
ಸದ್ಯ ಪ್ಯಾರಿಸ್ನಲ್ಲಿ 2024ನೇ ಸಾಲಿನ ಒಲಂಪಿಕ್ಸ್ ನಡೆಯುತ್ತಿದೆ. ಈ ಒಲಂಪಿಕ್ ಕೂಟದಲ್ಲಿ ಅನೇಕ ಭಾರತೀಯರು ಭಾಗಿ ಆಗಿದ್ದಾರೆ. ಅವರಿಗೆ ಚಿರಂಜೀವಿ ಕುಟುಂಬದವರು ಶುಭಾಶಯ ತಿಳಿಸಿದ್ದಾರೆ.

ಚಿರಂಜೀವಿ ಅವರು ಪಿವಿ ಸಿಂಧು ಜೊತೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪಿವಿ ಸಿಂಧುಗೆ ಚಿರು ಕುಟುಂಬ ಆಲ್ ದಿ ಬೆಸ್ಟ್ ಹೇಳಿದೆ.

ಸಿಂಧು ಅವರು ಹೈದರಾಬಾದ್ನವರು. ಚಿರಂಜೀವಿ ಕುಟುಂಬ ಕೂಡ ಹೈದರಾಬಾದ್ನಲ್ಲೇ ವಾಸವಾಗಿದೆ. ಹೀಗಾಗಿ, ಇವರ ಮಧ್ಯೆ ಸಹಜವಾಗಿಯೇ ಪರಿಚಯ ಬೆಳೆದಿದೆ. ಸಿಂಧು ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಚಿರಂಜೀವಿ ಕುಟುಂಬದವರು ಇಲ್ಲಿಂದ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್ಗಳನ್ನು ಪ್ಯಾರಿಸ್ಗೆ ಕೊಂಡೊಯ್ದಿದ್ದಾರೆ. ಅಲ್ಲಿನ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ.

ಪ್ಯಾರಿಸ್ನ ಬೀದಿಗಳಲ್ಲಿ ಚಿರಂಜೀವಿ ಕುಟುಂಬ ಸಮಯ ಕಳೆದಿದೆ. ಆ ಸಂದರ್ಭದ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.