Sign In

By signing in or creating an account, you agree with Associated Broadcasting Company's Terms & Conditions and Privacy Policy.

78 ಎಸೆತಗಳಲ್ಲಿ 21 ಸಿಕ್ಸ್: ಪಾಕ್ ವಿರುದ್ಧ ಫಿನ್ ಅಲೆನ್ ಸಿಡಿಲಬ್ಬರ

Fin Allen: ಟಿ20 ಕ್ರಿಕೆಟ್​ನಲ್ಲಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ ಅವರ ಅಬ್ಬರ ಮುಂದುವರೆದಿದೆ. ಅದರಲ್ಲೂ ಪಾಕಿಸ್ತಾನ್ ಬೌಲರ್​ಗಳ ಬೆಂಡೆತ್ತುವಲ್ಲಿ ಇದೀಗ ಅಲೆನ್ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಕೇವಲ 78 ಎಸೆತಗಳಲ್ಲಿ ಅವರು 175 ರನ್ ಬಾರಿಸಿರುವುದು. ಈ ವೇಳೆ ಫಿನ್ ಅಲೆನ್ ಅವರ ಬ್ಯಾಟ್​ನಿಂದ ಮೂಡಿಬಂದಿರುವ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 16.

ಝಾಹಿರ್ ಯೂಸುಫ್
|

Updated on: Mar 18, 2025 | 12:55 PM

ಪಾಕಿಸ್ತಾನ್ ವಿರುದ್ಧ ಫಿನ್ ಅಲೆನ್ ಸಿಡಿಲಬ್ಬರದ ಮುಂದುವರೆದಿದೆ. ಅದು ಕೂಡ ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ ಮೈದಾನದಲ್ಲಿ ಸಿಕ್ಸರ್​ಗಳ ಸುರಿಮಳೆಯೊಂದಿಗೆ ಎಂಬುದು ವಿಶೇಷ. ಈ ಮೈದಾನದಲ್ಲಿ ಪಾಕಿಸ್ತಾನ್ ವಿರುದ್ಧ ಸ್ಪೋಟಕ ಇನಿಂಗ್ಸ್ ಪ್ರದರ್ಶಿಸಿರುವ ಅಲೆನ್ ಈವರೆಗೆ 21 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ.

1 / 5

ಜನವರಿ 17, 2024 ರಂದು ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಲೆನ್ ಕೇವಲ 62 ಎಸೆತಗಳಲ್ಲಿ 137 ರನ್ ಸಿಡಿಸಿದ್ದರು. ಈ ವೇಳೆ ಫಿನ್ ಅಲೆನ್ ಬ್ಯಾಟ್​ನಿಂದ ಮೂಡಿಬಂದ ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 16. ಇನ್ನು 5 ಫೋರ್​ಗಳನ್ನು ಸಹ ಬಾರಿಸಿದ್ದರು.

2 / 5
ಇದೀಗ ಇದೇ ಮೈದಾನದಲ್ಲಿ ಮತ್ತೊಮ್ಮೆ ಫಿನ್ ಅಲೆನ್ ಪಾಕಿಸ್ತಾನ್  ಬೌಲರ್​ಗಳ ಬೆಂಡೆತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ 2ನೇ ಮ್ಯಾಚ್​ನಲ್ಲಿ 16 ಎಸೆತಗಳನ್ನು ಎದುರಿಸಿದ ಅಲೆನ್ 38 ರನ್ ಬಾರಿಸಿದ್ದಾರೆ. ಈ ವೇಳೆ ಒಟ್ಟು 5 ಸಿಕ್ಸ್ ಹಾಗೂ 1 ಫೋರ್​ ಬಾರಿಸಿದ್ದಾರೆ.

3 / 5
‘ವಿಶೇಷ ಎಂದರೆ ಪಾಕಿಸ್ತಾನ್ ವಿರುದ್ಧದ ಈ ಎರಡು ಪಂದ್ಯಗಳಲ್ಲಿ ಫಿನ್ ಅಲೆನ್ ಎದುರಿಸಿದ್ದು ಕೇವಲ 78 ಎಸೆತಗಳನ್ನು ಮಾತ್ರ. ಈ ವೇಳೆ 175 ರನ್ ಸಿಡಿಸಿದ್ದಾರೆ. ಇದರಲ್ಲಿ ಬರೋಬ್ಬರಿ 21 ಸಿಕ್ಸರ್​ಗಳು ಒಳಗೊಂಡಿವೆ. ಈ ಮೂಲಕ ಡ್ಯುನೆಡಿನ್‌ನ ಯೂನಿವರ್ಸಿಟಿ ಓವಲ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಅಲೆನ್ ಏಕಪಕ್ಷೀಯ ಪ್ರಾಬಲ್ಯ ಮುಂದುವರೆಸಿದ್ದಾರೆ.

4 / 5
ಅಂದಹಾಗೆ ಇದೇ ಫಿನ್ ಅಲೆನ್ ಈ ಹಿಂದೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. 2021 ರಲ್ಲಿ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂಬುದೇ ವಿಶೇಷ. ಈ ಮೂರು ವರ್ಷಗಳಲ್ಲಿ ಆರ್​ಸಿಬಿ ಒಟ್ಟು 45 ಪಂದ್ಯಗಳನ್ನಾಡಿದೆ. ಈ ವೇಳೆ ಒಮ್ಮೆಯೂ ಅಲೆನ್​ ಅವರನ್ನು ಕಣಕ್ಕಿಳಿಸಿರಲಿಲ್ಲ ಎಂಬುದೇ ಅಚ್ಚರಿ.

5 / 5
Follow us
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್

ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ

ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ

ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!

ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ

ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ

ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ

ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು

ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ

RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ