ಗೋವಿನ ಸಗಣಿಯಿಂದ ಮೋದಿ, ರಾಯರು, ಲಕ್ಷ್ಮಿ ಸರಸ್ವತಿ ಮೂರ್ತಿಗಳ ತಯಾರು: ಇಲ್ಲಿವೆ ಫೋಟೋಸ್
ಭಾರತದಲ್ಲಿ ಮೊದಲಿನಿಂದಲೂ ಗೋವಿಗೆ ವಿಶೇಷ ಸ್ಥಾನಮಾನವಿದೆ. ದೇವಾನುದೇವತೆಗಳು ಪುರಾಣ ಕಾಲದಲ್ಲೂ ಗೋವು ವಿಶೇಷ ಮಹತ್ವ ಪಡೆದುಕೊಂಡಿದೆ. ಅಂತಹ ಪೂಜ್ಯ ಗೋವಿನ ಮೂತ್ರ, ಸಗಣಿ ಪವಿತ್ರ ಅಷ್ಟೇ ಅಲ್ಲದೇ ಆರೋಗ್ಯಕ್ಕೆ ಆಸರೆ. ನಿನ್ನೆ(ಜೂ.3) ಆ ನಗರದಲ್ಲಿ ನಡೆದ ಅದೊಂದು ಕಾರ್ಯಕ್ರಮ ಗೋವಿನಿಂದಾಗುವ ಪ್ರಯೋಜನಗಳನ್ನು ಸಾರಿ ಹೇಳಿತ್ತು. ಗೋವಿನ ಸಗಣಿ ಮೂತ್ರದಿಂದ ತಯಾರಾದ ವಸ್ತುಗಳು ಎಲ್ಲರ ಗಮನ ಸೆಳೆದವು.
1 / 8
ಸಾಲು ಸಾಲು ದೂಪದ ಬತ್ತಿಗಳು, ರಾಘವೇಂದ್ರ ರಾಯರು, ದೇವಾನುದೇವತೆಗಳ ಮೂರ್ತಿಗಳು, ಜೊತೆಗೆ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಮೂರ್ತಿಗಳು. ಪಕ್ಕದಲ್ಲೇ ಗೃಹಾಲಂಕಾರಕ ವಸ್ತುಗಳ ಆಕರ್ಷಣೆ. ಸಾಬೂನು, ಸೆಂಟ್ ಒಂದಾ ಎರಡಾ, ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದ ಗೌರಿಶಂಕರ ಕಲ್ಯಾಣಮಂಟದಲ್ಲಿ ನಡೆದ ಗೋಸಂಗಮ ಕಾರ್ಯಕ್ರಮದಲ್ಲಿ.
2 / 8
ಇಲ್ಲಿ ಕಾಣುವ ಈ ವಸ್ತುಗಳು ಯಾವುದರಿಂದ ತಯಾರಾಗಿವೆ ಅಂದರೆ ಅಚ್ಚರಿ ಪಡ್ತಿರಾ! ಹೌದು ಈ ಎಲ್ಲ ವಸ್ತುಗಳು ತಯಾರಾಗಿದ್ದು,ಗೋವಿನ ಸಗಣಿ ಹಾಗೂ ಗೋಮೂತ್ರದಿಂದ.
3 / 8
ಭಾರತೀಯ ಪ್ರಾದೇಶಿಕ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಸಂಶೋಧನೆಗಾಗಿ ಗೋ ಸಂಗಮ ಕಾರ್ಯಕ್ರಮ ಪಾಂಜರಪೋಳ ಗೋಶಾಲೆ, ಗೋಮಾತಾ ಫೌಂಡೇಶನ್, ಗೋ ಸೇವಾಗತಿವಿಧಿ ಕರ್ನಾಟಕ ಉತ್ತರ ಪ್ರಾಂತ
ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
4 / 8
ಕರ್ನಾಟಕ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಗೋಸಂಗಮ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗೋವಿನ ಸಂರಕ್ಷಣೆ ಅದರಿಂದಾಗುವ ಪ್ರಯೋಜನ, ಅದರ ಸಗಣಿ ಮೂತ್ರದಿಂದ ಆರೋಗ್ಯ ರಕ್ಷಣಾ ವಸ್ತುಗಳ ಪರಿಚಯ ಮಾಡಿಕೊಡಲಾಯಿತು
5 / 8
ನಿನ್ನೆ, ಇಂದು ಎರಡು ದಿನ ಹಮ್ಮಿಕೊಳ್ಳಲಾದ ಗೋಸಂಗಮ ಕಾರ್ಯಕ್ರಮದಲ್ಲಿ ಗೋವಿನ ಸಗಣಿಯಲ್ಲಿ ರಾಘವೇಂದ್ರ ರಾಯರ ಮೂರ್ತಿ, ಲಕ್ಷ್ಮಿಸೇರಿದಂತೆ ವಿವಿಧ ದೇವಾನುದೇವತೆಗಳ ಮೂರ್ತಿಗಳು ನೋಡುಗರನ್ನು ಸೆಳೆದವು.
6 / 8
ಇಷ್ಟೇ ಅಲ್ಲದೆ ಗೋವಿನ ಸಗಣಿಯಿಂದ ತಯಾರಾದ ದೂಪ ಊದಬತ್ತಿ, ಸೊಳ್ಳೆಬತ್ತಿ, ವಿಭೂತಿ, ಕೀಚೈನ್, ಗೃಹಾಲಂಕಾರಕ ವಸ್ತುಗಳು, ಬೆರಣಿ ಹೋಮದ ದೂಪ ಜನರ ಮನ ಸೆಳೆದವು. ಗೋಮೂತ್ರದಿಂದ ಅರ್ಕ ತಯಾರು ಮಾಡುವ ಯಂತ್ರ, ಸಾಬೂನು,ಲೋಶನ್, ಶಾಂಪೂ, ಸುಗಂದದ್ಯವ್ಯ, ಪಂಚಗವ್ಯ ಹೀಗೆ ಹತ್ತಾರು ವಸ್ತುಗಳು ಗೋವಿನ ಮೂತ್ರ ಸಗಣಿಯಲ್ಲೇ ತಯಾರಿಸಿದ್ದು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದರು.
7 / 8
ಶುದ್ದ ದೇಶಿ ಯಾವುದೇ ರಾಸಾಯನಿಕವಲ್ಲದ, ಆರೋಗ್ಯ ಕಾಪಾಡುವ ವಸ್ತುಗಳನ್ನು ಕಂಡ ಜನರು ವಸ್ತುಗಳನ್ನು ಖರೀಧಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
8 / 8
ಗೋವು ಕೇವಲ ಪೂಜೆಗೆ ಸೀಮಿತವಲ್ಲ ಜನರ ಆರೋಗ್ಯ ರಕ್ಷಣೆಗೂ ಮಹತ್ವವಿದೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ.ಆದರೆ ಅದರ ಶಗಣಿ ಗೋಮೂತ್ರದಿಂದ ಇಷ್ಟೆಲ್ಲ ವಸ್ತು ತಯಾರಿಸಬಹುದು ಎಂಬುದನ್ನು ನೋಡಿ ಜನರಿಗೆ ಸಂತಸದ ಜೊತೆ ಅಚ್ಚರಿ ಕೂಡ ಆಗಿದೆ. ಜನರಿಗೆ ಗೋ ರಕ್ಷಣೆ ಮಹತ್ವ ಅದರಿಂದ ಆಗುವ ಪ್ರಯೋಜನಕ್ಕಾಗಿ ಮಾಡಿದ ಕಾರ್ಯ ಶ್ಲಾಘನೀಯ.
Published On - 11:48 am, Sun, 4 June 23