ರಣಜಿಯಲ್ಲಿ ಶತಕ ಬಾರಿಸಿ ಆಯ್ಕೆಗೆ ವಯಸ್ಸು ಮಾನದಂಡವಾಗಬಾರದು ಎಂದ ಅಜಿಂಕ್ಯ ರಹಾನೆ

Updated on: Oct 26, 2025 | 9:09 PM

Ajinkya Rahane: ಮುಂಬೈ ಪರ ಅಜಿಂಕ್ಯ ರಹಾನೆ ರಣಜಿ ಟ್ರೋಫಿಯಲ್ಲಿ 159 ರನ್ ಗಳಿಸಿ ಅಮೋಘ ಶತಕ ಬಾರಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ರಹಾನೆ, ಬಳಿಕ ಮಾಧ್ಯಮಗಳಿಗೆ, ಟೀಂ ಇಂಡಿಯಾ ಕಂಬ್ಯಾಕ್ ಕುರಿತು ಮಾತನಾಡಿದರು. ವಯಸ್ಸು ಆಯ್ಕೆಗೆ ಅಡ್ಡಿಯಾಗಬಾರದು, ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಅನುಭವ ಮುಖ್ಯ ಎಂದ ರಹಾನೆ, ಮೈಕೆಲ್ ಹಸ್ಸಿಯನ್ನು ಉದಾಹರಿಸಿದರು. ತಮ್ಮ ದೇಶೀಯ ಪ್ರದರ್ಶನ ಉತ್ತಮವಾಗಿರದಿದ್ದರೂ, ಭಾರತ ತಂಡಕ್ಕೆ ಮರಳುವ ಆಸಕ್ತಿ ವ್ಯಕ್ತಪಡಿಸಿದರು.

1 / 6
ಮುಂಬೈ ತಂಡವು 2025-26 ರ ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯವನ್ನು ಛತ್ತೀಸ್‌ಗಢ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಎರಡನೇ ದಿನದ ಆಟದ ಅಂತ್ಯದ ವೇಳೆಗೆ 8 ವಿಕೆಟ್‌ಗಳ ನಷ್ಟಕ್ಕೆ 406 ರನ್ ಗಳಿಸಿದೆ. ತಂಡದ ಪರ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ತಮ್ಮ ವೃತ್ತಿಜೀವನದ 42 ನೇ ಪ್ರಥಮ ದರ್ಜೆ ಶತಕ ಬಾರಿಸಿದ್ದಾರೆ.

2 / 6
ಅಜಿಂಕ್ಯ ರಹಾನೆ ಈ ಇನ್ನಿಂಗ್ಸ್ ಮುಂಬೈ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಏಕೆಂದರೆ ಅವರು ಬ್ಯಾಟಿಂಗ್ ಮಾಡಲು ಬಂದಾಗ, ಮುಂಬೈ 3 ವಿಕೆಟ್‌ಗೆ 38 ರನ್‌ ಗಳಿಸ ಸಂಕಷ್ಟದಲ್ಲಿತ್ತು. ನಂತರ ರಹಾನೆ ತಂಡದ ಇನ್ನಿಂಗ್ಸ್ ನಿಭಾಯಿಸಿ 303 ಎಸೆತಗಳನ್ನು ಎದುರಿಸಿ 21 ಬೌಂಡರಿಗಳನ್ನು ಒಳಗೊಂಡಂತೆ 159 ರನ್‌ಗಳ ಇನ್ನಿಂಗ್ಸ್ ಆಡಿದರು.

3 / 6
ಈ ಸ್ಮರಣೀಯ ಇನ್ನಿಂಗ್ಸ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಹಾನೆ, ಟೀಂ ಇಂಡಿಯಾಗೆ ಮರಳುವ ಬಗ್ಗೆ ಮಹತ್ವದ ಹೇಳಿಕೆ ನೀಡಿದರು. ‘ವಯಸ್ಸು ಆಯ್ಕೆಗೆ ಅಡ್ಡಿಯಾಗಬಾರದು. ಇದು ವಯಸ್ಸಿನ ಬಗ್ಗೆ ಅಲ್ಲ, ಇದು ಉದ್ದೇಶದ ಬಗ್ಗೆ. ಇದು ಕೆಂಪು ಚೆಂಡಿನ ಮೇಲಿನ ಉತ್ಸಾಹ ಮತ್ತು ಕಠಿಣ ಪರಿಶ್ರಮದ ಬಗ್ಗೆ. ನಾನು ವಯಸ್ಸಾದವರ ಕಡೆಗಣನೆಯನ್ನು ಒಪ್ಪುವುದಿಲ್ಲ.

4 / 6
ಏಕೆಂದರೆ ಮೈಕೆಲ್ ಹಸ್ಸಿ 30 ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾದಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಬಹಳಷ್ಟು ರನ್ ಗಳಿಸಿದರು. ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಅನುಭವವು ಮುಖ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ತಂಡಕ್ಕೆ ನನ್ನ ಅಗತ್ಯವಿತ್ತು ಎಂದು ನಾನು ಭಾವಿಸುತ್ತೇನೆ. ಜನರು 34-35 ರ ನಂತರ ಆಟಗಾರರಿಗೆ ವಯಸ್ಸಾಗಿದೆ ಎಂದು ಭಾವಿಸುತ್ತಾರೆ. ಆದರೆ ರೆಡ್-ಬಾಲ್ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುವ ಆಟಗಾರರಿಗೆ ಅವಕಾಶ ಸಿಗಬೇಕು.

5 / 6
ಆಯ್ಕೆದಾರರು ಕೇವಲ ಅಂಕಿಅಂಶಗಳ ಮೇಲೆ ಅಲ್ಲ, ಉದ್ದೇಶ ಮತ್ತು ಉತ್ಸಾಹದ ಮೇಲೆ ಗಮನಹರಿಸಬೇಕು. ಇದು ಯಾವಾಗಲೂ ಪ್ರದರ್ಶನದ ಬಗ್ಗೆ ಅಲ್ಲ, ಆದರೆ ಆಟಗಾರನು ಕೆಂಪು ಚೆಂಡಿನೊಂದಿಗೆ ಆಡಲು ಎಷ್ಟು ಸಮರ್ಪಿತನಾಗಿರುತ್ತಾನೆ ಎಂಬುದರ ಮೇಲೆ ಎಂದಿದ್ದಾರೆ.

6 / 6
ಅಜಿಂಕ್ಯ ರಹಾನೆ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಡಿ ಎರಡು ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವರು ಕೊನೆಯ ಬಾರಿಗೆ ಜುಲೈ 2023 ರಲ್ಲಿ ಭಾರತ ಪರ ಟೆಸ್ಟ್ ಪಂದ್ಯ ಆಡಿದ್ದರು. ಅಂದಿನಿಂದ, ಆಯ್ಕೆದಾರರು ಅವರಿಗೆ ಅವಕಾಶ ನೀಡಿಲ್ಲ. ಅವರ ಕಳೆದ ಎರಡು ದೇಶೀಯ ಋತುಗಳು ಸಹ ವಿಶೇಷವಾಗಿ ಪ್ರಭಾವಶಾಲಿಯಾಗಿಲ್ಲ. ಇದೆಲ್ಲದರ ಹೊರತಾಗಿಯೂ, ಹೋರಾಟ ಬಿಡದ ರಹಾನೆ, ಇನ್ನೂ ಪುನರಾಗಮನ ಮಾಡಲು ಉತ್ಸುಕರಾಗಿದ್ದಾರೆ.