IPL 2025: RCB ರಿಟೈನ್ ಮಾಡಿಕೊಳ್ಳಲಿರುವ 4 ಆಟಗಾರರು..!

IPL 2025: ಐಪಿಎಲ್​ನ 18ನೇ ಆವೃತ್ತಿಗಾಗಿ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ ಮುನ್ನ ಇಂತಿಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುವು ಮಾಡಿಕೊಡಲಿದೆ. ಅದರಂತೆ ಕೆಲವೇ ಕೆಲವು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ಇರಲಿದೆ. ಇನ್ನುಳಿದಂತೆ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ.

|

Updated on: May 29, 2024 | 9:08 AM

ಐಪಿಎಲ್ ಸೀಸನ್ 17 ಮುಗಿದಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಒಟ್ಟು 15 ಪಂದ್ಯಗಳನ್ನಾಡಿದೆ. ಈ ಹದಿನೈದು ಮ್ಯಾಚ್​ಗಳಲ್ಲಿ ಗೆದ್ದಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಇದಾಗ್ಯೂ ಆರ್​ಸಿಬಿ ಈ ಬಾರಿ ಪ್ಲೇಆಫ್ ಪ್ರವೇಶಿಸುವಲ್ಲಿ ಸಫಲವಾಗಿತ್ತು. ಆದರೆ ಒಟ್ಟಾರೆ ತಂಡದ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಫಾಫ್ ಪಡೆಯಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ ಎಂದೇ ಹೇಳಬಹುದು.

1 / 7
ಹೀಗಾಗಿ ಮುಂಬರುವ ಐಪಿಎಲ್​ಗೂ ಮುನ್ನ ಆರ್​ಸಿಬಿ ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಲಿದೆ. ಇನ್ನು ಐಪಿಎಲ್ 2025 ಕ್ಕಾಗಿ ಮೆಗಾ ಹರಾಜು ನಡೆಯುವುದರಿಂದ ಕೇವಲ 4 ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳುವ ಅವಕಾಶ ಇರಲಿದೆ. ಈ ಹಿಂದೆ 2022 ರಲ್ಲಿ ಮೆಗಾ ಹರಾಜು ನಡೆದಾಗ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದೇ ಸಿದ್ಧ ಸೂತ್ರ ಮುಂದಿನ ಮೆಗಾ ಆಕ್ಷನ್​ಗೂ ಅನ್ವಯಿಸುವ ಸಾಧ್ಯತೆಯಿದೆ.

2 / 7
ಒಂದು ವೇಳೆ ಮೆಗಾ ಹರಾಜಿಗೂ ಮುನ್ನ ನಾಲ್ವರನ್ನು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿದರೆ, ಆರ್​ಸಿಬಿ ಯಾರನ್ನೆಲ್ಲಾ ಉಳಿಸಿಕೊಳ್ಳಲಿದೆ ಎಂದು ನೋಡುವುದಾದರೆ...

3 / 7
1- ವಿರಾಟ್ ಕೊಹ್ಲಿ: ಆರ್​ಸಿಬಿ ತಂಡದ ಬ್ರ್ಯಾಂಡ್ ವಿರಾಟ್ ಕೊಹ್ಲಿ. ಹೀಗಾಗಿ ಈ ಬಾರಿ ಕೂಡ ಕಿಂಗ್ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ. ಅದರಲ್ಲೂ ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು ಕೂಡ ಕೊಹ್ಲಿ. 15 ಪಂದ್ಯಗಳಲ್ಲಿ 741 ರನ್​ ಬಾರಿಸಿರುವ ಕಾರಣ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

4 / 7
2- ವಿಲ್ ಜಾಕ್ಸ್: ಟಿ20 ಕ್ರಿಕೆಟ್​ನ ಹೊಸ ಪವರ್ ಹಿಟ್ಟರ್ ಆಗಿ ಗುರುತಿಸಿಕೊಂಡಿರುವ ವಿಲ್ ಜಾಕ್ಸ್ ಅವರನ್ನು ಆರ್​ಸಿಬಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿ ಆರ್​ಸಿಬಿ ಪರ ಕೇವಲ 8 ಪಂದ್ಯಗಳನ್ನಾಡಿದ್ದ ಜಾಕ್ಸ್ 1 ಭರ್ಜರಿ ಶತಕ ಹಾಗೂ ಅರ್ಧಶತಕದೊಂದಿಗೆ 230 ರನ್ ಕಲೆಹಾಕಿದ್ದಾರೆ. ಹೀಗಾಗಿ ಇಂಗ್ಲೆಂಡ್ ಆಟಗಾರನನ್ನು ಆರ್​ಸಿಬಿ ರಿಟೈನ್ ಮಾಡಿಕೊಳ್ಳಬಹುದು.

5 / 7
3- ರಜತ್ ಪಾಟಿದಾರ್: ಆರ್​ಸಿಬಿ ತಂಡವು ಮೂರನೇ ಆಟಗಾರನಾಗಿ ರಜತ್ ಪಾಟಿದಾರ್ ಅವರನ್ನು ಉಳಿಸಿಕೊಳ್ಳಬಹುದು. ಏಕೆಂದರೆ ಈ ಬಾರಿ 15 ಇನಿಂಗ್ಸ್ ಆಡಿದ್ದ ಪಾಟಿದಾರ್ 5 ಅರ್ಧಶತಕಗಳೊಂದಿಗೆ ಒಟ್ಟು 395 ರನ್ ಬಾರಿಸಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕಕ್ಕಾಗಿ ರಜತ್ ಪಾಟಿದಾರ್ ಅವರನ್ನು ಆರ್​ಸಿಬಿ ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

6 / 7
4- ಮೊಹಮ್ಮದ್ ಸಿರಾಜ್: ಈ ಬಾರಿಯ ಐಪಿಎಲ್​ನಲ್ಲಿ ಸಿರಾಜ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದಾಗ್ಯೂ ಅವರು 14 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಬೌಲರ್ ಆಗಿರುವ ಕಾರಣ ಸಿರಾಜ್ ಯಾವಾಗ ಬೇಕಿದ್ದರೂ ಲಯಕ್ಕೆ ಮರಳಬಹುದು. ಹೀಗಾಗಿ ಆರ್​ಸಿಬಿ 4ನೇ ಆಟಗಾರನಾಗಿ ಮೊಹಮ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ.

7 / 7
Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ

ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ

ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು

‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್

ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ

ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!

ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!

ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್

ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ