- Kannada News Photo gallery Chanakya niti these type of friends in life will help you how to choose friends
Chanakya Niti: ಚಾಣಕ್ಯ ನೀತಿ; ಜೀವನದಲ್ಲಿ ನಿಜವಾದ ಸ್ನೇಹಿತರು ಯಾರು?
ಆಚಾರ್ಯ ಚಾಣಕ್ಯರು ಉತ್ತಮ ರಾಜಕೀಯ ಜ್ಞಾನವನ್ನು ಹೊಂದಿದ್ದವರು ಮಾತ್ರವಲ್ಲದೆ ರಾಜತಾಂತ್ರಿಕತೆಯಲ್ಲಿಯೂ ನಿಪುಣರಾಗಿದ್ದವರು. ಪ್ರತಿಯೊಬ್ಬ ವ್ಯಕ್ತಿಗೆ ಎಂತಹ ಸ್ನೇಹಿತರು ಬೇಕು? ಎಂಥವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳಬೇಕು? ಯಾವ ರೀತಿಯ ಸ್ವಭಾವದವರನ್ನು ಕಣ್ಣುಮುಚ್ಚಿ ನಂಬಬಹುದು ಎಂಬ ಬಗ್ಗೆ ತಮ್ಮ ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಕೆಲವು ವಿಚಾರಗಳ ಮಾಹಿತಿ ಇಲ್ಲಿದೆ.
Updated on:Apr 08, 2023 | 10:02 AM

ಚಾಣಕ್ಯರ ಪ್ರಕಾರ, ನಿಜವಾದ ಸ್ನೇಹಿತ ಎಂದರೆ ನಿಮ್ಮ ಸಂತೋಷದ ಸಮಯದಲ್ಲಿ ಮಾತ್ರ ನಿಮ್ಮೊಂದಿಗೆ ಉಳಿಯುವವನಲ್ಲ. ಕಷ್ಟದ ಸಮಯದಲ್ಲಿಯೂ ನಿಮ್ಮನ್ನು ಬೆಂಬಲಿಸುವವನೇ ನಿಜವಾದ ಸ್ನೇಹಿತ. ಅಂತಹ ಸ್ನೇಹಿತರ ಸಹವಾಸವು ವ್ಯಕ್ತಿಗೆ ಯಾವುದೇ ಪರಿಸ್ಥಿತಿಯ ವಿರುದ್ಧ ಹೋರಾಡುವ ಧೈರ್ಯವನ್ನು ನೀಡುತ್ತದೆ. ದುಃಖದಲ್ಲಿ ನಿಮ್ಮನ್ನು ಬೆಂಬಲಿಸುವ ಸ್ನೇಹಿತರು ಎಂದಿಗೂ ನಿಮ್ಮನ್ನು ಬಿಡುವುದಿಲ್ಲ ಎಂದು ನಂಬಲಾಗಿದೆ.

ನೀವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಯಾರು ನಿಮಗೆ ಸಹಾಯ ಮಾಡುತ್ತಾರೆಯೋ ಅಂತಹ ಸ್ನೇಹಿತರು ನಿಜವಾದ ಗೆಳೆಯರು. ಇದಲ್ಲದೆ, ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ನಿಮಗೆ ಸಹಾಯ ಮಾಡುವ ಸ್ನೇಹಿತರೊಂದಿಗೆ ಯಾವಾಗಲೂ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂದು ಚಾಣಕ್ಯ ತನ್ನ ನೀತಿಗಳಲ್ಲಿ ಹೇಳಿದ್ದಾರೆ.

ಬಹಳ ನಿಕಟ ಬಾಂಧವ್ಯ ಹೊಂದಿರುವ ಅಥವಾ ವಿಶೇಷ ವ್ಯಕ್ತಿಯೊಬ್ಬರನ್ನು ತೊರೆದಾಗ ಆ ಸಮಯವು ಜನರಿಗೆ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಸಮಯದಲ್ಲಿ, ಒಳ್ಳೆಯ ಮತ್ತು ನಿಜವಾದ ಸ್ನೇಹಿತ ಅತ್ಯಂತ ಅವಶ್ಯಕ. ಚಾಣಕ್ಯನ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ಉಳಿಯುವ, ನಿಮ್ಮನ್ನು ಬೆಂಬಲಿಸುವವರನ್ನು ನಿಮ್ಮ ನಿಜವಾದ ಸ್ನೇಹಿತ ಎಂದು ಪರಿಗಣಿಸಬಹುದಾಗಿದೆ.

ಚಾಣಕ್ಯ ಹೇಳುವ ಪ್ರಕಾರ, ಉತ್ತಮ ಸ್ನೇಹಿತರಾದವರು ಅನಾರೋಗ್ಯದ ಸಂದರ್ಭದಲ್ಲಿಯೂ ನಿಮ್ಮನ್ನು ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ನಿಮಗೆ ಸಹಾಯ ಮಾಡುವ ಸ್ನೇಹಿತರೊಂದಿಗೆ ಸ್ನೇಹ ಬೆಳೆಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಪ್ರತಿಕೂಲ ಸಂದರ್ಭಗಳಲ್ಲಿಯೂ ಇಂಥ ಗೆಳೆಯರನ್ನು ನೀವು ಕಣ್ಣುಮುಚ್ಚಿ ನಂಬಬಹುದು.

ಯಾರ ಮನಸ್ಸು ಸ್ಪಷ್ಟವಾಗಿರುತ್ತದೆ ಮತ್ತು ತಮ್ಮ ಸಂತೋಷವನ್ನು ತ್ಯಾಗ ಮಾಡುವ ಮೂಲಕ ಇತರರಿಗೆ ಒಳ್ಳೆಯದನ್ನು ಮಾಡುತ್ತಾರೆಯೋ ಹೆಚ್ಚಿನ ಜನರು ಅಂತಹ ಜನರಿಗೆ ಮೋಸ ಮಾಡುತ್ತಾರೆ. ಒಬ್ಬ ವ್ಯಕ್ತಿಯು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಪಡೆದಾಗ, ಅವನು ನೋವು ಅನುಭವಿಸುತ್ತಾನೆ. ಹೆಚ್ಚಿನ ಜನರು ಔದಾರ್ಯದ ದುರುಪಯೋಗವನ್ನು ಶಪಿಸಲು ಪ್ರಾರಂಭಿಸುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ.
Published On - 9:20 am, Sat, 8 April 23



















