AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಸೂರ್ಯ ಅಥವಾ ಶುಭ್​ಮನ್; ಏಷ್ಯಾಕಪ್‌ಗೆ ಟೀಂ ಇಂಡಿಯಾ ನಾಯಕ ಯಾರು?

Asia Cup 2025: ಏಷ್ಯಾಕಪ್ 2025 ಸೆಪ್ಟೆಂಬರ್ 9 ರಂದು ಆರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ಅವರ ಆರೋಗ್ಯದ ಸ್ಥಿತಿಯಿಂದಾಗಿ ಭಾರತ ತಂಡದ ನಾಯಕತ್ವದ ಬಗ್ಗೆ ಅನಿಶ್ಚಿತತೆ ಇದೆ. ಶುಭ್ಮನ್ ಗಿಲ್ ಅವರ ಹೆಸರೂ ನಾಯಕತ್ವಕ್ಕಾಗಿ ಪರಿಗಣಿಸಲ್ಪಡುತ್ತಿದೆ. ಬಿಸಿಸಿಐ ಆಗಸ್ಟ್ 19 ಅಥವಾ 20 ರಂದು ತಂಡವನ್ನು ಘೋಷಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ 2026ರ ಟಿ20 ವಿಶ್ವಕಪ್ ವರೆಗೂ ನಾಯಕರಾಗಿರಬಹುದು ಎಂಬ ಸಾಧ್ಯತೆಯೂ ಇದೆ. ಶುಭ್ಮನ್ ಗಿಲ್ ಉಪನಾಯಕನಾಗುವ ಸಾಧ್ಯತೆಯಿದೆ.

ಪೃಥ್ವಿಶಂಕರ
|

Updated on: Aug 14, 2025 | 6:55 PM

Share
2025 ರ ಏಷ್ಯಾಕಪ್ ಇದೇ ಸೆಪ್ಟೆಂಬರ್ 9 ರಂದು ಆರಂಭವಾಗಲಿದೆ. ಈ ಟೂರ್ನಮೆಂಟ್ ಯುಎಇಯಲ್ಲಿ ನಡೆಯುವುದರಿಂದ ಅಭ್ಯಾಸಕ್ಕಾಗಿ ಒಂದು ವಾರ ಮುಂಚಿತವಾಗಿಯೇ ಎಲ್ಲಾ ತಂಡಗಳು ಅಲ್ಲಿಗೆ ತಲುಪಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ವಾರ ಭಾರತ ತಂಡದ ಘೋಷಣೆಯಾಗುವ ಸಾಧ್ಯತೆಗಳಿವೆ. ವರದಿಯ ಪ್ರಕಾರ ಬಿಸಿಸಿಐ, ಆಗಸ್ಟ್ 19 ಅಥವಾ 20 ರಂದು ಏಷ್ಯಾಕಪ್ ಟೂರ್ನಮೆಂಟ್‌ಗಾಗಿ ಟೀಂ ಇಂಡಿಯಾವನ್ನು ಘೋಷಿಸಬಹುದು.

1 / 6
ಆದರೆ ತಂಡವನ್ನು ಪ್ರಕಟಿಸುವ ಮೊದಲೇ ಏಷ್ಯಾಕಪ್‌ನಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಪ್ರಸ್ತುತ, ಭಾರತ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ ಅವರ ಕೈಯಲ್ಲಿದೆ. ಆದರೆ ಪ್ರಸ್ತುತ, ಸೂರ್ಯಕುಮಾರ್ ಯಾದವ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಇನ್ನೂ  ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ, ಕ್ರೀಡಾ ಅಭಿಮಾನಿಗಳ ಮನಸ್ಸಿನಲ್ಲಿ ಗೊಂದಲವಿದೆ.

2 / 6
ಒಂದು ವೇಳೆ ಸೂರ್ಯಕುಮಾರ್ ಯಾದವ್ ಏಷ್ಯಾಕಪ್‌ ವೇಳೆಗೆ ಚೇತರಿಸಿಕೊಳ್ಳದಿದ್ದರೆ, ಆಗ ಆಯ್ಕೆ ಮಂಡಳಿ ಬೇರೊಬ್ಬರಿಗೆ ನಾಯಕತ್ವದ ಪಟ್ಟ ಕಟ್ಟಬೇಕಾಗುತ್ತದೆ. ಸೂರ್ಯಕುಮಾರ್ ಹೊರತುಪಡಿಸಿ ತಂಡದಲ್ಲಿ ಅನುಭವಿಯಾಗಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಆದಾಗ್ಯೂ ನಾಯಕತ್ವ ರೇಸ್​ನಲ್ಲಿ ಶುಭ್​ಮನ್ ಗಿಲ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

3 / 6
ಸದ್ಯದ ಮಾಹಿತಿ ಪ್ರಕಾರ, ಸೂರ್ಯ ಏಷ್ಯಾಕಪ್ ಆಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ 2026 ರ ಟಿ20 ವಿಶ್ವಕಪ್ ವರೆಗೂ ಸೂರ್ಯಕುಮಾರ್ ಯಾದವ್ ಅವರನ್ನೇ ನಾಯಕರನ್ನಾಗಿ ಮುಂದುವರೆಸಲು ಆಯ್ಕೆ ಮಂಡಳಿ ಯೋಚಿಸಿದೆ. ಆದ್ದರಿಂದ ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿರುತ್ತಾರೆ.

4 / 6
ಮತ್ತೊಂದೆಡೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್​ಮನ್ ಗಿಲ್ ಯುಗ ಆರಂಭವಾಗಿದೆ. ಮೊದಲ ಟೆಸ್ಟ್ ಸರಣಿಯಲ್ಲಿಯೇ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಆರಂಭದಲ್ಲಿ, ಅನುಭವದ ಕೊರತೆಯಿಂದಾಗಿ ಅವರ ಆಯ್ಕೆಯ ಬಗ್ಗೆ ಟೀಕೆಗಳು ಕೇಳಿಬಂದವು. ಆದರೆ ಶುಭ್​ಮನ್ ಗಿಲ್ ಬ್ಯಾಟಿಂಗ್ ಮತ್ತು ನಾಯಕತ್ವದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.

5 / 6
2024 ರಿಂದ ಶುಭ್​ಮನ್ ಗಿಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ ಸರಣಿಯ ನಂತರ ಇದೀಗ ಟಿ20 ತಂಡಕ್ಕೆ ಮರಳಲು ಗಿಲ್ ಸಿದ್ಧರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಭವಿಷ್ಯವನ್ನು ಪರಿಗಣಿಸಿದರೆ, ಶುಭ್​ಮನ್ ಗಿಲ್ ಅವರಿಗೆ ಉಪನಾಯಕತ್ವ ನೀಡುವ ಸಾಧ್ಯತೆಯಿದೆ. 2026 ರ ಟಿ20 ವಿಶ್ವಕಪ್ ನಂತರ ಶುಭಮನ್ ಗಿಲ್ ಅವರಿಗೆ ನಾಯಕತ್ವ ನೀಡುವ ಸಾಧ್ಯತೆಯಿದೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ