Ashes 2021: ಶತಕ ವಂಚಿತ ವಾರ್ನರ್; 100 ವರ್ಷಗಳ ಹಳೆಯ ದಾಖಲೆ ಪುನರಾವರ್ತಿಸಿದ ಕಾಂಗರೂ ಬ್ಯಾಟರ್!

| Updated By: ಪೃಥ್ವಿಶಂಕರ

Updated on: Dec 16, 2021 | 7:51 PM

Ashes 2021: ವಾರ್ನರ್ 100 ವರ್ಷಗಳ ಹಳೆಯ ಆಶಸ್ ದಾಖಲೆಯನ್ನು ಪುನರಾವರ್ತಿಸಿದ್ದಾರೆ. ಆಶಸ್ ಸರಣಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ 90-99ರ ನಡುವೆ ಔಟಾಗಿರುವುದು ಕಳೆದ 100 ವರ್ಷಗಳಲ್ಲಿ ಇದೇ ಮೊದಲು.

1 / 4
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯವು ಗುರುವಾರ, ಡಿಸೆಂಬರ್ 16 ರಂದು ಅಡಿಲೇಡ್‌ನಲ್ಲಿ ಪ್ರಾರಂಭವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ದಿನವೇ ಇಂಗ್ಲೆಂಡ್ ಬೌಲರ್‌ಗಳನ್ನು ಸರಿಯಾಗಿ ಬೆಂಡೆತ್ತಿದೆ. ಬ್ರಿಸ್ಬೇನ್ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಂತೂ ಮತ್ತೊಮ್ಮೆ ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಬ್ಯಾಟ್ ಮೂಲಕ ಅಬ್ಬರಿಸಿದರೂ ಬ್ರಿಸ್ಬೇನ್​ನಂತೆ ಮತ್ತೊಮ್ಮೆ ಶತಕ ವಂಚಿತರಾದರು.

2 / 4
ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ 35 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ ವಾರ್ನರ್, ಎರಡನೇ ಮತ್ತು ಮೂರನೇ ಸೆಷನ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಮೂರನೇ ಅವಧಿಯಲ್ಲಿ, ಅವರು ಶತಕದತ್ತ ಸಾಗುತ್ತಿದ್ದರು, ಆದರೆ 95 ರನ್ ಗಳಿಸಿದ್ದಾಗ, ಅವರು ಬೆನ್ ಸ್ಟೋಕ್ಸ್ ಎಸೆತದಲ್ಲಿ ಔಟಾದರು. ಈ ಮೂಲಕ ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾದರು. ಬ್ರಿಸ್ಬೇನ್ ಟೆಸ್ಟ್‌ನಲ್ಲೂ ಅವರು 94 ರನ್ ಗಳಿಸಿ ಔಟಾದರು.

3 / 4
ಅವರ ಟೆಸ್ಟ್ ವೃತ್ತಿಜೀವನದಲ್ಲಿ, ವಾರ್ನರ್ 90 ಮತ್ತು 99 ರ ನಡುವೆ ಕೇವಲ ಮೂರನೇ ಬಾರಿಗೆ ಔಟಾಗಿದ್ದಾರೆ. ವಿಶೇಷವೆಂದರೆ ಟೆಸ್ಟ್ ವೃತ್ತಿಜೀವನದ 159 ಇನ್ನಿಂಗ್ಸ್‌ಗಳಲ್ಲಿ, ಅವರು ಕೇವಲ ಒಂದು ಬಾರಿ 90 ರ ಗಡಿ ದಾಟಿದ ನಂತರ ಔಟಾಗಿದ್ದಾರೆ.

4 / 4
ಇದಷ್ಟೇ ಅಲ್ಲ, ವಾರ್ನರ್ 100 ವರ್ಷಗಳ ಹಳೆಯ ಆಶಸ್ ದಾಖಲೆಯನ್ನು ಪುನರಾವರ್ತಿಸಿದ್ದಾರೆ. ಆಶಸ್ ಸರಣಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ 90-99ರ ನಡುವೆ ಔಟಾಗಿರುವುದು ಕಳೆದ 100 ವರ್ಷಗಳಲ್ಲಿ ಇದೇ ಮೊದಲು. ಇದಕ್ಕೂ ಮುನ್ನ 1921ರಲ್ಲಿ ಆಸ್ಟ್ರೇಲಿಯಾದ ಟಾಮಿ ಆಂಡ್ರ್ಯೂಸ್ ಸತತ ಎರಡು ಬಾರಿ ಔಟಾಗಿದ್ದರು.