- Kannada News Photo gallery Chikkaballapur Isha Foundation Adiyogi statue pulls heavy crowd in weekend
ಚಿಕ್ಕಬಳ್ಳಾಪುರ: ನಂದಿ ನೋಡಲು ಬಂದವರು, ಒಂಟಿ ಕಾಲಲ್ಲಿ ನಿಂತು ಯೋಗ-ಭಕ್ತಿ ಭಾವದಿಂದ ಆದಿಯೋಗಿ ಶಿವನ ಕಣ್ತುಂಬಿಕೊಂಡರು! ಚಿತ್ರಗಳಿವೆ ನೋಡಿ
Adiyogi statue: ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.
Updated on:Jan 23, 2023 | 4:33 PM

ಚಿಕ್ಕಬಳ್ಳಾಪುರದ ಸಮೀಪವೇ ದಕ್ಷಿಣಕ್ಕೆ 112 ಅಡಿಗಳ ಮನಮೋಹಕ, ಭಕ್ತಿ ಪರಾಕಾಷ್ಠೆಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೇ ತಡ ಶಿವನ ವಿಗ್ರಹಕ್ಕೆ ರಾಜಧಾನಿ ಬೆಂಗಳೂರಿನ ಜನ ಫಿದಾ ಆಗಿದ್ದಾರೆ. ಈ ಕುರಿತು ಒಂದು ವರದಿ.

ಆದಿಯೋಗಿ ವಿಗ್ರಹ ನೋಡಲು ಮುಗಿಬಿದ್ದಿದ್ದಾರೆ. ಆದಿಯೋಗಿ ಸ್ಥಳದಲ್ಲಿ ಒಂದೆಡೆ ಭಕ್ತಿಯ ಪರಾಕಷ್ಠೆಯಾದ್ರೆ... ಮತ್ತೊಂದೆಡೆ ಎಲ್ಲೆಲ್ಲಿ ನೋಡಿದರೂ ಜನ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ ಸಾಮಾನ್ಯವಾಗಿದೆ. (ವರದಿ-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

ಬೃಹತ್ ಶಿವನ ವಿಗ್ರಹದ ಮುಂದೆ ನಿಂತು ಕೆಲವರು ಒಂಟಿ ಕಾಲಲ್ಲಿ ಯೋಗ, ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಿದರು...

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್ ನ ನೂತನ ಆಶ್ರಮದಲ್ಲಿ.

ವೀಕೆಂಡ್ ರಜೆಯಾದ ಕಾರಣ ಶನಿವಾರ-ಭಾನುವಾರ ರಾಜಧಾನಿ ಬೆಂಗಳೂರಿನ ಜನ, ಸಾವಿರಾರು ಕಾರುಗಳಲ್ಲಿ ಆಶ್ರಮಕ್ಕೆ ಆಗಮಿಸಿ ಆದಿಯೋಗಿ ಶಿವನ ಸನ್ನಿಧಿಯಲ್ಲಿ ಒಂದು ದಿನ ಕಳೆದ್ರು.

ತಮಿಳುನಾಡಿನ ಕೊಯಮತ್ತೂರು ಬಳಿ ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ... ಎಲ್ಲಿಯೂ 112 ಅಡಿಗಳ ಶಿವನ ವಿಗ್ರಹ ಇಲ್ಲ. ಇದ್ರಿಂದ ಶಿವನ ಭಕ್ತರು ಶಿವನನ್ನು ನೋಡಿ ಕಣ್ತುಂಬಿಕೊಳ್ತಿದ್ದ ದೃಶ್ಯಗಳು ಕಂಡು ಬಂತು.

ವಾರಾಂತ್ಯ ಸಂಜೆ 7 ಗಂಟೆ ಸಮಯದಲ್ಲಿ ಶಿವನ ವಿಗ್ರಹದ ಮೇಲೆ ಲೇಸರ್ ಶೋ ನಡೆಯುತ್ತೆ ಎಂಬುದನ್ನು ಅರಿತು ಸಾವಿರಾರು ಜನ ಮಧ್ಯಾಹ್ನದಿಂದ ಸಂಜೆವರೆಗೂ ಕಾದು ಕುಳಿತಿದ್ರು. ಆದ್ರೆ ತಾಂತ್ರಿಕ ಅಡಚಣೆಯಿಂದ ಲೇಸರ್ ಶೋ ರದ್ದು ಮಾಡಿರುವ ಕಾರಣ ಜನ ನಿರಾಸೆಯಿಂದ ವಾಪಸ್ ಮರಳುವಂತಾಯಿತು.

ವಿಕೆಂಡ್ ನಲ್ಲಿ ನಂದಿಗಿರಿಧಾಮ ಪ್ರವಾಸಕ್ಕೆ ಬರ್ತಿರುವ ರಾಜಧಾನಿ ಬೆಂಗಳೂರಿನ ಜನ...

ಇನ್ನು ಕೆಲವರು... ಕೈಯಲ್ಲಿರುವ ಮೊಬೈಲ್ ಹಿಡಿದು, ಶಿವನ ಮುಂದೆ ಸೆಲ್ಫಿ ತೆಗೆದುಕೊಳ್ತಿರುವ ದೃಶ್ಯ.

ನಂದಿಗಿರಿಧಾಮ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ಬಳಿ ಆಗಮಿಸ್ತಿದ್ದಾರೆ.

ಆದ್ರೆ ಆಶ್ರಮ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಯಾವುದೆ ಮೂಲಭೌತ ಸೌಕರ್ಯಗಳು ಇಲ್ಲ.


ಇದ್ರಿಂದ ಆದಿಯೋಗಿ ಬಳಿ ಹೋಗುವವರು ಊಟ ತಿಂಡಿ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಹೋದರೆ ಕೆಲ ಹೊತ್ತು ಕಾಲ ಕಳೆಯಬಹುದು.
Published On - 12:58 pm, Mon, 23 January 23




