- Kannada News Photo gallery Cricket photos Asia Cup 2025: 5 IPL Stars Unlikely to Make the Indian Team
Asia Cup 2025: ಐಪಿಎಲ್ನಲ್ಲಿ ಮಿಂಚಿದ ಈ ಐವರಿಗೆ ಭಾರತ ಏಷ್ಯಾಕಪ್ ತಂಡದಲ್ಲಿ ಸ್ಥಾನವಿಲ್ಲ..!
Asia Cup 2025: 2025ರ ಏಷ್ಯಾಕಪ್ಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಲ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ. ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸಾಯಿ ಸುದರ್ಶನ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ದೊರೆಯುವುದು ಕಷ್ಟ ಎನ್ನಲಾಗಿದೆ. ಇದಕ್ಕೆ ಕಾರಣ ತಂಡದಲ್ಲಿ ಈಗಾಗಲೇ ಅನೇಕ ಅನುಭವಿ ಮತ್ತು ಪ್ರತಿಭಾವಂತ ಆಟಗಾರರಿದ್ದಾರೆ.
Updated on: Aug 15, 2025 | 8:44 PM

2025 ರ ಏಷ್ಯಾಕಪ್ ಇದೇ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಎಲ್ಲಾ ಅಭಿಮಾನಿಗಳು ಈ ಟೂರ್ನಮೆಂಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. 2026 ರಲ್ಲಿ ಟಿ20 ವಿಶ್ವಕಪ್ ಇರುವ ಕಾರಣ, ಈ ಬಾರಿಯ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತದೆ. ಈ ಟೂರ್ನಮೆಂಟ್‌ಗೆ ಟೀಂ ಇಂಡಿಯಾವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ಬಿಸಿಸಿಐ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ 2025 ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಈ ಐವರು ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿಲ್ಲ.

2025 ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದು, ಆಡಿದ 13 ಪಂದ್ಯಗಳಲ್ಲಿ 149.72 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಗಳಿಸಿದ್ದಾರೆ. ರಾಹುಲ್ ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲೂ ಆಡುವುದಕ್ಕೆ ಸೈ. ಆದಾಗ್ಯೂ, ಏಷ್ಯಾಕಪ್ಗೆ ರಾಹುಲ್ ಆಯ್ಕೆಯಾಗುವುದಿಲ್ಲ. ಏಕೆಂದರೆ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ವಿಕೆಟ್ ಕೀಪರ್‌ಗಳಾಗಿ ಈಗಾಗಲೇ ತಂಡದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆಡುವ ಯಶಸ್ವಿ ಜೈಸ್ವಾಲ್ ಆಡಿದ 14 ಪಂದ್ಯಗಳಲ್ಲಿ 159.71 ಸ್ಟ್ರೈಕ್ ರೇಟ್‌ನಲ್ಲಿ 559 ರನ್ ಗಳಿಸಿದ್ದರು. ಈ ಮೂಲಕ ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಳನೇ ಆಟಗಾರರಾಗಿದ್ದರು. ಆದಾಗ್ಯೂ, ಕೆಲವು ಸಮಯದಿಂದ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗೆಯೇ ಶುಭ್ಮನ್ ಗಿಲ್ ಅವರನ್ನು ಸಹ ಆರಂಭಿಕ ಸ್ಥಾನಕ್ಕೆ ನೋಡಲಾಗುತ್ತಿದೆ. ಇದು ಮಾತ್ರವಲ್ಲದೆ, ತಂಡಕ್ಕೆ ಆರಂಭಿಕ ಆಟಗಾರನಾಗಿ ಇನ್ನೂ ಹಲವು ಆಯ್ಕೆಗಳಿವೆ. ಯಶಸ್ವಿಗೆ 2025 ರ ಏಷ್ಯಾಕಪ್‌ನಲ್ಲಿ ವಿಶ್ರಾಂತಿ ನೀಡಿ ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿಸಬಹುದು.

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ 650 ರನ್ ಗಳಿಸಿದ್ದಲ್ಲದೆ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಆದಾಗ್ಯೂ, 2025 ರ ಏಷ್ಯಾಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಅನುಮಾನ. ವಾಸ್ತವವಾಗಿ, ಭಾರತದ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಸೇರಿದಂತೆ ಅನೇಕ ಆಟಗಾರರಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಗೆ ಅಯ್ಯರ್ ಅವರನ್ನು ನಿರ್ಲಕ್ಷಿಸಬಹುದು.

ಸಾಯಿ ಸುದರ್ಶನ್ ಕಳೆದ ಐಪಿಎಲ್ನಲ್ಲಿ ಆಡಿದ್ದ 15 ಪಂದ್ಯಗಳಲ್ಲಿ 156.17 ಸ್ಟ್ರೈಕ್ ರೇಟ್‌ನಲ್ಲಿ 759 ರನ್ ಗಳಿಸಿದ್ದರು. ಇದರಲ್ಲಿ ಅವರು ಒಂದು ಶತಕ ಮತ್ತು ಆರು ಅರ್ಧಶತಕಗಳನ್ನು ಗಳಿಸಿದ್ದರು. ಸುದರ್ಶನ್ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ಅವರಾಡುವ ಕ್ರಮಾಂಕಕ್ಕೆ ಈಗಾಗಲೇ ಹಲವು ಆಯ್ಕೆಗಳಿವೆ. ಹೀಗಾಗಿ ಸುದರ್ಶನ್ ತಮ್ಮ ಸರದಿಗಾಗಿ ಕಾಯಬೇಕಾಗುತ್ತದೆ.

ಜಸ್ಪ್ರೀತ್ ಬುಮ್ರಾ ಕೂಡ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಯೇ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ್ದರು. ಆದಾಗ್ಯೂ ಏಷ್ಯಾಕಪ್‌ನಲ್ಲಿ ಅವರಿಗೆ ವಿಶ್ರಾಂತಿ ನೀಡಬಹುದು. ಏಕೆಂದರೆ ಈ ಟೂರ್ನಮೆಂಟ್ ಮುಗಿದ ತಕ್ಷಣ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಬುಮ್ರಾರನ್ನು ಟೆಸ್ಟ್ನಲ್ಲಿ ಆಡಿಸಲು ಬಿಸಿಸಿಐ ಚಿಂತಿಸಿದೆ.




