Asia Cup 2022: ಏಷ್ಯಾಕಪ್ ಫೈನಲ್​ನಲ್ಲಿ ಕೊಹ್ಲಿ- ರಿಜ್ವಾನ್, ಭುವಿ- ನವಾಜ್ ನಡುವೆ ಜಿದ್ದಾಜಿದ್ದಿನ ಹೋರಾಟ..!

Edited By:

Updated on: Sep 10, 2022 | 9:55 PM

Asia Cup 2022: ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದ ಆಟಗಾರರ ನಡುವೆ ನಡೆಯಲಿದೆ. ಭಾರತ ತಂಡ ಪಂದ್ಯಾವಳಿಯಿಂದ ಹೊರಗುಳಿದಿದ್ದರೂ ಈ ಎರಡು ತಂಡಗಳ ನಡುವಿನ ಫೈಪೋಟಿ ಮುಂದುವರೆಯಲಿದೆ.

1 / 5
 ಏಷ್ಯಾಕಪ್ 2022 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಟೀಂ ಇಂಡಿಯಾ ಸೂಪರ್ 4 ರ ಅಡಚಣೆಯನ್ನು ಜಯಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಏಷ್ಯಾಕಪ್‌ನ ಫೈನಲ್ ತಲುಪಿತು. ಸೆ.11ರಂದು ದುಬೈನಲ್ಲಿ ಇಬ್ಬರ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.

ಏಷ್ಯಾಕಪ್ 2022 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ ಟೀಂ ಇಂಡಿಯಾ ಸೂಪರ್ 4 ರ ಅಡಚಣೆಯನ್ನು ಜಯಿಸಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡ ಏಷ್ಯಾಕಪ್‌ನ ಫೈನಲ್ ತಲುಪಿತು. ಸೆ.11ರಂದು ದುಬೈನಲ್ಲಿ ಇಬ್ಬರ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.

2 / 5

ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳು ಖಂಡಿತವಾಗಿಯೂ ನಿರಾಶೆಗೊಂಡಿದ್ದಾರೆ. ಆದರೆ ಫೈನಲ್‌ನ ರೋಚಕತೆ ಕೊನೆಗೊಂಡಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ದುಬೈನಲ್ಲಿ ನಡೆಯಲಿದೆ.

3 / 5

ಈ ಪಂದ್ಯ ಭಾರತ ಮತ್ತು ಪಾಕಿಸ್ತಾನದ ಆಟಗಾರರ ನಡುವೆ ನಡೆಯಲಿದೆ. ಭಾರತ ತಂಡ ಪಂದ್ಯಾವಳಿಯಿಂದ ಹೊರಗುಳಿದಿದ್ದರೂ ಈ ಎರಡು ತಂಡಗಳ ನಡುವಿನ ಫೈಪೋಟಿ ಮುಂದುವರೆಯಲಿದೆ.

4 / 5

ಮೊದಲ ಜಿದ್ದಾಜಿದ್ದಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ರಿಜ್ವಾನ್ ನಡುವೆ ನಡೆಯಲಿದೆ. ಸದ್ಯಕ್ಕೆ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದ್ದು, ಅವರು ಈ ಏಷ್ಯಾಕಪ್‌ನಲ್ಲಿ 147.59 ಸ್ಟ್ರೈಕ್ ರೇಟ್‌ನಲ್ಲಿ 276 ರನ್ ಗಳಿಸಿದರು. ಅದೇ ಸಮಯದಲ್ಲಿ ರಿಜ್ವಾನ್ 226 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ರಿಜ್ವಾನ್ ಕಣ್ಣು ಕೊಹ್ಲಿಯನ್ನು ಹಿಂದಿಕ್ಕುವುದರ ಮೇಲಿದೆ.

5 / 5

ಮತ್ತೊಂದೆಡೆ ಎರಡನೇ ಫೈಪೋಟಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ನವಾಜ್ ನಡುವೆ ನಡೆಯಲಿದೆ. ಭುವಿ ಅತಿ ಹೆಚ್ಚು ವಿಕೆಟ್ ಕಬಳಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ನವಾಜ್ 8 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಭುವಿಯನ್ನು ಹಿಂದಿಕ್ಕುವದರ ಮೇಲೆ ನವಾಜ್ ಕಣ್ಣಿದೆ.

Published On - 9:55 pm, Sat, 10 September 22

Loading...
Unable to load recommendations.
Follow Us