AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಯಾರಾಗಲಿದ್ದಾರೆ RCB ನಾಯಕ: ಹಿಟ್​ ಲೀಸ್ಟ್​ನಲ್ಲಿದ್ದಾರೆ 4 ಆಟಗಾರರು

IPL 2022 Mega Auction: ಆರ್​ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಇದೀಗ ಆರ್​ಸಿಬಿಗೆ ವಿದೇಶಿ ಸ್ಟಾರ್ ಆಟಗಾರರೊಬ್ಬರ ಅವಶ್ಯಕತೆಯಿದೆ. ಅತ್ತ ಮೆಗಾ ಹರಾಜಿನಲ್ಲಿ ಎಸ್​ಆರ್​ಹೆಚ್​ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಇದ್ದಾರೆ.

TV9 Web
| Edited By: |

Updated on: Jan 31, 2022 | 2:40 PM

Share
 ಐಪಿಎಲ್ ಮೆಗಾ ಹರಾಜಿಗೂ ಮುನ್ನ ಇದೀಗ ಆರ್​ಸಿಬಿ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಕಳೆದ ಸೀಸನ್ ಐಪಿಎಲ್​ ಬೆನ್ನಲ್ಲೇ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಸಲ ಹೊಸ ನಾಯಕನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಆರ್​ಸಿಬಿ ಫ್ರಾಂಚೈಸಿಗೆ ಬಂದೊದಗಿದೆ.

1 / 6
ಆದರೆ ಇದೀಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಅವರು ಮತ್ತೆ ಆರ್​ಸಿಬಿ ನಾಯಕರಾಗಲಿದ್ದಾರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇದಾಗ್ಯೂ ಆರ್​ಸಿಬಿ ಹಿಟ್​ ಲೀಸ್ಟ್​ನಲ್ಲಿ ಕೆಲ ಆಟಗಾರರ ಹೆಸರಿದೆ. ಒಂದು ವೇಳೆ ಆರ್​ಸಿಬಿ ತಂಡವು ಇವರಲ್ಲಿ ಒಬ್ಬರನ್ನು ಖರೀದಿಸಿದರೂ ಇವರಿಗೆ ನಾಯಕತ್ವ ನೀಡಬಹುದು.

2 / 6
 ಗ್ಲೆನ್ ಮ್ಯಾಕ್ಸ್​ವೆಲ್: ಈ ಬಾರಿ ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅತ್ತ ಬಿಬಿಎಲ್​​ನಲ್ಲಿ ಮೆಲ್ಬೋರ್ನ್​ ಸ್ಟಾರ್ಸ್​ ತಂಡವನ್ನು ಮುನ್ನಡೆಸಿರುವ ಮ್ಯಾಕ್ಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಮ್ಯಾಕ್ಸ್​ವೆಲ್ ಅವರಿಗೆ ತಂಡದ ಸಾರಥ್ಯ ನೀಡಿದರೂ ಅಚ್ಚರಿಪಡಬೇಕಿಲ್ಲ.

3 / 6
ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಈ ಹಿಂದೆ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಅಯ್ಯರ್ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ತಂಡವು ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಿ ನಾಯಕತ್ವ ನೀಡಬಹುದು.

4 / 6
ಡೇವಿಡ್ ವಾರ್ನರ್: ಆರ್​ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಇದೀಗ ಆರ್​ಸಿಬಿಗೆ ವಿದೇಶಿ ಸ್ಟಾರ್ ಆಟಗಾರರೊಬ್ಬರ ಅವಶ್ಯಕತೆಯಿದೆ. ಅತ್ತ ಮೆಗಾ ಹರಾಜಿನಲ್ಲಿ ಎಸ್​ಆರ್​ಹೆಚ್​ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ನಾಯಕತ್ವದಲ್ಲಿ 2016 ರಲ್ಲಿ ಎಸ್​ಆರ್​ಹೆಚ್​ ಚಾಂಪಿಯನ್​ ಪಟ್ಟಕ್ಕೇರಿತು. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ವಾರ್ನರ್ ಅವರ ಖರೀದಿಯಿಂದ ಆರ್​ಸಿಬಿ ಆರಂಭಿಕನ ಹಾಗೂ ನಾಯಕನ ಸಮಸ್ಯೆಯನ್ನು ನೀಗಿಸಬಹುದು. ಹೀಗಾಗಿ ಡೇವಿಡ್ ವಾರ್ನರ್ ಖರೀದಿಗೆ ಆರ್​ಸಿಬಿ ಹೆಚ್ಚಿನ ಆಸಕ್ತಿ ತೋರಲಿದೆ.

5 / 6
 ಮನೀಷ್ ಪಾಂಡೆ: ಆರ್​ಸಿಬಿ ತಂಡದ ಮಾಜಿ ಆಟಗಾರ ಮನೀಷ್ ಪಾಂಡೆ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ಸೀಸನ್​ಗಳಿಂದ ಎಸ್​ಆರ್​ಹೆಚ್​ ತಂಡದಲ್ಲಿದ್ದ ಪಾಂಡೆ ಕೆಲವು ಪಂದ್ಯಗಳಲ್ಲಿ ನಾಯಕರಾಗಿಯೂ ಕೂಡ ಕಣಕ್ಕಿಳಿದಿದ್ದರು. ಅದರಲ್ಲೂ ಕರ್ನಾಟಕ ತಂಡದ ನಾಯಕನಾಗಿ ಮನೀಷ್ ಪಾಂಡೆ ಅತ್ಯುತ್ತಮ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಸ್ಥಳೀಯ ಕ್ರಿಕೆಟಿಗನಿಗೆ ಆರ್​ಸಿಬಿ ಮಣೆಹಾಕುವುದಾದರೆ ಮನೀಷ್ ಪಾಂಡೆಗೆ ನಾಯಕತ್ವ ಸಿಗುವುದು ಬಹುತೇಕ ಖಚಿತ ಎನ್ನಬಹುದು.

6 / 6
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ

ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು

ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?

ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ

ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್

ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು

ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ