Suzuki WagonR: ಹೊಸ ಲುಕ್​ನಲ್ಲಿ ಮತ್ತೆ ಬಂದ ವ್ಯಾಗನ್​ಆರ್: ಬೆಲೆಯಲ್ಲೂ ವ್ಯತ್ಯಾಸ

| Updated By: ಝಾಹಿರ್ ಯೂಸುಫ್

Updated on: Sep 06, 2021 | 7:02 PM

Suzuki WagonR Smile: ಇನ್ನು ಲೈಟ್​ ವಿನ್ಯಾಸ ಕೂಡ ಬದಲಾಗಿದ್ದು, ಈ ಹಿಂದಿನ ಸ್ಕೈರ್ ಡೂಮ್ ಬದಲಿಗೆ ರೌಂಡ್ ಹೆಡ್​ಲೈಟ್​ಗಳನ್ನು ನೀಡಲಾಗಿದೆ. ಈ ಲೈಟ್​ಗಳು ಮಿನಿ ಕೂಪರ್ ಕಾರಿನ ಲೈಟ್​ಗಳ ವಿನ್ಯಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

1 / 7
ವಿಶ್ವದ ಜನಪ್ರಿಯ ವಾಹನ ತಯಾರಿಕಾ ಕಂಪೆನಿ ಸುಜುಕಿ ತನ್ನ ವ್ಯಾಗನ್​ಆರ್ ಕಾರಿನ ಹೊಸ ಎಡಿಷನ್ ಬಿಡುಗಡೆ ಮಾಡಿದೆ. ವ್ಯಾಗನಾರ್ ಸ್ಮೈಲ್ ಹೆಸರಿನಲ್ಲಿ ನೂತನ ಕಾರು ಜಪಾನ್​ನಲ್ಲಿ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಇದೇ ಕಾರು ಭಾರತದ ಮಾರುಕಟ್ಟೆಗೂ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.

2 / 7
ವ್ಯಾಗನ್​ಆರ್ ಸ್ಮೈಲ್ ಔಟ್​ ಲುಕ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಮಿನಿ ವ್ಯಾನ್​ನಂತೆ ಇದರ ಮೇಲ್ಮೈಯನ್ನು ರೂಪಿಸಲಾಗಿದೆ. ಅಲ್ಲದೆ  ಎರಡೂ ಬದಿಗಳಲ್ಲಿ ಸ್ಲೈಡಿಂಗ್ ಡೋರ್‌ಗಳನ್ನು ನೀಡಿರುವುದು ವಿಶೇಷ. ಅಂದರೆ ಹೊಸ ವ್ಯಾಗನ್​ಆರ್​ನಲ್ಲಿ ಪ್ರಸ್ತುತ ಭಾರತದಲ್ಲಿನ ಓಮ್ನಿ ವ್ಯಾನ್​ನಂತೆ ಸ್ಲೈಡಿಂಗ್ ಡೋರ್​ಗಳನ್ನು ನೀಡಲಾಗಿದೆ.

3 / 7
ಇನ್ನು ಲೈಟ್​ ವಿನ್ಯಾಸ ಕೂಡ ಬದಲಾಗಿದ್ದು, ಈ ಹಿಂದಿನ ಸ್ಕೈರ್ ಡೂಮ್ ಬದಲಿಗೆ ರೌಂಡ್ ಹೆಡ್​ಲೈಟ್​ಗಳನ್ನು ನೀಡಲಾಗಿದೆ. ಈ ಲೈಟ್​ಗಳು ಮಿನಿ ಕೂಪರ್ ಕಾರಿನ ಲೈಟ್​ಗಳ ವಿನ್ಯಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇನ್ನು ರೇಡಿಯೇಟರ್ ಗ್ರಿಲ್ ಮತ್ತು ಕ್ರೋಮ್‌ ನೀಡಲಾಗಿದ್ದು ಹಾಗೆಯೇ ಹಿಂಭಾಗದಲ್ಲಿನ ಟೈಲ್‌ಲ್ಯಾಂಪ್‌ಗಳು ಲಂಬ ಆಕಾರದಲ್ಲಿ ನೀಡಲಾಗಿದೆ.

4 / 7
 ಸಮತಟ್ಟಾದ ಮೇಲ್ಛಾವಣಿ ಹೊಂದಿರುವ ವ್ಯಾಗನ್ಆರ್ ಸ್ಮೈಲ್ ಪ್ರಸ್ತುತ ವ್ಯಾಗನ್​ಆರ್ ಮಾಡೆಲ್​ಗಿಂತ 45 ಮಿಮೀ ದೊಡ್ಡದು ಎಂಬುದು ವಿಶೇಷ. ಇನ್ನು ಈ ಕಾರಿಗೆ ಬ್ರ್ಯಾಂಡ್ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ನೀಡಿರುವುದು ಕಾರಿನ ಮತ್ತಷ್ಟು ಸೊಗಸಾಗಿಸಿದೆ.

5 / 7
ವ್ಯಾಗನ್​ಆರ್ ಸ್ಮೈಲ್ ನ ಒಳ ವಿನ್ಯಾಸಕ್ಕೆ ಸುಜುಕಿ ವಿಶೇಷ ಗಮನ ನೀಡಿದ್ದು, ಅದರಂತೆ ಈ ಕಾರಿನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡ್ಯುಯಲ್-ಶೇಡ್ ಥೀಮ್‌ನಲ್ಲಿ ಡ್ಯಾಶ್‌ಬೋರ್ಡ್ ನೀಡಲಾಗಿದೆ. ಇದಲ್ಲದೆ ಡ್ಯಾಶ್​ಬೋರ್ಡ್​ಗೆ ಹೊಂದಿಕೊಂಡಂತೆ ಮೊಬೈಲ್​ ಫೋನ್ ಸೇರಿದಂತೆ ವಸ್ತುಗಳನ್ನು ಇಡಲು ಆಕರ್ಷಕ ಬಾಕ್ಸ್​ಗಳನ್ನು ನೀಡಿದೆ.

6 / 7
 ಇನ್ನು ಸುಜುಕಿ ವ್ಯಾಗನ್​ಆರ್ ಸ್ಮೈಲ್​ನಲ್ಲಿ 657 ಸಿಸಿ ಸಾಮರ್ಥ್ಯದ ಮೂರು ಸಿಲಿಂಡರ್ ನೈಸರ್ಗಿಕ ಆಕಾಂಕ್ಷಿತ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು,  ಈ ಎಂಜಿನ್ 47 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದು 58 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಇದರಲ್ಲಿ CVT ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ನೀಡಲಾಗಿದೆ.

7 / 7
ಜಪಾನ್​ನಲ್ಲಿ ಈ ಕಾರುಗಳನ್ನು ಫ್ರಂಟ್-ವೀಲ್ ಡ್ರೈವರ್ ಮತ್ತು ಆಲ್-ವೀಲ್-ಡ್ರೈವ್ ಆಯ್ಕೆಗಳಲ್ಲಿ ಸುಜುಕಿ ಬಿಡುಗಡೆ ಮಾಡಿದ್ದು,  ಎಂಟ್ರಿ ಲೆವೆಲ್ ಟ್ರಿಮ್ ಮತ್ತು ಟಾಪ್ ವೆರಿಯಂಟ್ ಬೆಲೆಯಲ್ಲಿ ಭಾರೀ ವ್ಯತ್ಯಾಸವಿದೆ. ಜಪಾನ್ ಮಾರುಕಟ್ಟೆಯಲ್ಲಿ ಹೊಸ ವ್ಯಾಗನ್​ಆರ್​ ಸ್ಮೈಲ್ 1.29 ಮಿಲಿಯನ್ ಯೆನ್ (ಸುಮಾರು 8.30 ಲಕ್ಷ) ಮತ್ತು 1.71 ಮಿಲಿಯನ್ ಯೆನ್ (ಸುಮಾರು 11.44 ಲಕ್ಷ) ರೂ.ನಲ್ಲಿ ಖರೀದಿಗೆ ಲಭ್ಯವಿದೆ.