Kannada News Photo gallery Consumers turn to purple fruit rather than mangoes, horticulture department reaping income by purple fruit in chikkaballapur
ಮಾವು ಬಿಟ್ಟು ನೇರಳೆ ಬೆಡಗಿಯತ್ತ ವಾಲಿದ ಗ್ರಾಹಕರು! ತೋಟಗಾರಿಕೆ ಇಲಾಖೆಗೆ ಭರ್ಜರಿ ಆದಾಯ ತರುತ್ತಿರುವ ನೇರಳೆಹಣ್ಣು!
ಮಾರುಕಟ್ಟೆಯಲ್ಲಿ ಈಗ ಯೆಲ್ಲಿ ನೋಡಿದರೂ ಯೆಲ್ಲೋ ಸುಂದರಿ ಕಣ್ಣುಕುಕ್ಕುತ್ತಿದ್ದಾಳೆ. ಆದರೆ ಅಂತಹ ಯೆಲ್ಲೋ ಸುಂದರಿಗೆ ಸೆಡ್ಡುಹೊಡೆದು ಈಗ ಮಿರಿಮಿರಿ ಮುಂಚುತ್ತಿರುವ ನಾಟಿ ಕರಿಸುಂದರಿಯೊಬ್ಬಳು ಆಗಮಿಸಿದ್ದಾಳೆ. ಯೆಲ್ಲೋ ಹಾಗೂ ಕಪ್ಪು ವೈಯ್ಯಾರದ ಪೈಪೋಟಿಯಲ್ಲಿ ಗ್ರಾಹಕರು ಕಪ್ಪು ಸುಂದರಿಯತ್ತಲೇ ವಾಲಿದ್ದಾರೆ. ಅಷ್ಟಕ್ಕೂ ಆ ಯೆಲ್ಲೋ ಸುಂದರಿ.. ಕಪ್ಪು ಸುಂದರಿಯರು ಯಾರು..? ಅವರ ನಡುವೆ ಇರುವ ಸ್ಪರ್ಧೆಯಾದರೂ ಏನು? ಈ ವರದಿ ನೋಡಿ...
1 / 7
ಮಾರುಕಟ್ಟೆಯಲ್ಲಿ ಈಗ ಯೆಲ್ಲಿ ನೋಡಿದರೂ ಯೆಲ್ಲೋ ಸುಂದರಿ ಕಣ್ಣುಕುಕ್ಕುತ್ತಿದ್ದಾಳೆ. ಆದರೆ ಅಂತಹ ಯೆಲ್ಲೋ ಸುಂದರಿಗೆ ಸೆಡ್ಡುಹೊಡೆದು ಈಗ ಮಿರಿಮಿರಿ ಮುಂಚುತ್ತಿರುವ ನಾಟಿ ಕರಿಸುಂದರಿಯೊಬ್ಬಳು ಆಗಮಿಸಿದ್ದಾಳೆ. ಯೆಲ್ಲೋ ಹಾಗೂ ಕಪ್ಪು ವೈಯ್ಯಾರದ ಪೈಪೋಟಿಯಲ್ಲಿ ಗ್ರಾಹಕರು ಕಪ್ಪು ಸುಂದರಿಯತ್ತಲೇ ವಾಲಿದ್ದಾರೆ. ಅಷ್ಟಕ್ಕೂ ಆ ಯೆಲ್ಲೋ ಸುಂದರಿ.. ಕಪ್ಪು ಸುಂದರಿಯರು ಯಾರು..? ಅವರ ನಡುವೆ ಇರುವ ಸ್ಪರ್ಧೆಯಾದರೂ ಏನು? ಈ ವರದಿ ನೋಡಿ...
2 / 7
Chikkaballapur Horticulture department: ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುವ ವಾಡಿಕೆಯಿದೆ. ಆದರೂ ಪ್ರಾಸಂಗಿಕವಾಗಿ ಇಲ್ಲಿ ಅದನ್ನು ಯೆಲ್ಲೋ ಸುಂದರಿ ಎಂದು ಬಗೆದಾಗ ಆ ಮಾವಿನ ಹಣ್ಣು ಈಗ ಹಣ್ಣಿನ ಮಾರುಕಟ್ಟೆಯನ್ನು ಆಳುತ್ತಿದೆ. ಅದೇ ಮಾವಿನಹಣ್ಣಿಗೆ ಸೆಡ್ಡು ಹೊಡೆದು ಕಪ್ಪು ಸುಂದರಿ ನೇರಳೆಹಣ್ಣು ಮಾರುಕಟ್ಟೆಯಲ್ಲಿ ಲಕಲಕಾಂತ ಹೊಳೆಯುತ್ತಿದ್ದಾಳೆ.
3 / 7
Chikkaballapur Horticulture department: ಇದರಿಂದ ಆನಂದತುಂದಿಲಿತರಾಗಿರುವ ಗ್ರಾಹಕರು ಆರೋಗ್ಯಕ್ಕೆ ವರದಾನವಾಗಿರುವ ನೇರಳೆಹಣ್ಣಿಗೆ ಜೈ ಜೈ ಅಂದಿದ್ದಾರೆ. ಇದರಿಂದ ನೇರಳೆಹಣ್ಣು ಬೆಳೆದಿರುವ ರೈತರ ತೋಟಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದ ಬಳಿ ತೋಟಗಾರಿಕೆ ಇಲಾಖೆ ಬೆಳೆದಿರುವ ನೇರಳೆಹಣ್ಣಿನ ತೋಟಕ್ಕೆ ವರ್ತಕರು ಮುಗಿಬಿದ್ದಿದ್ದಾರೆ.
4 / 7
Chikkaballapur Horticulture department: ಸೊಪ್ಪಹಳ್ಳಿ ಗ್ರಾಮದ ಬಳಿ ತೋಟಗಾರಿಕೆ ಇಲಾಖೆ, ಒಂದು ಎಕರೆ ಪ್ರದೇಶದಲ್ಲಿ ದೂಪಾಳು ಎನ್ನುವ ವಿಶೇಷ ತಳಿಯ ನೇರಳೆಹಣ್ಣಿನ ತೋಟ ಬೆಳೆಸಿದೆ. ಒಂದು ಎಕರೆ ಜಮೀನಿನಲ್ಲಿ 112 ಮರಗಳಿದ್ದು, 7 ವರ್ಷಗಳ ಹಿಂದೆ ನಾಟಿ ಮಾಡಲಾಗಿದೆ.
5 / 7
Chikkaballapur Horticulture department: ಕಳೆದ 2-3 ವರ್ಷಗಳಿಂದ ನೇರಳೆಹಣ್ಣು ಫಸಲು ಬಿಡುತ್ತಿದೆ. ಈ ಬಾರಿ ಅಕ್ರಂವುಲ್ಲಾ ಎನ್ನುವ ವ್ಯಾಪಾರಿ 40 ಸಾವಿರ ರೂಪಾಯಿಗೆ ಗುತ್ತಿಗೆ ಪಡೆದಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಕೆಜಿ ನೇರಳೆಹಣ್ಣು ನೂರಿನ್ನೂರು ರೂಪಾಯಿಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ಮುನಿರಾಜು.
6 / 7
Chikkaballapur Horticulture department: ಜನ ಕಳೆದ 2 ತಿಂಗಳಿಂದ ಮಾವಿನಹಣ್ಣು ತಿಂದು ಬೇಸತ್ತಿದ್ದರೆ, ಈಗ ನೇರಳೆಹಣ್ಣು ತಿಂದು ಆರೋಗ್ಯ ಶ್ರೀಮಂತರಾಗಬಹುದು. ಅದ ಬೆಳೆದ ರೈತರೂ ಒಂದಷ್ಟು ಶ್ರೀಮಂತರಾಗಬಹುದು. ಇನ್ನು ಶುಗರ್, ಬಿಪಿ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ನೇರಳೆಹಣ್ಣು ರಾಮಬಾಣವಾಗಿದೆ ಎಂಬುದನ್ನು ಮರೆಯವಂತಿಲ್ಲ.
7 / 7
ತೋಟಗಾರಿಕೆ ಇಲಾಖೆಗೆ ಭರ್ಜರಿ ಆದಾಯ ತರುತ್ತಿರುವ ನೇರಳೆಹಣ್ಣು!