Updated on:Oct 01, 2022 | 5:23 PM
ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯವನ್ನು ಆಡಲು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗುವಾಹಟಿ ತಲುಪಿವೆ. ಎರಡನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 2 ರಂದು ಗುವಾಹಟಿಯ ಬರ್ಶಪರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎರಡೂ ತಂಡಗಳು ಗುರುವಾರ ಗುವಾಹಟಿ ತಲುಪಿದ್ದು, ಗುವಾಹಟಿಯಲ್ಲಿ ಉಭಯ ತಂಡಗಳನ್ನು ನೃತ್ಯ ಮತ್ತು ಗಾಯನದ ಮೂಲಕ ಸ್ವಾಗತಿಸಲಾಯಿತು.
ರೋಹಿತ್ ಶರ್ಮಾ ಪಡೆ ಗುವಾಹಟಿಯಲ್ಲಿ ತಮ್ಮ ಮೊದಲ ದಿನದ ಅಭ್ಯಾಸವನ್ನು ನಡೆಸಿತು. ಮೆನ್ ಇನ್ ಬ್ಲೂ ಮೊದಲ ದಿನದ ಅಭ್ಯಾಸದ ನಂತರ, ಸ್ಟಾರ್ ಭಾರತೀಯ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮಹಿಳಾ ಪೊಲೀಸ್ ಪೇದೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹೆಚ್ಚಿನ ಅವಕಾಶ ಪಡೆಯದ ಪಂತ್, ಆಫ್ರಿಕಾ ಸರಣಿಯಲ್ಲಾದರೂ ಅವಕಾಶ ಸಿಗುತ್ತಾ ಎಂದು ಕಾದು ಕುಳಿತಿದ್ದಾರೆ. ಸಿಕ್ಕಿರುವ ಅವಕಾಶಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಪಂತ್ಗೆ ಈ ಸರಣಿಯಲ್ಲಿ ಮಿಂಚಿ ಟಿ20 ವಿಶ್ವಕಪ್ಗೆ ತಂಡದಲ್ಲಿ ಅವಕಾಶ ಪಡೆಯುವ ಆತುರ ಹೆಚ್ಚಿದೆ.
ಇತ್ತ ದಿನೇಶ್ ಕಾರ್ತಿಕ್ ಫಿನಿಶಿಂಗ್ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುತ್ತಿರುವುದೇ, ರಿಷಭ್ ಪಂತ್ಗೆ ಅವಕಾಶ ಸಿಗದೆ ಇರುವುದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲ್ಲುವ ತವಕದಲ್ಲಿದೆ.
Published On - 5:23 pm, Sat, 1 October 22