇ ಹೋಸ್ಟ್ ಮಾಡಿದ್ದರು. ಅವರು ಅನೇಕ ಸೆಲೆಬ್ರಿಟಿಗಳ ಈವೆಂಟ್ನ ಹೋಸ್ಟ್ ಮಾಡುತ್ತಿದ್ದಾರೆ.