ಪಾಕಿಸ್ತಾನ್ ವಿರುದ್ಧ ಪ್ರಜ್ವಲಿಸದ ಸೂರ್ಯ..!

Updated on: Sep 06, 2025 | 2:08 PM

Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್​ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್​ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

1 / 5
ಭಾರತ ಮತ್ತು ಪಾಕಿಸ್ತಾನ್ ನಡುವಿನ ಹೈವೋಲ್ಟೇಜ್ ಕದನಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಏಷ್ಯಾಕಪ್ ನ 6ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರುವಾಗಿದೆ. ಅದುವೇ ಸೂರ್ಯಕುಮಾರ್ ಯಾದವ್ ಚಿಂತೆ.

2 / 5
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ರಚಂಡ ಬ್ಯಾಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಪಾಕಿಸ್ತಾನದ ವಿರುದ್ಧವಲ್ಲ. ಅಂದರೆ  ಪಾಕ್ ವಿರುದ್ಧ ಈವರೆಗೆ 5 ಇನಿಂಗ್ಸ್ ಆಡಿದರೂ ಸೂರ್ಯ ಒಮ್ಮೆಯೂ 20 ರನ್ ಗಳಿಸಿಲ್ಲ ಎಂಬುದು ಉಲ್ಲೇಖಾರ್ಹ.

3 / 5
ಪಾಕಿಸ್ತಾನ್ ವಿರುದ್ಧದ 5 ಇನಿಂಗ್ಸ್ ಗಳಿಂದ ಸೂರ್ಯಕುಮಾರ್ ಯಾದವ್ ಈವರೆಗೆ ಕಲೆಹಾಕಿರುವುದು ಕೇವಲ 64 ರನ್ ಗಳು ಮಾತ್ರ. ಈ 64 ರನ್ ಗಳನ್ನು ಕಲೆಹಾಕಲು 54 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇದರ ನಡುವೆ ಅವರು ಗಳಿಸಿದ ಗರಿಷ್ಠ ಸ್ಕೋರ್ ಕೇವಲ 18 ರನ್ ಗಳು ಮಾತ್ರ.

4 / 5
ಇನ್ನು ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ನಿಂದ ಮೂಡಿಬಂದ ಸಿಕ್ಸರ್ ಗಳ ಸಂಖ್ಯೆ ಕೇವಲ ಒಂದು. ಹಾಗೆಯೇ 5 ಇನಿಂಗ್ಸ್ ಗಳಲ್ಲಿ ಕೇವಲ 7 ಫೋರ್ ಗಳನ್ನು ಮಾತ್ರ ಬಾರಿಸಲು ಯಶಸ್ವಿಯಾಗಿದ್ದಾರೆ.

5 / 5
ಅಂದರೆ ಪಾಕಿಸ್ತಾನ್ ವಿರುದ್ಧ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ ರೇಟ್ 118.5 ಅಷ್ಟೇ. ಇನ್ನು ಈ ಸ್ಟ್ರೈಕ್ ರೇಟ್ ನಲ್ಲಿ 12.80 ಅವರೇಜ್ ನಲ್ಲಿ ಕೇವಲ 64 ರನ್ ಮಾತ್ರ ಗಳಿಸಿದ್ದಾರೆ. ಇದೀಗ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಪಾಕ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಅವರು ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.