
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅಜಿಂಕ್ಯ ರಹಾನೆ ಅವರನ್ನು 2025 ರ ಐಪಿಎಲ್‌ಗೆ ತಂಡದ ನಾಯಕನಾಗಿ ನೇಮಿಸಿದೆ. ಅನುಭವದ ಆಧಾರದ ಮೇಲೆ ತಂಡದ ನಾಯಕತ್ವವಹಿಸಿಕೊಂಡಿರುವ ಅಜಿಂಕ್ಯ ರಹಾನೆಯನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದೇ ಕೆಕೆಆರ್ ಫ್ರಾಂಚೈಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಾಸ್ತವವಾಗಿ, ರಹಾನೆಗೆ ನಾಯಕತ್ವವನ್ನು ಹಸ್ತಾಂತರಿಸಿದ ನಂತರ, ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಪ್ರಶ್ನೆಗಳು ಎದ್ದಿವೆ. ರಹಾನೆ ಎಲ್ಲಿ ಆಡುತ್ತಾರೆ ಎಂಬುದು ಈಗ ಪ್ರಶ್ನೆಯಾಗಿದೆ. ಕೆಕೆಆರ್‌ನ ಪ್ಲೇಯಿಂಗ್ ಇಲೆವೆನ್ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರಾ, ‘ಒಬ್ಬ ಬ್ಯಾಟ್ಸ್‌ಮನ್, ನಾಯಕನಾಗಿ ರಹಾನೆ ತಂಡದಲ್ಲಿ ಸ್ಥಾನ ಪಡೆಯಲು ಕಷ್ಟಪಡಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ತಂಡವನ್ನು ನೋಡುವುದಾದರೆ, ಕೆಕೆಆರ್‌ನ ಆರಂಭಿಕ ಸ್ಥಾನ ಬಹುತೇಕ ಸ್ಥಿರವಾಗಿದೆ. ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಮನಸ್ಥಿತಿಯಲ್ಲಿ ಮ್ಯಾನೇಜ್‌ಮೆಂಟ್ ಇದೆ. ಹಾಗೆಯೇ ಅತ್ಯಧಿಕ ಮೊತ್ತ ನೀಡಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿರುವ ವೆಂಕಟೇಶ್ ಅಯ್ಯರ್ಗೆ 3 ನೇ ಕ್ರಮಾಂಕ ಫಿಕ್ಸ್ ಎನ್ನಲಾಗುತ್ತಿದೆ. ಹೀಗಿರುವಾಗ ನಾಯಕ ರಹಾನೆ ಯಾವ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ರಹಾನೆ ಅವರನ್ನು ತಂಡದ ನಾಯಕರನ್ನಾಗಿ ಮಾಡಿರುವುದರಿಂದ, ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕಾಗುತ್ತದೆ. ಹಾಗಾದರೆ ಕೆಕೆಆರ್ ಆಡಳಿತ ಮಂಡಳಿಯು ತನ್ನ ಆರಂಭಿಕ ಜೋಡಿಯಲ್ಲಿ ಅಥವಾ ಮೂರನೇ ಕ್ರಮಾಂಕದಲ್ಲಿ ಬದಲಾವಣೆಗಳನ್ನು ಮಾಡುತ್ತದೆಯೇ? ಎಂಬುದು ಪಂದ್ಯದಲ್ಲೇ ತಿಳಿಯಲಿದೆ.

ಆದರೆ ಆಕಾಶ್ ಚೋಪ್ರಾ ಅವರ ಪ್ರಕಾರ, ಕೆಕೆಆರ್ ಮುಂದಿರುವ ಒಂದು ಆಯ್ಕೆಯೆಂದರೆ, ಸುನಿಲ್ ನರೈನ್ ಬದಲಿಗೆ ಡಿ ಕಾಕ್ ಅವರೊಂದಿಗೆ ರಹಾನೆ ಅವರನ್ನು ಆರಂಭಿಕ ಆಟಗಾರನಾಗಿ ಕಳುಹಿಸಬಹುದು. ಇದು ತಂಡಕ್ಕೆ ಬಲ-ಎಡ ಆರಂಭಿಕ ಜೋಡಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇನ್ನೊಂದು ಆಯ್ಕೆ ಎಂದರೆ ವೆಂಕಟೇಶ್ ಅಯ್ಯರ್ ಬದಲಿಗೆ ರಹಾನೆ ಅವರನ್ನು 3 ನೇ ಸ್ಥಾನದಲ್ಲಿ ಕಣಕ್ಕಿಳಿಸಬಹುದಾಗಿದೆ.

ಮೊದಲ ಎರಡು ಆಯ್ಕೆಗಳ ಹೊರತಾಗಿ, ಇನ್ನೊಂದು ಆಯ್ಕೆ ಇದೆ, ಅಂದರೆ ರಹಾನೆ ಆಡುವ ಹನ್ನೊಂದರ ಬಳಗದಲ್ಲಿ 4 ನೇ ಸ್ಥಾನದಲ್ಲಿ ಆಡುವುದನ್ನು ನಾವು ಕಾಣಬಹುದು. ರಹಾನೆ ಸ್ಥಾನದ ಬಗ್ಗೆ ಕೆಕೆಆರ್‌ಗೆ ಸಾಕಷ್ಟು ತಲೆನೋವು ಇರುವುದು ಸ್ಪಷ್ಟ. ಇಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ಫ್ರಾಂಚೈಸಿ ನಾಯಕ ರಹಾನೆಯನ್ನು ಯಾವ ಸ್ಥಾನದಲ್ಲಿ ಕಣಕ್ಕಿಳಿಸಲು ನಿರ್ಧರಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.

ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ 11: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಮಣದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸ್ಪೆನ್ಸರ್ ಜಾನ್ಸನ್, ಎನ್ರಿಚ್ ನೋಕಿಯಾ,