
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ನಡೆಯಲಿರುವ ಐಪಿಎಲ್ 2025ರ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಕಣಕ್ಕಿಳಿಯಲಿವೆ. ವಿಶೇಷ ಎಂದರೆ ಕಳೆದ ಬಾರಿಯ ಐಪಿಎಲ್ ಫೈನಲ್ ತಂಡದ ಭಾಗವಾಗಿದ್ದ 5 ಆಟಗಾರರು ಈ ಬಾರಿಯ ಐಪಿಎಲ್ ಫೈನಲ್ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅವರೆಂದರೆ...

ಭುವನೇಶ್ವರ್ ಕುಮಾರ್: ಐಪಿಎಲ್ 2024 ರ ಫೈನಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಎಸ್ಆರ್ಹೆಚ್ ಪರ ಭುವನೇಶ್ವಕರ್ ಕುಮಾರ್ ಕಣಕ್ಕಿಳಿದಿದ್ದರು. ಇದೀಗ ಆರ್ಸಿಬಿ ಪರ ಫೈನಲ್ ಆಡಲು ಭುವಿ ಸಜ್ಜಾಗಿದ್ದಾರೆ.

ಮಯಾಂಕ್ ಅಗರ್ವಾಲ್: ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಮಯಾಂಕ್ ಅಗರ್ವಾಲ್ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ. ಅದರಂತೆ ಈ ಬಾರಿ ಮಯಾಂಕ್ ಅಗರ್ವಾಲ್ ಆರ್ಸಿಬಿ ಪರ ಫೈನಲ್ ಪಂದ್ಯವಾಡಲಿದ್ದಾರೆ.

ಸುಯಶ್ ಶರ್ಮಾ: ಐಪಿಎಲ್ 2024 ರ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸುಯಶ್ ಶರ್ಮಾ ಕೂಡ ಇದ್ದರು. ಆದರೆ ಈ ಬಾರಿ ಸುಯಶ್ ಆರ್ಸಿಬಿ ಪರ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸುಯಶ್ ಕೂಡ ಕಣಕ್ಕಿಳಿಯಲಿದ್ದಾರೆ.

ಫಿಲ್ ಸಾಲ್ಟ್: ಐಪಿಎಲ್ 2024ರಲ್ಲಿ ಫಿಲ್ ಸಾಲ್ಟ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು. ಈ ಬಾರಿ ಆರ್ಸಿಬಿಗೆ ಬಂದಿರುವ ಸಾಲ್ಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದರಂತೆ ಇಂದು ನಡೆಯಲಿರುವ ಫೈನಲ್ ಫೈಟ್ನಲ್ಲಿ ಸಾಲ್ಟ್ ಕೂಡ ಕಣಕ್ಕಿಳಿಯಲಿದ್ದಾರೆ.

ಶ್ರೇಯಸ್ ಅಯ್ಯರ್: ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಶ್ರೇಯಸ್ ಅಯ್ಯರ್. ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಅಯ್ಯರ್ ಮತ್ತೊಮ್ಮೆ ಫೈನಲ್ ಆಡಲು ಸಜ್ಜಾಗಿದ್ದಾರೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೂ ಚಾಂಪಿಯನ್ ಪಟ್ಟ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.