Daali Dhananjay: ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಡಾಲಿ ಧನಂಜಯ್ ಅವರು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಕೊಡುಗೆ ನೀಡುತ್ತಿದ್ದಾರೆ. ಇದರ ಜೊತೆಗೆ ಅವರಿಗೆ ಹೊಸ ಜವಾಬ್ದಾರಿ ಸೇರ್ಪಡೆ ಆಗಿದೆ. ಲಿಡ್ಕರ್ ಬ್ರ್ಯಾಂಡ್ಗೆ ಡಾಲಿ ಧನಂಜಯ್ ಅವರು ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
1 / 7
ನಟ ಡಾಲಿ ಧನಂಜಯ್ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ದಿನದಿಂದ ದಿನಕ್ಕೆ ಅವರ ಪ್ರಸಿದ್ಧಿ ಹೆಚ್ಚಾಗುತ್ತಿದೆ. ಕೆಲವು ಉತ್ಪನ್ನಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಸರ್ಕಾರದ ಲಿಡ್ಕರ್ ಬ್ರ್ಯಾಂಡ್ಗೂ ಅವರು ರಾಯಭಾರಿ ಆಗಿರುವುದು ವಿಶೇಷ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
2 / 7
ವಿಧಾನ ಸೌಧದ ಮುಂಭಾಗದಲ್ಲಿ ಇಂದು (ಡಿಸೆಂಬರ್ 6) ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಗಿದೆ. ಇದರಲ್ಲಿ ನಟ ಡಾಲಿ ಧನಂಜಯ್ ಕೂಡ ಭಾಗಿ ಆಗಿದ್ದಾರೆ. ಈ ವೇಳೆ ಲಿಡ್ಕರ್ ಬ್ರ್ಯಾಂಡ್ಗೆ ಧನಂಜಯ್ ಅವರನ್ನು ರಾಯಭಾರಿ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
3 / 7
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಡಾಲಿ ಧನಂಜಯ್ ಅವರು ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
4 / 7
ಬುಧವಾರ (ಡಿ.6) ಬೆಳಗ್ಗೆ ಈ ಕಾರ್ಯಕ್ರಮ ನಡೆಯಿತು. ಲಿಡ್ಕರ್ ಉತ್ಪನ್ನಗಳಿಗೆ ರಾಯಭಾರಿ ಆದ ಧನಂಜಯ್ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ನೀಡಿರುವ ಈ ಜವಾಬ್ದಾರಿಯನ್ನು ಧನಂಜಯ್ ಅವರು ಖುಷಿಯಿಂದ ಸ್ವೀಕರಿಸಿದ್ದಾರೆ.
5 / 7
‘ಕಾಯಕ ವರ್ಗದ ಕುಶಲಕರ್ಮಿಗಳ ಅದ್ಭುತ ಕಲಾಕೃತಿಗಳನ್ನು ರಾಜ್ಯದ ಜನರಿಗೆ ವ್ಯಾಪಕವಾಗಿ ತಲುಪಿಸುವ #Lidkar ಸಂಸ್ಥೆಯ ಪ್ರಚಾರ ರಾಯಭಾರಿ ಆಗಲು ನನಗೆ ತುಂಬಾ ಹೆಮ್ಮೆಯಿದೆ’ ಎಂದು ಡಾಲಿ ಧನಂಜಯ್ ಅವರು ಸಂತಸ ಹಂಚಿಕೊಂಡಿದ್ದಾರೆ.
6 / 7
‘ಈ ತರಹದ ಒಳ್ಳೆಯ ಕೆಲಸಕ್ಕೆ ನನ್ನನ್ನು ಭಾಗಿಯಾಗಿಸಿದ ವ್ಯವಸ್ಥಾಪಕ ನಿರ್ದೇಶಕರಾದ ವಸುಂಧರ ಅವರಿಗೂ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೂ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪನವರಿಗೂ, ಗೆಳೆಯರಾದ ಕಿರಣ್ ಹಾಗೂ ಸೂರ್ಯ ಅವರಿಗೂ ಧನ್ಯವಾದಗಳು’ ಎಂದು ಡಾಲಿ ಪೋಸ್ಟ್ ಮಾಡಿದ್ದಾರೆ.
7 / 7
ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಡಾಲಿ ಧನಂಜಯ್ ಅವರು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಕೊಡುಗೆ ನೀಡುತ್ತಿದ್ದಾರೆ. ಅವರು ನಿರ್ಮಾಣ ಮಾಡಿದ ‘ಟಗರು ಪಲ್ಯ’ ಸಿನಿಮಾ ಈ ವರ್ಷ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿತು. ‘ಪುಷ್ಪ 2’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.