T20 World Cup 2024: ಟಿ20 ವಿಶ್ವಕಪ್​ನಲ್ಲಿ ಸೆಮಿ ಫೈನಲ್​ಗೇರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು

T20 World Cup 2024: ಟಿ20 ವಿಶ್ವಕಪ್​ನ 9ನೇ ಆವೃತ್ತಿ ಜೂನ್ 2 ರಿಂದ ಶುರುವಾಗಲಿದೆ. ಯುಎಸ್​ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡವು ಜೂನ್ 5 ರಂದು ಕಣಕ್ಕಿಳಿಯಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಿದರೆ, ಜೂನ್ 9 ರಂದು ನಡೆಯಲಿರುವ ತನ್ನ 2ನೇ ಪಂದ್ಯಲ್ಲಿ ಪಾಕಿಸ್ತಾನ್ ವಿರುದ್ಧ ಸೆಣಸಲಿದೆ.

ಝಾಹಿರ್ ಯೂಸುಫ್
|

Updated on: May 29, 2024 | 11:07 AM

T20 World Cup 2024: ಟಿ20 ವಿಶ್ವಕಪ್ 2024 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ವೆಸ್ಟ್ ಇಂಡೀಸ್-ಯುಎಸ್​ಎ ಜಂಟಿಯಾಗಿ ಆಯೋಜಿಸಲಿರುವ 9ನೇ ಆವೃತ್ತಿಯಲ್ಲಿ ಈ ಟೂರ್ನಿಯಲ್ಲಿ ಈ ಬಾರಿ 20 ತಂಡಗಳು ಕಣಕ್ಕಿಳಿಯಲಿರುವುದು ವಿಶೇಷ. ಹೀಗಾಗಿ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

1 / 7
ಈ ಪೈಪೋಟಿ ನಡುವೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ತಂಡ ಸೂಪರ್-8 ಹಂತಕ್ಕೇರಲಿದೆ. ಈ ಹಂತದಲ್ಲಿ ಎಂಟು ತಂಡಗಳು ಸೆಣಸಲಿದ್ದು, ಇದರಲ್ಲಿ ಗೆದ್ದು ಸೆಮಿಫೈನಲ್​ಗೇರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು.

2 / 7
ಅಂಬಾಟಿ ರಾಯುಡು ಪ್ರಕಾರ, ಈ ಬಾರಿ ಟೀಮ್ ಇಂಡಿಯಾ ಸೆಮಿಫೈನಲ್​ಗೇರುವುದು ಖಚಿತ. ಭಾರತೀಯ ಆಟಗಾರರು ಇತ್ತೀಚೆಗೆ ಐಪಿಎಲ್​ ಆಡಿರುವುದರಿಂದ ಎಲ್ಲರೂ ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಪಡೆ ಸೆಮಿಫೈನಲ್​ಗೆ​ ಪ್ರವೇಶಿಸುವುದು ಖಚಿತ ಎಂದಿದ್ದಾರೆ.

3 / 7
ಇನ್ನು ಇಂಗ್ಲೆಂಡ್ ತಂಡ ಕೂಡ ಬಲಿಷ್ಠವಾಗಿದೆ. ತಂಡದಲ್ಲಿರುವ ಜೋಸ್ ಬಟ್ಲರ್, ಫಿಲ್ ಸಾಲ್ಟ್, ವಿಲ್ ಜಾಕ್ಸ್ ಸೇರಿದಂತೆ ಪ್ರಮುಖರು ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡವನ್ನು ಕೂಡ ಸೆಮಿಫೈನಲ್​ನಲ್ಲಿ ನಿರೀಕ್ಷಿಸಬಹುದು ಎಂದು ಅಂಬಾಟಿ ರಾಹುಡು ತಿಳಿಸಿದ್ದಾರೆ.

4 / 7
ಹಾಗೆಯೇ ಕೇನ್ ವಿಲಿಯಮ್ಸನ್ ಮುಂದಾಳತ್ವದ ನ್ಯೂಝಿಲೆಂಡ್ ತಂಡವನ್ನು ಸೆಮಿಫೈನಲ್​ನಲ್ಲಿ ಎದುರು ನೋಡಬಹುದು. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ಪಡೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ನ್ಯೂಝಿಲೆಂಡ್ ಕೂಡ ಸೆಮಿಫೈನಲ್ ಹಂತಕ್ಕೇರಲಿದೆ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

5 / 7
ಇನ್ನು ಸೌತ್ ಆಫ್ರಿಕಾ ತಂಡದಲ್ಲಿ ಬಲಿಷ್ಠ ದಾಂಡಿಗರ ದಂಡೇ ಇದ್ದು, ಅವರಲ್ಲಿ ಬಹುತೇಕರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ತಂಡ ಕೂಡ ಈ ಬಾರಿ ಫೈನಲ್​ಗೆ ಪ್ರವೇಶಿಸಲಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

6 / 7
ಅಂಬಾಟಿ ರಾಯುಡು ಪ್ರಕಾರ, ಈ ಬಾರಿ ಭಾರತ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ ಆಡಲಿದೆ. ಅದರಂತೆ ಜೂನ್ 27 ರಂದು ನಡೆಯಲಿರುವ ಸೆಮಿ ಫೈನಲ್ ಪಂದ್ಯಗಳಲ್ಲಿ ಈ ನಾಲ್ಕು ತಂಡಗಳು ಕಣಕ್ಕಿಳಿಯಲಿದೆಯಾ? ರಾಯುಡು ಅವರ ಭವಿಷ್ಯ ನಿಜವಾಗಲಿದೆಯಾ ಕಾದು ನೋಡಬೇಕಿದೆ.

7 / 7
Follow us
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!

ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್

ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ

ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ

ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!

ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ

ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು

ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ

ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ