ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಭಾರತ ತಂಡ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಸದ್ಯ ಎಲ್ಲೆಡೆ ಸಂಭ್ರಮವೂ ಸಂಭ್ರಮ. ಸದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂಗೆ ವಿಜಯೋತ್ಸವದ ಮೆರವಣಿಗೆ ತಲುಪುವ ಮೂಲಕ ಅಂತ್ಯವಾಗಿದೆ. ದಾರಿ ಮಧ್ಯೆ ತಮ್ಮ ನೆಚ್ಚಿನ ಆಟಗಾರರನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ. ಅತ್ತ ಬಸ್ನಲ್ಲೇ ಬ್ಯೂ ಬಾಯ್ಸ್ ಕೂಡ ಹೆಜ್ಜೆ ಹಾಕಿದ್ದಾರೆ.
ಮುಂಬೈ, ಜುಲೈ 04: ಟಿ20 ವಿಶ್ವಕಪ್ (T20 World Cup) ಗೆದ್ದ ಭಾರತ ತಂಡ ಇಂದು ಸಂಜೆ ಮುಂಬೈನಲ್ಲಿ ತೆರೆದ ಬಸ್ನಲ್ಲಿ ರೋಡ್ ಶೋ ನಡೆಸಿತು. ಟ್ರೋಫಿ ಜೊತೆಗೆ ಚಾಂಪಿಯನ್ ರೋಹಿತ್ ಹುಡುಗರು ಬಸ್ ಏರಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಜಯೋತ್ಸವ ನಡೆದಿದ್ದು, ದಾರಿ ಮಧ್ಯೆ ತಮ್ಮ ನೆಚ್ಚಿನ ಆಟಗಾರರನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದರೆ. ಅತ್ತ ಬಸ್ನಲ್ಲೇ ಬ್ಯೂ ಬಾಯ್ಸ್ ಕೂಡ ಹೆಜ್ಜೆ ಹಾಕಿದ್ದಾರೆ. ಲಕ್ಷಾಂತರ ಜನರ ಮಧ್ಯೆ ಕಪ್ ಹಿಡಿದು ರೋಹಿತ್ ಪಡೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2007ರ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತೆರೆದ ಬಸ್ನಲ್ಲಿ ರೋಡ್ ಶೋ ನಡೆಸಿತ್ತು. ಧೋನಿ ಹುಡುಗರು ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿದ್ದರು. ಆ ಸಂಭ್ರಮಾಚರಣೆ ಬಳಿಕ ಮತ್ತೆ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಸದ್ಯ ಎಲ್ಲೆಡೆ ಸಂಭ್ರಮವೂ ಸಂಭ್ರಮ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.