- Kannada News Photo gallery Cricket photos England suffer blow to T20 World Cup hopes as Reece Topley flies home
T20 World Cup 2022: ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಟಿ20 ವಿಶ್ವಕಪ್‌ನಿಂದ ಔಟ್..!
T20 World Cup 2022: ಇಂಗ್ಲೆಂಡ್ ಪಾಳಯದಲ್ಲಿ ಇಂಜುರಿಗೊಳಗಾದ ಆಟಗಾರರ ಪಟ್ಟಿಯಲ್ಲಿ ರೀಸ್ ಟೋಪ್ಲಿ ಎರಡನೇಯವರಾಗಿದ್ದು, ಅವರಿಗೂ ಮುನ್ನ ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್ಸ್ಟೋ ಇಂಜುರಿಯಿಂದಾಗಿ ಇಡೀ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.
Updated on:Oct 19, 2022 | 3:58 PM

ಅಭ್ಯಾಸ ಪಂದ್ಯದಲ್ಲಿ ಪಾಕ್ ತಂಡವನ್ನು ಹೀನಾಯವಾಗಿ ಮಣಿಸುವುದರೊಂದಿಗೆ ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದ್ದ ಇಂಗ್ಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ರೀಸ್ ಟೋಪ್ಲಿ ಕಾಲಿನ ಇಂಜುರಿಯಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

ಫೀಲ್ಡಿಂಗ್ ಅಭ್ಯಾಸದ ವೇಳೆ ಟೋಪ್ಲಿ ಇಂಜುರಿಗೊಂಡಿದ್ದಾರೆ ಎಂದು ವರದಿಯಾಗಿದೆ. ಇಂಜುರಿಗೊಂಡಿರುವ ಟೋಪ್ಲಿ ಬದಲಿಗೆ ಈಗಾಗಲೇ ಇಂಗ್ಲೆಂಡ್ ಮಂಡಳಿ ಬದಲಿ ಆಟಗಾರನನ್ನು ಆಯ್ಕೆ ಮಾಡಿದ್ದು, ಟೋಪ್ಲಿ ಬದಲು ಟೈಮಲ್ ಮಿಲ್ಸ್ ತಂಡಕ್ಕೆ ಎಂಟ್ರಿಕೊಡಲಿದ್ದಾರೆ.

ಇಂಗ್ಲೆಂಡ್ ಪಾಳಯದಲ್ಲಿ ಇಂಜುರಿಗೊಳಗಾದ ಆಟಗಾರರ ಪಟ್ಟಿಯಲ್ಲಿ ರೀಸ್ ಟೋಪ್ಲಿ ಎರಡನೇಯವರಾಗಿದ್ದು, ಅವರಿಗೂ ಮುನ್ನ ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್ಸ್ಟೋ ಇಂಜುರಿಯಿಂದಾಗಿ ಇಡೀ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.

ಇನ್ನು ಟಿ20 ವಿಶ್ವಕಪ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಂಗ್ಲಪಡೆ ಅಕ್ಟೋಬರ್ 22 ರಿಂದ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಮೊಯಿನ್ ಅಲಿ, ಅಲೆಕ್ಸ್ ಹೇಲ್ಸ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಟೈಮಲ್ ಮಿಲ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್ , ಮಾರ್ಕ್ ವುಡ್
Published On - 3:55 pm, Wed, 19 October 22




