- Kannada News Photo gallery Cricket photos 2 Players Who Can Replace Jasprit Bumrah In ICC T20 World Cup 2022
T20 World Cup: ಟಿ20 ವಿಶ್ವಕಪ್‌ನಿಂದ ಬುಮ್ರಾ ಔಟ್..! ಬದಲಿಯಾಗಿ ತಂಡದಲ್ಲಿ ಸ್ಥಾನ ಪಡೆಯುವವರು ಯಾರು?
T20 World Cup: ಶಮಿ ಬೌಲಿಂಗ್‌ನಲ್ಲಿ ಹೆಚ್ಚು ಅನುಭವವನ್ನು ಹೊಂದಿದ್ದರೆ, ದೀಪಕ್ ಚಹಾರ್ ಹೊಸ ಚೆಂಡಿನ ಮಾಸ್ಟರ್ ಎಂದು ಬಿಂಬಿತರಾಗಿದ್ದಾರೆ. ಇದಲ್ಲದೇ ಚಹಾರ್ ಬ್ಯಾಟಿಂಗ್ ಸಾಮರ್ಥ್ಯವನ್ನೂ ಹೊಂದಿದ್ದಾರೆ.
Updated on: Sep 29, 2022 | 4:45 PM

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಇಂಜುರಿಗೊಳಗಾಗಿರುವ ಬುಮ್ರಾಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಮಾಡದಿದ್ದರೂ ಅವರು ಅದರಿಂದ ಚೇತರಿಸಿಕೊಳ್ಳಲು 4 ರಿಂದ 6 ತಿಂಗಳುಗಳು ಬೇಕಾಗುತ್ತದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಮ್ರಾ ಅಲಭ್ಯತೆ ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ಈ ಹಿನ್ನಡೆಯ ನಂತರ, ಈಗ ಅವರ ಸ್ಥಾನಕ್ಕೆ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ದೊಡ್ಡ ಪ್ರಶ್ನೆ. ಮೊಹಮ್ಮದ್ ಶಮಿ ಇರುತ್ತಾರಾ ಅಥವಾ ದೀಪಕ್ ಚಹಾರ್ ಆಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇದೆಲ್ಲದಕ್ಕೂ ಮಿಗಿಲಾಗ ಟೀಮ್ ಮ್ಯಾನೇಜ್‌ಮೆಂಟ್ ಬೇರೆಯವರಿಗೆ ಅವಕಾಶ ನೀಡಿದ್ದರೂ ನೀಡಬಹುದು.

ಜಸ್ಪ್ರೀತ್ ಬುಮ್ರಾ ಬದಲಿಗೆ ದೊಡ್ಡ ಸ್ಪರ್ಧಿಗಳಾಗಿ ಕಂಡುಬಂದರೆ, ಶಮಿ ಮತ್ತು ದೀಪಕ್ ಚಹಾರ್ ಮಾತ್ರ ಆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಶಮಿ ಬೌಲಿಂಗ್‌ನಲ್ಲಿ ಹೆಚ್ಚು ಅನುಭವವನ್ನು ಹೊಂದಿದ್ದರೆ, ದೀಪಕ್ ಚಹಾರ್ ಹೊಸ ಚೆಂಡಿನ ಮಾಸ್ಟರ್ ಎಂದು ಬಿಂಬಿತರಾಗಿದ್ದಾರೆ. ಇದಲ್ಲದೇ ಚಹಾರ್ ಬ್ಯಾಟಿಂಗ್ ಸಾಮರ್ಥ್ಯವನ್ನೂ ಹೊಂದಿದ್ದಾರೆ.

ಟೀಮ್ ಮ್ಯಾನೇಜ್‌ಮೆಂಟ್ ಮುಂದೆ ಬುಮ್ರಾಗೆ ಈ ಎರಡು ದೊಡ್ಡ ಆಯ್ಕೆಗಳಿವೆ. ಇವರಿಬ್ಬರೂ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದ ಮೀಸಲು ಸದಸ್ಯರೂ ಆಗಿದ್ದಾರೆ. ಆದರೆ, ಈ ಇಬ್ಬರಲ್ಲಿ ಒಬ್ಬರು ಮಾತ್ರ ಬುಮ್ರಾ ಅವರ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಶಮಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದು, ಇದಕ್ಕೆ ಪ್ರಮುಖ ಕಾರಣ ಬುಮ್ರಾ ಅವರಂತೆ ಶಮಿ ಕೂಡ ಸಾಕಷ್ಟು ಅನುಭವ ಹೊಂದಿದ್ದಾರೆ. ಅಲ್ಲದೆ ತಂಡದ ಬೌಲಿಂಗ್ ಲೈನ್ ಅಪ್ ನೋಡಿದರೆ ಅಲ್ಲಿಯೂ ಶಮಿ ಅನುಭವವೇ ಬೇಕಾಗಿದೆ.




