ನೆಗಡಿ, ಹೃದ್ರೋಗ, ಕ್ಯಾನ್ಸರ್ಗೂ ರಾಮಬಾಣ ಕ್ಯಾಮೊಮೈಲ್ ಟೀ
ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರಾಮವೆನಿಸುತ್ತದೆ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.
1 / 16
ಕಾಫಿ, ಟೀ, ಹಾರ್ಲಿಕ್ಸ್ ಮುಂತಾದ ಪಾನೀಯಗಳ ಜಾಗದಲ್ಲಿ ಈಗ ಹರ್ಬಲ್ ಟೀ ಸ್ಥಾನ ಪಡೆದುಕೊಳ್ಳತೊಡಗಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಕಷಾಯ, ಹರ್ಬಲ್ ಟೀಗಳ ಬಗ್ಗೆ ಜಾಸ್ತಿ ಒಲವು ತೋರಲಾರಂಭಿಸಿದ್ದಾರೆ.
2 / 16
ಈಗಿನ ಯುವಪೀಳಿಗೆ ಕೂಡ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆಯುರ್ವೇದ, ಆರ್ಗಾನಿಕ್, ಹರ್ಬಲ್ನಂತಹ ಆಯ್ಕೆಗಳತ್ತ ಗಮನ ಹರಿಸುತ್ತಿದೆ.
3 / 16
ಈಗೀಗ ಫಿಲ್ಟರ್ ಕಾಫಿಯ ಬದಲು ಗ್ರೀನ್ ಟೀ, ಜಿಂಜರ್ ಟೀ, ಬ್ಲಾಕ್ ಕಾಫಿ, ಲೆಮನ್ ಟೀ, ಪುದೀನಾ ಟೀ ಹೀಗೆ ಹರ್ಬಲ್ ಟೀಗಳು ಹೆಚ್ಚಾಗಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯೆಂದರೆ ಕ್ಯಾಮೊಮೈಲ್ ಟೀ.
4 / 16
ಕ್ಯಾಮೊಮೈಲ್ ಹರ್ಬಲ್ ಮೆಡಿಸಿನ್ಗಳಲ್ಲಿ ಬಳಸಲಾಗುವ ಒಂದು ಹೂವು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ.
5 / 16
ಕ್ಯಾಮೊಮೈಲ್ ಹೂವುಗಳ ಎಸಳುಗಳಿಂದ ಮಾಡಲಾಗುವ ಟೀ ಪುಡಿಗೆ ಈಗ ಭಾರೀ ಬೇಡಿಕೆಯಿದೆ. ಈ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಉಪಯೋಗಗಳಿವೆ.
6 / 16
ಕ್ಯಾಮೊಮೈಲ್ ಟೀ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಪ್ರತಿದಿನವೂ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬ ಮಾಹಿತಿ ಇಲ್ಲಿದೆ.
7 / 16
ಕ್ಯಾಮೊಮೈಲ್ ಟೀ ಬ್ಯಾಗ್ಗಳು ಈಗ ಬಹುತೇಕ ಕಡೆ ಸಿಗುತ್ತದೆ. ಇದನ್ನು ಗ್ರೀನ್ ಟೀಯಂತೆ ಬಳಸಬಹುದು.
8 / 16
ಈ ಚಹಾ ಗಾಯವನ್ನು ಮಾಗಿಸುವುದು, ಸಂಧಿವಾತ, ಸುಟ್ಟ ಗಾಯಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸಲು ಸಹಕಾರಿಯಾಗಿದೆ.
9 / 16
ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ.
10 / 16
ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿ
11 / 16
ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ದೇಹದಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣಗಳನ್ನು ಉತ್ತಮ ಮಟ್ಟದಲ್ಲಿರಿಸುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಕ್ಯಾಮೊಮೈಲ್ ಕಡಿಮೆ ಮಾಡುತ್ತದೆ.
12 / 16
ಕ್ಯಾಮೊಮೈಲ್ ಟೀಯಲ್ಲಿರುವ ಎಪಿಜೆನಿನ್ ಎಂಬ ಅಂಶ ಸುಖವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
13 / 16
ಕ್ಯಾಮೊಮೈಲ್ ಟೀ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಶೀತ, ಅಸ್ವಸ್ಥತೆ, ನಿತ್ರಾಣ, ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
14 / 16
ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರಾಮವೆನಿಸುತ್ತದೆ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.
15 / 16
ಈ ಕ್ಯಾಮೊಮೈಲ್ ಟೀ ಸೇವಿಸುವುದರಿಂದ ಮೂಳೆಗಳ ಸವಕಳಿ ಮತ್ತು ತುಂಡಾಗುವಿಕೆಯನ್ನು ತಡೆಯಬಹುದು.
16 / 16
ಕ್ಯಾಮೊಮೈಲ್ ಟೀ ಚರ್ಮ ಸುಕ್ಕಾಗುವಿಕೆ, ಒಣಗುವುದನ್ನು ತಡೆದು, ಚರ್ಮವನ್ನು ಹೈಡ್ರೀಕರಣಗೊಳಿಸುತ್ತದೆ.