PAK Vs WI: 6,6,6,6,6,6! ಪಾಕ್ ಬೌಲರ್​ಗಳನ್ನು ಬೆಂಡೆತ್ತಿದ ನಿಕೋಲಸ್ ಪೂರನ್! ಎದುರಾಳಿಗೆ 207 ರನ್ ಟಾರ್ಗೆಟ್

PAK Vs WI: ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಪಾಕಿಸ್ತಾನಕ್ಕೆ ಹೆಚ್ಚಿನ ತೊಂದರೆ ನೀಡಿದರು. ಪೂರನ್ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು.

TV9 Web
| Updated By: ಪೃಥ್ವಿಶಂಕರ

Updated on: Dec 16, 2021 | 9:00 PM

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್​ಗಳು ಪಾಕ್ ಬೌಲರ್​ಗಳನ್ನು ಸದೆಬಡಿದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ವಿಂಡೀಸ್ ತಂಡ ಮೂರನೇ ಟಿ20ಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 207 ರನ್ ಗಳಿಸಿತ್ತು.

1 / 5
ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಪಾಕಿಸ್ತಾನಕ್ಕೆ ಹೆಚ್ಚಿನ ತೊಂದರೆ ನೀಡಿದರು. ಪೂರನ್ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು.

2 / 5
ಮೊದಲೆರಡು ಟಿ20ಯಲ್ಲಿ ಸೋಲು ಕಂಡಿದ್ದ ಪೂರನ್ ಮೂರನೇ ಪಂದ್ಯದಲ್ಲಿ ತಮ್ಮ ಅಸ್ತಿತ್ವವನ್ನು ತೋರಿದರು. 11ನೇ ಓವರ್‌ನಲ್ಲಿ ಇಫ್ತಿಕರ್ ಅಹ್ಮದ್ ಅವರ ಓವರ್‌ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದರು. ಪೂರನ್ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

3 / 5
ಪೂರನ್‌ಗೆ ಮುನ್ನ ಬ್ರ್ಯಾಂಡನ್ ಕಿಂಗ್ ಮತ್ತು ಶೆಮ್ರಾ ಬ್ರೂಕ್ಸ್ ಕೂಡ ಪಾಕಿಸ್ತಾನದ ಬೌಲರ್‌ಗಳನ್ನು ಥಳಿಸಿದರು. ಪವರ್‌ಪ್ಲೇಯಲ್ಲಿ ಇಬ್ಬರೂ 66 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬ್ರಾಂಡನ್ ಕಿಂಗ್ 21 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದರು. ಬ್ರೂಕ್ಸ್ ಕೂಡ 31 ಎಸೆತಗಳಲ್ಲಿ 49 ರನ್ ಗಳಿಸಿದರು.

4 / 5
ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ODI ಸರಣಿಯನ್ನು ಮುಂದೂಡಲಾಗಿದೆ. ವಾಸ್ತವವಾಗಿ, ವಿಂಡೀಸ್ ತಂಡದ ಐದು ಆಟಗಾರರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಈ ಕಾರಣದಿಂದಾಗಿ ಪಿಸಿಬಿ ಮತ್ತು ವಿಂಡೀಸ್ ಬೋರ್ಡ್ ಈ ಸರಣಿಯನ್ನು ಮುಂದಿನ ವರ್ಷ ಜೂನ್‌ಗೆ ಮುಂದೂಡಿದೆ.

5 / 5
Follow us