Kannada News » Photo gallery » chikkaballapura: The dry land of the plains is now a mountainous land! Wherever you look, it is lush and green, here is a glimpse of it
ಬಯಲು ಸೀಮೆಯ ಬರದ ನಾಡು ಈಗ ಮಲೆನಾಡು! ಎಲ್ಲಿ ನೋಡಿದರೂ ನೀರು ಹಚ್ಚ ಹಸಿರು, ಇಲ್ಲಿದೆ ನೋಡಿ ಅದರ ಝಲಕ್
TV9kannada Web Team | Edited By: Kiran Hanumant Madar
Updated on: Jan 23, 2023 | 6:17 PM
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಬರುವುದಿರಲಿ ಬೆಳೆ ಬೆಳೆಯುವುದು ಕಷ್ಟವಾಗಿದ್ದು, ಇದೀಗ ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಅಲ್ಲಿನ ಕೆರೆ ಕುಂಟೆ ನದಿಗಳು ತುಂಬಿ ಹರಿಯುತ್ತಿದೆ. ಎಲ್ಲಿ ನೋಡಿದರೂ ಹಸಿರು ಹಾಗೂ ಜುಳು ಜುಳು ನೀನಾದದ ಜೊತೆಗೆ ಪಕ್ಷಿಗಳ ಕಲರವ ಕಾಣುತ್ತಿದೆ.
Jan 23, 2023 | 6:17 PM
ಬರದ ನಾಡು ಬಯಲು ಸೀಮೆಯ ಬೀಡು ಎಂದೆ ಕುಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಇದೀಗ ಈಗ ಎಲ್ಲಿ ನೋಡಿದರೂ ನೀರಿನ ಸೊಬಗು, ಹಚ್ಚ ಹಸಿರಿನ ಕಾನನ, ತುಂಬಿ ತುಳುಕುತ್ತಿರುವ ಕೆರೆಗಳ ಮಧ್ಯೆ ರಾರಾಜಿಸುತ್ತಿದೆ.
1 / 6
ಎತ್ತ ನೋಡಿದರೂ, ಎಲ್ಲಿ ಕಣ್ಣು ಹಾಯಿಸಿದ್ರೂ ನೀರು ನೀರು. ಮತ್ತೊಂದೆಡೆ ಬೇಸಿಗೆ ಸಮೀಪಿಸುತ್ತಿದ್ರೂ, ಕಣ್ಣು ಹಾಯಿಸಿದ ಕಡೆಯೆಲ್ಲ ಹಚ್ಚ ಹಸಿರಿನ ಹೊದಿಕೆ, ಇಂಥ ಮನಮೋಹಕ ದೃಶ್ಯ ಕಂಡು ಬಂದಿದ್ದು ಚಿಕ್ಕಬಳ್ಳಾಪುರದಲ್ಲಿ.
2 / 6
ಇನ್ನು ಹಚ್ಚ ಹಸಿರಿನ ಬೆಟ್ಟಗಳ ನಡುವೆ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೊಬಗು ನೋಡುಗರನ್ನ ಮಂತ್ರ ಮುಗ್ದರನ್ನಾಗಿಸುತ್ತದೆ. ಇತ್ತ ಪ್ರವಾಸಕ್ಕೆ ಬರುವವರ ಸಂಖ್ಯೆ ಕೂಡ ದುಪ್ಪಟ್ಟಾಗಿದೆ.
3 / 6
ನಗರವನ್ನ ಸುತ್ತುವರೆದಿರುವ ಕಂದವಾರ ಕೆರೆ, ರಂಗಧಾಮ ಕೆರೆ, ಮುಷ್ಟೂರು ಕೆರೆ, ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಜೀವ ವೈವಿದ್ಯ ಮರುಕಳಿಸಿದೆ, ತುಂಬಿದ ಕೆರೆಗಳಲ್ಲಿ ಪಕ್ಷಿಗಳ ಕಲರವ ನೋಡಲು ಬೆಂಗಳೂರಿನಿಂದ ನಂದಿಗಿರಿಧಾಮಕ್ಕೆ ಪ್ರವಾಸಕ್ಕೆ ಬಂದ ಪ್ರವಾಸಿಗರು ಕೆರೆಗಳ ಕಡೆ ಆಗಮಿಸಿ ಸೇಲ್ಪಿ ಪೋಟೊಗಳನ್ನು ಕ್ಲಿಕ್ಕಿಸುತ್ತಿದ್ದಾರೆ.
4 / 6
ಕೆರೆ ಕುಂಟೆ ನಾಲೆಗಳಲ್ಲಿ ನೀರು ತುಂಬಿ ತುಳುಕುತ್ತಿದೆ, ಇದರಿಂದ ಜಿಲ್ಲೆಯಾದ್ಯಂತ ಎಲ್ಲಿ ನೋಡಿದ್ರೂ ನೀರಿನ ಜುಳು ಜುಳು ನಿನಾದ ಕೇಳಿಸುತ್ತಿದೆ. ಹರಿಯುವ ನೀರಿನ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ.
5 / 6
ಅಂತರ್ಜಲವೂ ಇಲ್ಲದೆ ಕಂಗಲಾಗಿದ್ದ ಬಯಲು ಸೀಮೆಯೆ ಬರದ ನಾಡಿನ ಜನ, ಈಗ ತುಂಬಿದ ಕೆರೆ ಕುಂಟೆಯಲ್ಲಿ ಜುಳು ಜುಳು ನೀರಿನ ನಿನಾದ ನೋಡಿ ನಾವು ಮಲೆನಾಡಿನಲ್ಲಿ ಇದ್ದೇವಾ ಇಲ್ಲಾ ಬಯಲು ಸೀಮೆಯಲ್ಲಿ ಇದ್ದೇವಾ ಎಂದು ಯೋಚಿಸುವಂತಾಗಿದೆ.