ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ: ಎಂಜಿ ರಸ್ತೆ, ಚರ್ಚ್​ಸ್ಟ್ರೀಟ್​ನತ್ತ ಯುವ ಸಮೂಹ

|

Updated on: Dec 31, 2024 | 8:34 PM

ಬೆಂಗಳೂರಿನಲ್ಲಿ 2025ರ ಹೊಸ ವರ್ಷದ ಆಚರಣೆಗೆ ಜನರು ಭರ್ಜರಿಯಾಗಿ ಸಿದ್ಧರಾಗಿದ್ದಾರೆ. ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಪಾರ್ಟಿಗಳು ಜೋರಾಗಿ ನಡೆಯುತ್ತಿವೆ. ಪಬ್‌ಗಳು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಲಕ್ಷಾಂತರ ಜನರು ಆಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

1 / 5
ಇಳಿ ಸಂಜೆಯಿಂದಲೂ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಪಾರ್ಟಿಯ ಗುಂಗು ರಂಗೇರಿದೆ. ಜಸ್ಟ್ ಕೆಲವೇ ಕ್ಷಣಗಳಲ್ಲಿ ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿ, 2025ಕ್ಕೆ ಹಾಯ್ ಹಾಯ್ ಹೇಳಲಿದೆ. 2025 ಅನ್ನ ಭರ್ಜರಿಯಾಗಿ ವೆಲ್‌ಕಮ್ ಮಾಡಲು ಜನರು ಸಜ್ಜಾಗಿದ್ದಾರೆ. 

2 / 5
ಬೆಂಗಳೂರಿನಲ್ಲಿ ಈಗಾಗಲೇ ನ್ಯೂ ಇಯರ್ ಪಾರ್ಟಿ ಸ್ಟಾರ್ಟ್ ಆಗಿದ್ದು, ಮಧ್ಯರಾತ್ರಿ 12 ಗಂಟೆ ಯಾವಾಗ ಆಗುತ್ತೆ ಅಂತಾ ಎಲ್ಲರ ಚಿತ್ತ ಗಡಿಯಾರದ ಮೇಲೆ ನೆಟ್ಟಿದೆ. ಸಂಜೆ 7 ಗಂಟೆಯಾಗುತ್ತಿದ್ದಂತೆ ಜನರು ಎಂ.ಜಿ ರೋಡ್ ಬ್ರಿಗೇಡ್ ರೋಡ್‌ಗೆ ಆಗಮಿಸುತ್ತಿದ್ದಾರೆ. ಚರ್ಚ್‌ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದಾರೆ.

3 / 5
ಮಾರತ್ತಹಳ್ಳಿಯ ಡಿವೈನ್​ ಪಬ್​ನಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದ್ದು, ಪಬ್​ನಲ್ಲಿ ಬಾರ್ ಸೆಂಟರ್, ಡಿಜೆ & ಲೈವ್ ಬ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಡಿಜೆ, ಲೈವ್ ಬ್ಯಾಂಡ್​ಗೆ ಪಾರ್ಟಿ ಪ್ರಿಯರು ಹೆಜ್ಜೆ ಹಾಕಲಿದ್ದಾರೆ. ಹೊಸ ವರ್ಷಾಚರಣೆಗೆ 2-3 ದಿನಗಳ ಹಿಂದೆಯೇ ಜನರು ಟೇಬಲ್​ ಬುಕ್​ ಮಾಡಿದ್ದಾರೆ.

4 / 5
ಬಣ್ಣ ಬಣ್ಣದ ಲೈಟಿಂಗ್ಸ್​, ಬಲೂನ್​ಗಳಿಂದ ಕಂಗೊಳಿಸುತ್ತಿರುವ ಪಬ್​ಗಳು, ವಿಶೇಷ ಪ್ಯಾಕೇಜ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಅನಿಯಮಿತ ಡ್ರಿಂಕ್ಸ್ ಮತ್ತು ಫುಡ್​ಗಳ ಮೂಲಕ‌ ವಿಶೇಷ ಆಫರ್ ನೀಡಲಾಗಿದೆ. ಕಪಲ್ಸ್​ಗೆ 5000 ರೂ., ಯುವಕರಿಗೆ 4,000 ರೂ., ಯುವತಿಯರಿಗೆ 2 ಸಾವಿರ ರೂ. ಪಾಸ್ ವಿತರಣೆ ಮಾಡಲಾಗುತ್ತಿದೆ.

5 / 5
ಸುಮಾರು 10ಲಕ್ಷ ಜನ ಬಂದು ಹೋಗುವ ನಿರೀಕ್ಷೆ ಇರೋದ್ರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಭದ್ರತೆಗೆ 11 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 7,500 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಪಾರ್ಟಿ ಮಾಡುವುದಕ್ಕೆ ಮಧ್ಯರಾತ್ರಿ 1ಗಂಟೆವರೆಗೂ ಅವಕಾಶವಿದೆ.

Published On - 8:34 pm, Tue, 31 December 24