T20 World Cup 2022: ಟಿ20 ವಿಶ್ವಕಪ್​ನಲ್ಲಿನ ಈ 5 ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ..!

| Updated By: ಝಾಹಿರ್ ಯೂಸುಫ್

Updated on: Oct 19, 2022 | 10:58 PM

T20 World Cup 2022: ಟಿ20 ವಿಶ್ವಕಪ್​ನಲ್ಲಿರುವ ಕೆಲ ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ. ಅಂತಹ ಐದು ದಾಖಲೆಗಳು ಯಾವುವು ಎಂದು ತಿಳಿಯೋಣ...

1 / 7
ಆಸ್ಟ್ರೇಲಿಯಾ ನಡೆಯುತ್ತಿರುವ 8ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಒಂದೊಂದೇ ದಾಖಲೆಗಳು ನಿರ್ಮಾಣವಾಗುತ್ತಿದೆ. ಮೊದಲ ಸುತ್ತಿನಲ್ಲೇ ಹ್ಯಾಟ್ರಿಕ್ ವಿಕೆಟ್ ಉರುಳಿ ಯುಎಇ ತಂಡದ ಕಾರ್ತಿಕ್ ಮೇಯಪ್ಪನ್ ಹೊಸ ದಾಖಲೆ ಬರೆದಿದ್ದಾರೆ.

2 / 7
T20 World Cup 2024: ಟಿ20 ವಿಶ್ವಕಪ್​ನ 9ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಯುಎಸ್​ಎ-ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ ಒಂದಷ್ಟು ದಾಖಲೆಗಳು ನಿರ್ಮಾಣವಾಗಲಿದೆ. ಆದರೆ ಕೆಲ ದಾಖಲೆಗಳನ್ನು ಮುರಿಯುವುದು ಮಾತ್ರ ಕಷ್ಟಸಾಧ್ಯ. ಅಂತಹ ಐದು ದಾಖಲೆಗಳು ಯಾವುವು ಎಂದು ತಿಳಿಯೋಣ...

3 / 7
1- ಅತ್ಯಧಿಕ ಸಿಕ್ಸರ್‌ಗಳು: ಟಿ20 ಕ್ರಿಕೆಟ್‌ನಲ್ಲಿ ಸಿಕ್ಸ್​ಗಳಿಗೇನು ಬರವಿರುವುದಿಲ್ಲ. ಆದರೆ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್​ನ ಮಾಜಿ ನಾಯಕ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಇದುವರೆಗೆ ಒಟ್ಟು 63 ಸಿಕ್ಸರ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಬ್ಯಾಟರ್​ ರೋಹಿತ್ ಶರ್ಮಾ. ಹಿಟ್​ಮ್ಯಾನ್ ಈವರೆಗೆ 35 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಇದಾಗ್ಯೂ ಗೇಲ್ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು.

4 / 7
2- ಭಾರಿ ಅಂತರದ ಗೆಲುವು: 2007ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 172 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಇದು ಟಿ20 ವಿಶ್ವಕಪ್‌ನಲ್ಲಿ ಇದುವರೆಗಿನ ಭಾರೀ ಅಂತರದ ಗೆಲುವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 260 ರನ್ ಗಳಿಸಿತ್ತು. ಇದು ಟಿ20 ವಿಶ್ವಕಪ್‌ನಲ್ಲಿನ ಗರಿಷ್ಠ ಸ್ಕೋರ್ ಎಂಬುದು ವಿಶೇಷ. ಹೀಗಾಗಿ ಈ ದಾಖಲೆಯನ್ನು ಮುರಿಯುವುದು ಕೂಡ ಸುಲಭವಲ್ಲ.

5 / 7
3- ವೇಗದ ಅರ್ಧಶತಕ: ಭಾರತದ ಮಾಜಿ ಬಲಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಟಿ20 ವಿಶ್ವಕಪ್‌ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. 2007ರ ವಿಶ್ವಕಪ್‌ನಲ್ಲಿ ನಿರ್ಮಾಣವಾದ ಈ ದಾಖಲೆಯನ್ನು ಇಂದಿಗೂ ಯಾರಿಗೂ ಅಳಿಸಲಾಗಲಿಲ್ಲ. ಹಾಗೆಯೇ ಟಿ20 ವಿಶ್ವಕಪ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ದಾಖಲೆ ಕೂಡ ಯುವಿ ಹೆಸರಿನಲ್ಲಿದೆ. ಹೀಗಾಗಿ ಈ ದಾಖಲೆಗಳನ್ನು ಮುರಿಯುವುದು ಕೂಡ ಕಷ್ಟಸಾಧ್ಯ ಎಂದೇ ಹೇಳಬಹುದು.

6 / 7
4- ಬಿಗ್ ಚೇಸ್: 2016ರ ಟಿ20 ವಿಶ್ವಕಪ್​ನ ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಈ ಮೊತ್ತವನ್ನು ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಅಚ್ಚರಿ ಎಂದರೆ ಅಂತಹದೊಂದು ಬೃಹತ್ ಮೊತ್ತದ ಚೇಸ್ ಆ ಬಳಿಕ ಟಿ20 ವಿಶ್ವಕಪ್​ನಲ್ಲಿ ಕಂಡು ಬಂದಿಲ್ಲ. ಹೀಗಾಗಿ ಈ ದಾಖಲೆಯನ್ನು ಕೂಡ ಮುರಿಯುವುದು ಕೂಡ ಅಂದುಕೊಂಡಷ್ಟು ಸುಲಭವಲ್ಲ.

7 / 7
5- ಅತ್ಯಧಿಕ ರನ್​: ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಗರಿಷ್ಠ ರನ್ ಸರಾಸರಿ ಹೊಂದಿರುವ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಕಿಂಗ್ ಕೊಹ್ಲಿ 27 ಪಂದ್ಯಗಳನ್ನು ಆಡಿದ್ದು, ಈ ವೇಳೆ 81.50 ಸರಾಸರಿಯಲ್ಲಿ 1141 ರನ್ ಗಳಿಸಿದ್ದಾರೆ. ಅಲ್ಲದೆ ಇದೇ 14 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ದಾಖಲೆಯನ್ನೂ ಕೂಡ ಮುರಿಯುವುದು ಸುಲಭವಲ್ಲ ಎಂದೇ ಹೇಳಬಹುದು.