- Kannada News Photo gallery Cricket photos Pakistan vs West Indies 3rd T20I Nicholas Pooran smashed six sixes score 64 runs in 37 balls
PAK Vs WI: 6,6,6,6,6,6! ಪಾಕ್ ಬೌಲರ್‌ಗಳನ್ನು ಬೆಂಡೆತ್ತಿದ ನಿಕೋಲಸ್ ಪೂರನ್! ಎದುರಾಳಿಗೆ 207 ರನ್ ಟಾರ್ಗೆಟ್
PAK Vs WI: ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಪಾಕಿಸ್ತಾನಕ್ಕೆ ಹೆಚ್ಚಿನ ತೊಂದರೆ ನೀಡಿದರು. ಪೂರನ್ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು.
Updated on: Dec 16, 2021 | 9:00 PM

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ಗಳು ಪಾಕ್ ಬೌಲರ್‌ಗಳನ್ನು ಸದೆಬಡಿದಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ವಿಂಡೀಸ್ ತಂಡ ಮೂರನೇ ಟಿ20ಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 3 ವಿಕೆಟ್ಗೆ 207 ರನ್ ಗಳಿಸಿತ್ತು.

ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಪಾಕಿಸ್ತಾನಕ್ಕೆ ಹೆಚ್ಚಿನ ತೊಂದರೆ ನೀಡಿದರು. ಪೂರನ್ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು.

ಮೊದಲೆರಡು ಟಿ20ಯಲ್ಲಿ ಸೋಲು ಕಂಡಿದ್ದ ಪೂರನ್ ಮೂರನೇ ಪಂದ್ಯದಲ್ಲಿ ತಮ್ಮ ಅಸ್ತಿತ್ವವನ್ನು ತೋರಿದರು. 11ನೇ ಓವರ್‌ನಲ್ಲಿ ಇಫ್ತಿಕರ್ ಅಹ್ಮದ್ ಅವರ ಓವರ್‌ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದರು. ಪೂರನ್ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

ಪೂರನ್‌ಗೆ ಮುನ್ನ ಬ್ರ್ಯಾಂಡನ್ ಕಿಂಗ್ ಮತ್ತು ಶೆಮ್ರಾ ಬ್ರೂಕ್ಸ್ ಕೂಡ ಪಾಕಿಸ್ತಾನದ ಬೌಲರ್‌ಗಳನ್ನು ಥಳಿಸಿದರು. ಪವರ್‌ಪ್ಲೇಯಲ್ಲಿ ಇಬ್ಬರೂ 66 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬ್ರಾಂಡನ್ ಕಿಂಗ್ 21 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದರು. ಬ್ರೂಕ್ಸ್ ಕೂಡ 31 ಎಸೆತಗಳಲ್ಲಿ 49 ರನ್ ಗಳಿಸಿದರು.

ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ODI ಸರಣಿಯನ್ನು ಮುಂದೂಡಲಾಗಿದೆ. ವಾಸ್ತವವಾಗಿ, ವಿಂಡೀಸ್ ತಂಡದ ಐದು ಆಟಗಾರರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಈ ಕಾರಣದಿಂದಾಗಿ ಪಿಸಿಬಿ ಮತ್ತು ವಿಂಡೀಸ್ ಬೋರ್ಡ್ ಈ ಸರಣಿಯನ್ನು ಮುಂದಿನ ವರ್ಷ ಜೂನ್‌ಗೆ ಮುಂದೂಡಿದೆ.




