ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್‌, ವಿಡಿಯೋ ನೋಡಿ

ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್‌, ವಿಡಿಯೋ ನೋಡಿ

ರಮೇಶ್ ಬಿ. ಜವಳಗೇರಾ
|

Updated on:Jul 04, 2024 | 9:57 PM

ಮುಂಬೈನಲ್ಲಿ ಕ್ರಿಕೆಟ್ ಅಭಿಮಾನಗಳ ಸಂಭ್ರಮ ಮನೆ ಮಾಡಿದೆ. ಟಿ20 ವಿಶ್ವಕಪ್ ಗೆದ್ದುಕೊಂಡು ಬಂದಿರುವ ಟೀಂ ಇಂಡಿಯಾದ ವಿಜಯೋತ್ಸವದಲ್ಲಿ ಅಭಿಮಾನಿಗಳು ಸಹ ಪಾಲ್ಗೊಂಡಿದ್ದು, ಮರೀನ್‌ ಕಡಲ ಕಿನಾರೆ ಬಳಿಕ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳು ಜಮಾವಣೆಗೊಂಡಿದ್ದು, ಭಾರತಕ್ಕೆ ಜೈಕಾರ ಹಾಕುತ್ತ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ನಡುವೆ ಬಂದ ಆಂಬ್ಯುಲೆನ್ಸ್​ ಸರಸರನೇ ದಾರಿ ಮಾಡಿಕೊಟ್ಟಿರುವ ವಿಡಿಯೋ ಮೂಕವಿಸ್ಮಿತಗೊಳಿಸುತ್ತದೆ. ಯಾಕಂದ್ರೆ ಅಷ್ಟೊಂದು ಜನ ಸಂಖ್ಯೆಯಲ್ಲಿ ಒಂದಿಷ್ಟು ತಡ ಮಾಡದೇ ಆಂಬ್ಯುಲೆನ್ಸ್​ ಹೋಗಲು ದಾರಿ ನೀಡಿದ್ದಾರೆ.

ಮುಂಬೈ (ಜು.4): ಮುಂಬೈನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾದ T20 ವಿಶ್ವಕಪ್ 2024 ಗೆಲುವಿನ ವಿಜಯೋತ್ಸವದಲ್ಲಿ ಸಹಸ್ರಾರು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಮುಂಬೈನ ಮರೀನ್‌ ಕಡಲ ಕಿನಾರೆಯಲ್ಲಿ ಅಭಿಮಾನಿಗಳು ಕಿಕ್ಕಿದು ಸೇರಿದ್ದು, ಆ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಟೀಂ ಇಂಡಿಯಾಗೆ ಜಯ ಘೋಷ ಹಾಕುತ್ತ ರಸ್ತೆ ಇಕ್ಕಲೆಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಲ್ಲಿ ಸೇರಿರುವ ಜನ ಸಂಖ್ಯೆ ದೃಶ್ಯದ ನೋಡಿದರೆ ಇರುವೆ ತರ ಕಾಣಿಸುತ್ತಿದೆ. ಇನ್ನು ಇದರ ಮಧ್ಯ ಅಂಬ್ಯುಲೆನ್ಸ್‌ ಬಂದಿದೆ. ಸೈರನ್ ಕೇಳಿಸುತ್ತಿದ್ದಂತೆಯೇ ತಮ್ಮಷ್ಟಕ್ಕೆ ತಾವೇ ಸರಸರನೇ ರಸ್ತೆ ಪಕ್ಕಕ್ಕೆ ಸರಿದು ಅಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಅಲ್ಲಿ ಸೇರಿದ್ದ ಜನ ಸಾಗರ ಅಂಬ್ಯುಲೆನ್ಸ್​ ಹೋಗಲು ಹೇಗೆ ರಸ್ತೆ ಮಾಡಿಕೊಟ್ಟಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Published on: Jul 04, 2024 09:54 PM