T20 Record: 8 ಭರ್ಜರಿ ಸಿಕ್ಸ್, 1 ಫೋರ್: ಒಂದೇ ಓವರ್​ನಲ್ಲಿ 55 ರನ್​..!

| Updated By: ಝಾಹಿರ್ ಯೂಸುಫ್

Updated on: Apr 29, 2023 | 9:22 PM

IPL 2023 Kannada: 2018 ರಲ್ಲಿ ಎಸ್​ಆರ್​ಹೆಚ್ ಪರ ಪಾದರ್ಪಣೆ ಮಾಡಿದ್ದ ಹೇಲ್ಸ್ ಐಪಿಎಲ್​ನಲ್ಲಿ​ 6 ಪಂದ್ಯಗಳಿಂದ 148 ರನ್​ ಕಲೆಹಾಕಿದ್ದರು. ಈ ವೇಳೆ ಅಲೆಕ್ಸ್ ಹೇಲ್ಸ್​ ಬ್ಯಾಟ್​ನಿಂದ 13 ಬೌಂಡರಿ ಹಾಗೂ 6 ಸಿಕ್ಸ್​ಗಳು ಮೂಡಿಬಂದಿರುವುದು ವಿಶೇಷ.

1 / 8
ಐಪಿಎಲ್​ನಲ್ಲಿ (IPL) ಒಂದೇ ಓವರ್​ನಲ್ಲಿ ಮೂಡಿಬಂದ ಅತ್ಯಧಿಕ ರನ್ ಎಂದರೆ 37. ಈ ದಾಖಲೆ ಬರೆದ ಮೊದಲ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ (Chris Gayle). 2011 ರಲ್ಲಿ ಆರ್​ಸಿಬಿ ಪರ ಆಡಿದ್ದ ಗೇಲ್ ಕೊಚ್ಚಿ ಟಸ್ಕರ್ಸ್​ ತಂಡದ ವೇಗಿ ಪ್ರಶಾಂತ್ ಪರಮೇಶ್ವರನ್ ಓವರ್​ನಲ್ಲಿ ನೋಬಾಲ್​ ಸೇರಿದಂತೆ 37 ರನ್ ಬಾರಿಸಿದ್ದರು. ಇದಾದ ಬಳಿಕ 2021 ರಲ್ಲಿ ಆರ್​ಸಿಬಿ (RCB) ವಿರುದ್ದದ ಪಂದ್ಯದಲ್ಲಿ ಸಿಎಸ್​ಕೆ (CSK) ಆಟಗಾರ ರವೀಂದ್ರ ಜಡೇಜಾ (Ravindra Jadeja) ಹರ್ಷಲ್ ಪಟೇಲ್ ಅವರ ಒಂದೇ ಓವರ್​ನಲ್ಲಿ 37 ರನ್​ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.

2 / 8
ಇದು ಐಪಿಎಲ್​ನ ಓವರ್​ ಒಂದರ ಗರಿಷ್ಠ ಸ್ಕೋರ್. ಇದಾಗ್ಯೂ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 55 ರನ್ ಬಾರಿಸಿದ ದಾಖಲೆ ಕೂಡ ಇದೆ. ಈ ದಾಖಲೆಯು ಪ್ರಸ್ತುತ ಕ್ರಿಕೆಟ್ ಆಡುತ್ತಿರುವ ಆಟಗಾರನ ಹೆಸರಿನಲ್ಲಿರುವುದು ವಿಶೇಷ.

3 / 8
ಹೌದು, ನೀವು ಅಲೆಕ್ಸ್ ಹೇಲ್ಸ್ (Alex Hales)​ ಹೆಸರು ಕೇಳಿರಬಹುದು. ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಆಟಗಾರ. ಈ ಹಿಂದೆ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದರು. ಇದೇ ಅಲೆಕ್ಸ್ ಹೇಲ್ಸ್​ ಹೆಸರಿನಲ್ಲಿದೆ ಓವರ್​ವೊಂದರಲ್ಲಿ 55 ರನ್ ಬಾರಿಸಿದ ದಾಖಲೆ. ಅದು ಕೂಡ ತಮ್ಮ 16ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

4 / 8
2005 ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐಡಲ್ ಟಿ20 ಟೂರ್ನಿಯಲ್ಲಿ ಅಲೆಕ್ಸ್ ಹೇಲ್ಸ್ ಈ ದಾಖಲೆ ಬರೆದಿದ್ದರು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ 16 ವರ್ಷದ ಅಲೆಕ್ಸ್ ಹೇಲ್ಸ್ ಒಂದೇ ಓವರ್​ನಲ್ಲಿ 8 ಸಿಕ್ಸ್ ಸಿಡಿಸಿದ್ದರು. ಜೊತೆಗೆ 1 ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ್ದರು.

5 / 8
ಅಂದರೆ ಈ ಓವರ್​ನಲ್ಲಿ 3 ನೋ ಬಾಲ್ ಎಸೆಯಲಾಗಿತ್ತು. ಇದರ ಲಾಭ ಪಡೆದ ಅಲೆಕ್ಸ್ ಹೇಲ್ಸ್ 8 ಸಿಕ್ಸ್ ಹಾಗೂ 1 ಫೋರ್ ಬಾರಿಸುವ ಮೂಲಕ ಒಟ್ಟು 52 ರನ್ ಬಾರಿಸಿದ್ದರು. ನೋ ಬಾಲ್ ಸೇರಿದಂತೆ ಆ ಓವರ್​ನಲ್ಲಿ ಒಟ್ಟು 55 ರನ್​ಗಳು ಮೂಡಿಬಂದಿತ್ತು. ಇದಾಗ್ಯೂ ಇದು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವಾಗಿರದ ಕಾರಣ ಈ ದಾಖಲೆಯನ್ನು ಐಸಿಸಿ ರೆಕಾರ್ಡ್ ಬುಕ್​​ನಲ್ಲಿ ಪರಿಗಣಿಸಲಾಗಿಲ್ಲ.

6 / 8
ಅಂದು 16 ವರ್ಷದ ಅಲೆಕ್ಸ್ ಹೇಲ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದರು. ಆ ಬಳಿಕ ಇಂಗ್ಲೆಂಡ್ ತಂಡದಲ್ಲೂ ಕಾಣಿಸಿಕೊಂಡಿದ್ದ ಹೇಲ್ಸ್, ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ ಮೊದಲ ಶತಕ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ಬರೆದರು.

7 / 8
ಇನ್ನು ಅಲೆಕ್ಸ್ ಹೇಲ್ಸ್ ಈ ಹಿಂದೆ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಆಡಿದ್ದು ಕೇವಲ 6 ಪಂದ್ಯಗಳನ್ನು ಮಾತ್ರ.

8 / 8
2018 ರಲ್ಲಿ ಎಸ್​ಆರ್​ಹೆಚ್ ಪರ ಪಾದರ್ಪಣೆ ಮಾಡಿದ್ದ ಹೇಲ್ಸ್ ಐಪಿಎಲ್​ನಲ್ಲಿ​ 6 ಪಂದ್ಯಗಳಿಂದ 148 ರನ್​ ಕಲೆಹಾಕಿದ್ದರು. ಈ ವೇಳೆ ಅಲೆಕ್ಸ್ ಹೇಲ್ಸ್​ ಬ್ಯಾಟ್​ನಿಂದ 13 ಬೌಂಡರಿ ಹಾಗೂ 6 ಸಿಕ್ಸ್​ಗಳು ಮೂಡಿಬಂದಿರುವುದು ವಿಶೇಷ.