ಚಾಣಕ್ಯ ನೀತಿ: ವ್ಯಕ್ತಿಯನ್ನು ಶ್ರೀಮಂತವಾಗಿಸುತ್ತವೆ ಈ ನಾಲ್ಕು ಅಭ್ಯಾಸಗಳು..

Chanakya Teachings: ಬದುಕಿಗೆ ಅಗತ್ಯವಾದ ನೀತಿಯನ್ನು ಚಾಣಕ್ಯ ನೀತಿ’ಯಲ್ಲಿ ವಿವರಿಸಿದ್ದಾನೆ ಚಾಣಕ್ಯ. ವ್ಯಕ್ತಿಯನ್ನು ಶ್ರೀಮಂತವಾಗಿಸುವ ಸಂಗತಿಗಳ ಬಗ್ಗೆ ಆತ ಹೇಳುತ್ತಾ, ಹಣವನ್ನು ಕೂಡಿಡಿ.. ಅಗತ್ಯದಷ್ಟು ಮಾತ್ರ ಖರ್ಚು ಮಾಡಿ.. ಅನೈತಿಕ ಮಾರ್ಗದಲ್ಲಿ ಸಾಗಬೇಡಿ.. ಹಣದ ಬಗ್ಗೆ ಜಾಗರೂಕರಾಗಿರಿ.. ಎಂದು ಸಲಹೆ ನೀಡಿದ್ದಾನೆ. ಎಚ್ಚರ ತಪ್ಪಿದರೆ ಇದೇ ಅಂಶಗಳು ಬಡತನ ಉಂಟುಮಾಡುತ್ತವೆ ಎಂದು ಆತ ಹೇಳಿದ್ದಾನೆ.

Apr 20, 2022 | 6:40 AM
shivaprasad.hs

|

Apr 20, 2022 | 6:40 AM

ವ್ಯಕ್ತಿಯ ಜೀವನವು ಅಮೂಲ್ಯವಾಗಿದೆ. ನೀವು ಜೀವನವನ್ನು ಅರ್ಥಪೂರ್ಣವಾಗಿಸಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಈ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಆ ವಿಷಯಗಳು ಯಾವುವು? ಯಾವುದನ್ನು ಅಳವಡಿಸಿಕೊಂಡರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಯಶಸ್ವಿಗೊಳಿಸಬಹುದು? ಈ ಕುರಿತ ಮಾಹಿತಿ ಇಲ್ಲಿದೆ.

1 / 5
ಹಣವನ್ನು ಕೂಡಿಡಿ: ಸಂಪತ್ತನ್ನು ಕೂಡಿಡಬೇಕು. ಕಾರಣ, ಅದು ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಕೆಟ್ಟ ಸಮಯದಲ್ಲಿ ಹಣವು ನಿಜವಾದ ಸ್ನೇಹಿತನ ಪಾತ್ರವನ್ನು ವಹಿಸುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

2 / 5
ಅಗತ್ಯವಿದ್ದರೆ ಮಾತ್ರ ಖರ್ಚು ಮಾಡಿ: ಹಲವರಿಗೆ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವ ಅಭ್ಯಾಸವಿರುತ್ತದೆ. ಇದರಿಂದ ಸಮಸ್ಯೆ ಉಂಟಾಗಬಹುದು. ಇದರಿಂದ ಮನೆಯಲ್ಲಿ ಕಲಹವೂ ಉಂಟಾಗಬಹುದು. ಹಾಗಾಗಿ ಅನಗತ್ಯವಾಗಿ ಖರ್ಚು ಮಾಡಬೇಡಿ. ಅಗತ್ಯವಿದ್ದಾಗ ಮಾತ್ರ ಹಣ ಖರ್ಚು ಮಾಡಿ.

3 / 5
ಅನೈತಿಕ ಕೆಲಸಗಳನ್ನು ಮಾಡಬೇಡಿ: ಎಂದಿಗೂ ಅನೈತಿಕ ಕೃತ್ಯಗಳಲ್ಲಿ ತೊಡಗಬಾರದು. ಕಾರಣ, ಈ ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಡವನನ್ನಾಗಿಸುತ್ತವೆ. ಈ ಬಡತನ ಅರ್ಥಿಕವಾಗಿಯೂ, ಬೌದ್ಧಿಕವಾಗಿಯೂ ಆಗಬಹುದು. ಹೀಗಾಗಿ ಎಂದಿಗೂ ನೈತಿಕ ಮಾರ್ಗದಲ್ಲೇ ಸಾಗಿ.

4 / 5
ಹಣವನ್ನು ರಕ್ಷಿಸಿ: ಜನರು ಕಷ್ಟಪಟ್ಟು ದುಡಿಮೆ ಮಾಡುತ್ತಾರೆ. ಅದನ್ನು ಸುಮ್ಮನೆ ಕಳೆಯಬಾರದು. ಅದು ಎಂತಹ ಪರಿಸ್ಥಿತಿಯನ್ನೂ ತಂದೊಡ್ಡಬಲ್ಲದು. ಹೀಗಾಗಿ ಹಣವನ್ನು ರಕ್ಷಿಸಿ, ಅದರ ಬಗ್ಗೆ ಜಾಗರೂಕರಾಗಿರಿ. ಈ ಅಭ್ಯಾಸಗಳು ಎಲ್ಲರಿಗೂ ತಿಳಿದಿರಬಹುದು; ಆದರೆ ಎಚ್ಚರ ತಪ್ಪಿದರೆ ಇವೇ ಅಂಶಗಳು ನಮ್ಮನ್ನು ಸಂಕಷ್ಟಕ್ಕೆ ತಳ್ಳುತ್ತವೆ ಎನ್ನುತ್ತಾನೆ ಚಾಣಕ್ಯ.

5 / 5

Follow us on

Most Read Stories

Click on your DTH Provider to Add TV9 Kannada