- Kannada News Photo gallery Cricket photos Rohit sharma buys land in alibaugh in the name of wife Ritika Sajdeh
Rohit Sharma: ಹಳ್ಳಿ ಕಡೆ ಮುಖ ಮಾಡಿದ ರೋಹಿತ್; ಮಡದಿ ಹೆಸರಲ್ಲಿ 9 ಕೋಟಿ ಮೌಲ್ಯದ ಭೂಮಿ ಖರೀದಿಸಿದ ಹಿಟ್ಮ್ಯಾನ್
Rohit Sharma: ರೋಹಿತ್ ಶರ್ಮಾ ಅಲಿಬಾಗ್‌ನಲ್ಲಿ 9 ಕೋಟಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ. ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಹೆಸರಿನಲ್ಲಿ 4 ಎಕರೆ ಜಮೀನು ಖರೀದಿಸಿದ್ದಾರೆ.
Updated on: Dec 16, 2021 | 7:05 PM

ತಮ್ಮ ಬ್ಯಾಟ್ ಮೂಲಕ ಇಡೀ ವಿಶ್ವಕ್ಕೆ ತನ್ನನ್ನು ತಾನು ಪರಿಚಯಿಸಿಕೊಂಡಿರುವ ರೋಹಿತ್ ಶರ್ಮಾ ಹೊಸ ಕೆಲಸದಿಂದ ಸುದ್ದಿಯಾಗಿದ್ದಾರೆ. ರೋಹಿತ್ ಅವರನ್ನು ಟೀಂ ಇಂಡಿಯಾದ ಏಕದಿನ ಮತ್ತು ಟಿ20 ನಾಯಕರನ್ನಾಗಿ ಮಾಡಲಾಗಿದೆ. ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರೂ, ರೋಹಿತ್ ಶರ್ಮಾ ಮೈದಾನದ ಹೊರಗೆ ದೊಡ್ಡ ಸಿಕ್ಸರ್ ಬಾರಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಅಲಿಬಾಗ್‌ನಲ್ಲಿ 9 ಕೋಟಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ. ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಹೆಸರಿನಲ್ಲಿ 4 ಎಕರೆ ಜಮೀನು ಖರೀದಿಸಿದ್ದಾರೆ. ಡಿಸೆಂಬರ್ 14 ರಂದು ಅಲಿಬಾಗ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.

ರೋಹಿತ್ ಶರ್ಮಾ ಅವರು ಅಲಿಬಾಗ್ ನಗರದಿಂದ 20 ಕಿಮೀ ದೂರದಲ್ಲಿರುವ ಸರಳ್ ಮಹಾತ್ರೋಲಿ ಗ್ರಾಮದಲ್ಲಿ ಭೂಮಿ ಖರೀದಿಸಿದ್ದಾರೆ. ಗ್ರಾಮದ ಸರಪಂಚ್ ಅಮಿತ್ ನಾಯಕ್ ಮಾತನಾಡಿ, ರೋಹಿತ್ ಗ್ರಾಮದಲ್ಲಿ 9 ಕೋಟಿಗೆ ಜಮೀನು ಖರೀದಿಸಿದ್ದಾರೆ. ರೋಹಿತ್ ಮೊದಲ ಬಾರಿಗೆ ಈ ಗ್ರಾಮಕ್ಕೆ ಬಂದು ಜಾಗ ವಿಕ್ಷೀಸಿದ್ದರು. ನಂತರ ಅವರಿಗೆ ಈ ಜಾಗ ಇಷ್ಟವಾಗಿತ್ತು. ಇದಾದ ಬಳಿಕ ಕಾಗದ ಪತ್ರಗಳನ್ನು ಪೂರ್ಣಗೊಳಿಸಿದ ರೋಹಿತ್ ಶರ್ಮಾ ಗ್ರಾಮದ ಜಮೀನಿನಲ್ಲಿ ಪೂಜೆಯನ್ನು ಸಹ ಮಾಡಿದರು.

ಅಲಿಬಾಗ್‌ನಲ್ಲಿ ಆಸ್ತಿ ಖರೀದಿಸಿದ ಮೊದಲ ಕ್ರಿಕೆಟಿಗ ರೋಹಿತ್ ಶರ್ಮಾ ಅಲ್ಲ. ಅವರಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಕೂಡ ಅಲಿಬಾಗ್‌ನಲ್ಲಿ ಆಸ್ತಿ ಹೊಂದಿದ್ದಾರೆ.

ರೋಹಿತ್ ಶರ್ಮಾ ಅವರ ಅಭಿಮಾನಿಗಳು ಅವರು ಫಿಟ್ ಆಗಲು ಕಾಯುತ್ತಿದ್ದಾರೆ. ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ರೋಹಿತ್ ಅವರಿಗೆ ಮಂಡಿರಜ್ಜು ಸಮಸ್ಯೆ ಇದೆ. 3 ಪಂದ್ಯಗಳ ಟೆಸ್ಟ್ ಸರಣಿಯ ನಂತರ, ದಕ್ಷಿಣ ಆಫ್ರಿಕಾದಲ್ಲಿ ODI ಸರಣಿಯೂ ಇದೆ, ಇದು ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ಸರಣಿಯಾಗಿದೆ. ಆದರೆ, ಅಷ್ಟರೊಳಗೆ ರೋಹಿತ್ ಶರ್ಮಾ ಫಿಟ್ ಆಗುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.




